1:06 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಬೆಂಗಳೂರು ಚಿತ್ರಕಲಾ ಪರಿಷತ್‌ ನಲ್ಲಿ ಕರಕುಶಲ ವಸ್ತುಗಳ ಮಾರಾಟ ಮೇಳ: ನಟಿ ಕಾರುಣ್ಯ ರಾಮ್‌ ಚಾಲನೆ

16/12/2022, 20:35

ಬೆಂಗಳೂರು(reporterkarnataka.com): ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ದ ಸೊಕ್ ‘(ಮಾರ್ಕೆಟ್) ಅನ್ನು ಆಯೋಜಿಸಿದೆ.

ಡಿಸೆಂಬರ್ 16ರಿಂದ ಡಿಸೆಂಬರ್ 25ರವರೆಗೆ ನಡೆಯಲಿರುವ ಈ ಕರ ಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿ ಕಾರುಣ್ಯ ರಾಮ್, ಗ್ರಿಷ್ಮಾ ಗೌಡ ಚಾಲನೆ ನೀಡಿದರು. ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಅವರು ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟಿ ಕಾರುಣ್ಯ ರಾಮ್* ‘ಸೊಕ್ ಮಾರುಕಟ್ಟೆ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಅದು ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಈ ಮೇಳವನ್ನು ಆಯೋಜಿಸಿರುವುದು ಬಹಳ ಖುಷಿ ನೀಡಿದೆ. ಇಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಮಳಿಗೆಗಳಿವೆ. ಪ್ರತಿಯೊಂದು ವಸ್ತು ಅದ್ಭುತವಾಗಿದೆ ಹಾಗೂ ವಿಭಿನ್ನವಾಗಿದೆ. ಅದರಲ್ಲೂ ನನಗೆ ಮುಖ್ಯವಾಗಿ ಲೈಟ್ ಬಣ್ಣದ ಕಾಟನ್, ಕಲಂಕರಿ, ಆಭರಣಗಳು, ಪೇಂಟಿಂಗ್ ಗಳು ಇಷ್ಟವಾಗುತ್ತವೆ. ಮನೆಯ ಅಲಂಕಾರಕ್ಕೆ ಬೇಕಾದ ಎಲ್ಲಾ ವಸ್ತುಗಳು ಇಲ್ಲಿವೆ. ಮಹಿಳೆಯರು ಹಾಗೂ ಕಲಾವಿದರು ಇಷ್ಟಪಡುವ ಸಾಕಷ್ಟು ವಸ್ತುಗಳಿವೆ. ತಯಾರಿಸಿದವರೇ ನೇರವಾಗಿ ವಸ್ತುಗಳನ್ನು ಮಾರುವುದರಿಂದ ಮಧ್ಯವರ್ತಿಗಳ ಕಾಟವಿಲ್ಲ. ಹಾಗಾಗಿ ದರಗಳು ವಿಪರೀತ ಹೆಚ್ಚಿಲ್ಲ. ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಿ ನಿಮಗಿಷ್ಟದ ವಸ್ತುಗಳನ್ನು ಕೊಳ್ಳಿ’ ಎಂದು ನಟಿ ಕಾರುಣ್ಯ ರಾಮ್ ಖುಷಿ ಹಂಚಿಕೊಂಡರು.

ಇನ್ನು ಈ ಮೇಳದ ಕುರಿತು ಮಾತನಾಡಿದ ನಟಿ ಗ್ರಿಷ್ಮಾ ಗೌಡ* ‘ಹತ್ತು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಎಲ್ಲಾ ಬಣ್ಣಗಳು ಮೇಳೈಸಿವೆ. ಗ್ರಾಹಕರಿಗೆ ಇಷ್ಟವಾಗುವ ಹಲವು ವಸ್ತುಗಳು ಇಲ್ಲಿವೆ. ಅದರಲ್ಲೂ ಮಹಿಳೆಯರು ವಿಶೇಷವಾಗಿ ಇಷ್ಟಪಡುವ ಹಲವು ವಿನ್ಯಾಸದ ಬ್ಯಾಗ್ ಗಳು, ಕಾಟನ್ ಸೀರೆಗಳು, ಆಧುನಿಕ ಶೈಲಿಯ ಆಭರಣಗಳು ಈ ಮೇಳದಲ್ಲಿದೆ. ಪ್ರತಿಯೊಬ್ಬರೂ ಬಂದು ಇದರ ಸದುಪಯೋಗ ಪಡೆದುಕೊಳ್ಳಿ’ ಎಂದು ಮನವಿ ಮಾಡಿದರು.

‘ದ ಸೊಕ್’ ಮಾರ್ಕೆಟ್ ಆರ್ಟ್ಸ್ ಆಂಡ್ ಕ್ರಾಫ್ಟ್ ಮೇಳವು ಸಾರ್ವಜನಿಕರಿಗೆ ಸ್ಥಳೀಯ ಕಲಾವಿದರನ್ನು ಬೆಂಬಲಿಸಲು ಹಾಗೂ ವಿಭಿನ್ನ ವಸ್ತುಗಳನ್ನು ಹುಡುಕಲು ಒಂದು ಉತ್ತಮ ಅವಕಾಶವಾಗಿದೆ.10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಅಲಂಕಾರಿಕ ವಸ್ತು, ವೈವಿದ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿವೆ ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಉಡುಪು ಹಾಗೂ ಆಭರಣಗಳನ್ನು ಕೊಳ್ಳಲು ಈ ಮೇಳಕ್ಕೆ ತಪ್ಪದೇ ಭೇಟಿ ನೀಡಿ.

ಸ್ಥಳ: ಚಿತ್ರಕಲಾ ಪರಿಷತ್
ದಿನಾಂಕ: ಡಿಸೆಂಬರ್ 16ರಿಂದ ಡಿಸೆಂಬರ್ 25ರ ವರೆಗೆ
ಸಮಯ-ಬೆಳಿಗ್ಗೆ 11.30
ಹೆಚ್ಚಿನ ಮಾಹಿತಿಗೆ: 91 6364 685 716.

ಇತ್ತೀಚಿನ ಸುದ್ದಿ

ಜಾಹೀರಾತು