7:37 AM Saturday11 - April 2026
ಬ್ರೇಕಿಂಗ್ ನ್ಯೂಸ್
3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ: ಚಂದ್ರದ್ರೋಣ ಪರ್ವತದ 2 ಸಾವಿರ… ಪ್ರಧಾನಿ‌ ಮೋದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ರವಾನೆ: ವಿದೇಶಿ ಏಜೆನ್ಸಿಗಳ ಜತೆ ಸಂಪರ್ಕ;… ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ… ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ ಫೇಲಾದವರಿಗೆ ಇನ್ನೊಂದು ಚಾನ್ಸ್: ದ್ವಿತೀಯ ಪಿಯುಸಿ ಪರೀಕ್ಷೆ-2 ದಿನಾಂಕ ಪ್ರಕಟ Suratkal | ಅಮಾನತುಗೊಂಡಿದ್ದ ಎನ್‌ಐಟಿಕೆ ಕುಲಸಚಿವ ರವೀಂದ್ರನಾಥ್ ಸೇವೆಯಿಂದ ವಜಾ ಪತಿಯ ಶವದ ಜತೆ 10 ದಿನ ಕಳೆದ ಪತ್ನಿ: ಮಲೆನಾಡು ಚಿಕ್ಕಮಗಳೂರಿನಲ್ಲಿ ವಿಚಿತ್ರ… ಕಾಂಗ್ರೆಸ್‌ನಿಂದ ಕೋಟ್ಯಂತರ ರೂಪಾಯಿ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ… ದಾವಣಗೆರೆ ದಕ್ಷಿಣ: ಮತಗಟ್ಟೆ ಬಳಿ ಟೇಬಲ್ ವಿಚಾರವಾಗಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ಜಟಾಪಟಿ

ಇತ್ತೀಚಿನ ಸುದ್ದಿ

ಕೊಟ್ಟಿಗೆಹಾರ ಬಲ್ಲಾಳರಾಯನ ದುರ್ಗ: ಪ್ರವಾಸಿಗರ ಸ್ವರ್ಗ; ಟ್ರಕ್ಕಿಂಗ್ ಪ್ರಿಯರಿಗೆ ಫೆವರೇಟ್ ಸ್ಪಾಟ್

15/12/2022, 20:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.ಕಾಂ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನ ದುರ್ಗದ ಕೋಟೆ ಹಚ್ಚ ಹಸಿರಿನ ಪ್ರಕೃತಿಯ ನಡುವಿನ ಸುಂದರ ಹಾಗೂ ಚಾರಿತ್ರಿಕ ರಮ್ಯ ತಾಣ. ಪ್ರತಿ ಪ್ರವಾಸಿಗರಿಗೂ ಸವಾಲೆಸೆಯೋ ದುರ್ಗಮ ತಾಣ. ಇಲ್ಲಿನ ಪ್ರಾಚೀನ ಗತವೈಭವ ವಿಶೇಷತೆ ಕಳೆದುಕೊಂಡಿದ್ರೂ ನಿಸರ್ಗದ ಚೆಲುವು ಮಾತ್ರ ಮಾಸಿಲ್ಲ. ಪ್ರಕೃತಿ ಹಾಗೂ ಟ್ರಕ್ಕಿಂಗ್ ಪ್ರಿಯರನ್ನ ಬಾ ಎಂದು ಕೈಬೀಸಿ ಕರೆಯುತ್ತಿರೋ ಇಲ್ಲಿನ ಸೌಂದರ್ಯ ಪ್ರವಾಸಿಗರು, ಟ್ರಕ್ಕಿಂಗ್ ಪ್ರಿಯರಿಗೆ ಹಾಟ್ ಫೆವರೇಟ್ ಸ್ಪಾಟ್. ಆ ಸುಂದರ ರಮಣೀಯ ತಾಣವೇ ಬಲ್ಲಾಳರಾಯನ ದುರ್ಗದ ಕೋಟೆ.


