2:53 PM Saturday2 - May 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್…

ಇತ್ತೀಚಿನ ಸುದ್ದಿ

ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವ ಧನ ಕನಿಷ್ಠ ಪಕ್ಷ 5 ಸಾವಿರಕ್ಕೆ ಹೆಚ್ಚಿಸಿ: ಶಾಸಕ ಮಂಜುನಾಥ ಭಂಡಾರಿ ಒತ್ತಾಯ

19/12/2022, 20:33

ಮಂಗಳೂರು(reporterkarnataka.com): ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಠ ಪಕ್ಷ 5 ಸಾವಿರಕ್ಕೆ ಹೆಚ್ಚಿಸಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.

ಕಳೆದ ಎರಡು ಅಧಿವೇಶನದಲ್ಲಿ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಟ ಪಕ್ಷ ತಿಂಗಳಿಗೆ 10 ಸಾವಿರ ರೂಪಾಯಿ ಹೆಚ್ಚಿಸಬೇಕು ಹಾಗೂ ಕೇರಳ ಮಾದರಿಯ ಆಡಳಿತವನ್ನು ಅನುಸರಿಸಬೇಕೆಂಬುದರ ಬಗ್ಗೆ ನಾನು ವಿಧಾನ ಪರಿಷತ್ತಿನಲ್ಲಿ ಸುರ್ಧೀಘವಾಗಿ ಚರ್ಚೆ ನಡೆಸಿದ್ದೆ. ಆದರೆ ರಾಜ್ಯ ಸರ್ಕಾರ ಇಂದು ಗೌರವಧನವನ್ನು ಕೇವಲ ರೂಪಾಯಿ 1 ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಿದೆ.

ಕೊನೆಯ ಪಕ್ಷ 5 ಸಾವಿರ ರೂಪಾಯಿ ಹೆಚ್ಚಿಸುವರೆಂಬ ಆಶಾ ಭಾವನೆ ನನ್ನಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಪಂಚಾಯತ್‌ನ ಚುನಾಯಿತ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸುವವರಾಗಿರುತ್ತಾರೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಿಸಲಾತಿ ಇರುವುದರಿಂದ ಮಹಿಳೆಯರು ಮತ್ತು ದುರ್ಬಲ ವರ್ಗದವರು ಚುನಾಯಿತ ಪ್ರತಿನಿಧಿಗಳಾಗಿದ್ದು ಅವರ ದೈನಂದಿನ ಜೀವನ ನಡೆಸಲು ಆರ್ಥಿಕವಾಗಿ ಹಿಂದುಳಿದವರಾಗಿರುತ್ತಾರೆ.

ಆದುದರಿಂದ ಕನಿಷ್ಟ ಪಕ್ಷ 5 ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸಿದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಈ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬಹುದು ಎಂಬುದು ನನ್ನ ಭಾವನೆ.

ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಗೌರವಧನ ಹೆಚ್ಚಳದ ಬಗ್ಗೆ ನಮ್ಮ ಸಂಘಟಿತ ಹೋರಾಟವು ಇನ್ನೂ ಮುಂದುವರಿಯುತ್ತದೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು