ಇತ್ತೀಚಿನ ಸುದ್ದಿ
2.95 ಕೋಟಿ ವೆಚ್ಚದಲ್ಲಿ ದೇರೆಬೈಲ್ ಪೂರ್ವ ವಾರ್ಡಿನ ರಾಜ ಕಾಲುವೆ, ರಸ್ತೆ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ
16/12/2022, 20:44

ಸುರತ್ಕಲ್(reporterkarnataka.com): ಸುಮಾರು 2.95 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 23ನೇ ದೇರೆಬೈಲ್ ಪೂರ್ವ ವಾರ್ಡಿನ ರಾಜ ಕಾಲುವೆಯ ಅಭಿವೃದ್ಧಿ ಕಾಮಗಾರಿ, ರಸ್ತೆ ಅಭಿವೃದ್ಧಿ, ಮುಖ್ಯ ರಸ್ತೆಗೆ ಕಿರುಸೇತುವೆ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಪಾಲಿಕೆ ಸ್ಥಳೀಯ ಸದಸ್ಯೆ ರಂಜನಿ ಕೋಟ್ಯಾನ್, ಶಕ್ತಿ ಕೇಂದ್ರ ಪ್ರಮುಖರಾದ ರಾಘವೇಂದ್ರ ಭಟ್, ವಸಂತ್, ಅಧ್ಯಕ್ಷರಾದ ನಾರಾಯಣ ಕಂಜರ್ಪಣೆ, ಶಕ್ತಿಕೇಂದ್ರ ಸಹ ಪ್ರಮುಖ ಗಣೇಶ್ ಕುಮಾರ್ ಎಂ. ಎಲ್, . ದಿನೇಶ್. ಬೂತ್ ಅಧ್ಯಕ್ಷರಾದ ದಿನೇಶ್ ಶೆಣೈ, ಗಣೇಶ್, ಜಯಂತ್, ಬೂತ್ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಉಮಾ ಕೋಟ್ಯಾನ್,ಪ್ರಮುಖರಾದ ಕಿರಣ್ ಕುಮಾರ್, ಜಿತೇಶ್ ದೇವಾಡಿಗ, ವಿಮಲಾಕ್ಷಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.