*ಪ್ರವಾಸಿಗರಿಗೆ ಸವಾಲೆಸೆಯೋ ನಿಸರ್ಗದ ಮಡಿಲು:*
ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣೋ ನೈಜ ಸ್ವರ್ಗದ ಚೆಲುವು. ದಿಟ್ಟಿಸಿ ನೋಡುದ್ರೆ ಕೊನೆಯೇ ಇಲ್ಲವೆಂಬಂತೆ ಕಾಣೋ ಕೋಟೆಯ ಬೃಹದಾಕಾರದ ಗೋಡೆ. ಪ್ರತೀ ಹೆಜ್ಜೆಯಲ್ಲೂ ಪ್ರವಾಸಿಗರಿಗೆ ಸವಾಲೆಸೆಯೋ ನಿಸರ್ಗದ ಮಡಿಲು. ಹೌದು….. ಇದು ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಬಲ್ಲಾಳರಾಯನ ದುರ್ಗದ ಕೋಟೆ. ಮೂಡಿಗೆರೆ ತಾಲೂಕಿನಲ್ಲಿದೆ. ರುದ್ರ ರಮಣೀಯವಾಗಿ ಕಾಣುವ ಈ ತಾಣವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರ್ತಾರೆ. ಅದ್ರಲ್ಲು ಟ್ರಕ್ಕಿಂಗ್ ಪ್ರಿಯರಿಗಂತೂ ಬಲ್ಲರಾಯನ ಕೋಟೆ ಹತ್ತೋದಂದ್ರೆ ಎಲ್ಲಿಲ್ಲದ ಉತ್ಸಾಹ ಹಾಗೂ ಸವಾಲು. ದುರ್ಗದಹಳ್ಳಿಯ ಎಂಡ್ ಪಾಯಿಂಟ್ನಲ್ಲಿ ವಾಹನ ನಿಲ್ಲಿಸಿ ಅರ್ಧ ಕಿ.ಮೀ. ಸಾಗಿದ್ರೆ ಅಬ್ಬಾ… ಅನ್ನೋ ವೀವ್ ಪಾಯಿಂಟ್ ಕಣ್ಣಿಗೆ ಅಪ್ಪಳಿಸುತ್ತೆ. ಈ ಜಾಗದಲ್ಲಿ ನಿಂತು ನೋಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಅನ್ಸತ್ತೆ. ಸುತ್ತಲಿನ ಹಚ್ಚ ಹಸಿರಿನ ವನರಾಶಿ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತೆ. ಇಲ್ಲಿಗೆ ಬರೋ ಪ್ರವಾಸಿಗ್ರು ಬಗೆಬಗೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ನಿಸರ್ಗದ ಮಡಿಲಲ್ಲಿ ಕುಣಿದು ಕುಪ್ಪಳಿಸುತ್ತಾರೆ.


*ಗತ ವೈಭವ ಸಾರುವ ಬೃಹದಾಕಾರವಾದ ಗೋಡೆಗಳು:*
ಒಂದನೇ ಬಲ್ಲಾಳರಾಯ, ರಕ್ಷಣಾ ಕೋಟೆಯನ್ನಾಗಿ ಈ ಕೋಟೆ ರಚಿಸಿದ್ದನೆಂಬ ಐತಿಹ್ಯವಿದೆ. ಗತ ವೈಭವವನ್ನ ಸಾರುವ ಕಲ್ಲಿನಿಂದ ನಿರ್ಮಾಣವಾಗಿದ್ದ ಬೃಹದಾಕಾರವಾದ ಗೋಡೆಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ. ಕಣ್ಣು ಹಾಯಿಸಿದಷ್ಟು ದೂರ ಗೋಚರಿಸೋ ಹಸಿರ ಪರ್ವತ ರಾಶಿ ಪ್ರವಾಸಿಗರ ಮನಸೂರೆಗೊಳಿಸೋದ್ರ ಜೊತೆ, ಇಲ್ಲಿನ ಪ್ರಪಾತ ಗಟ್ಟಿ ಗುಂಡಿಗೆಯನ್ನು ಒಮ್ಮೆ ನಡುಗಿಸುತ್ತೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನ ವರ್ಣಿಸೋಕೆ ಪದಗಳೇ ಸಾಲದು. ಸುತ್ತಲಿನ ಪರ್ವತಗಳು ನೋಡುಗರನ್ನ ಆಕರ್ಷಿಸಿದ್ರೆ, ಪರ್ವತಗಳ ನಡುವಿನ ಮಂಜು ಮುಸುಕಿದ ನೋಟ ನೋಡುಗರನ್ನ ನಿಬ್ಬೆರಗುಗೊಳಿಸುತ್ತೆ.


ವರ್ಷ ಪೂರ್ತಿ ಧುಮ್ಮಿಕ್ಕೋ ಇಲ್ಲಿನ ರಾಣಿ ಝರಿಯನ್ನ ನೋಡೋದೆ ಪ್ರವಾಸಿಗರಿಗೆ ಎಲ್ಲಿಲ್ಲದ ಖುಷಿ. ಒಟ್ಟಾರೆ, ಬಲ್ಲಾರಾಯನ ಕೋಟೆಯ ವೀವ್ ಪಾಯಿಂಟಾಗಿರೋ ರಾಣಿ ಝರಿ ನೋಟ ಒಂದೊಂದು ಧಿಕ್ಕಲ್ಲಿ ಒಂದೊಂದು ರೀತಿ ಮನೋಜ್ಞವಾಗಿ ಕಾಣ್ತಿದೆ. ಮಳೆಗಾಲದ ಮಂಜು ರಾಣಿ ಝರಿಗೆ ಮುತ್ತಿಕ್ಕುತ್ತಿದ್ದರೆ ನೋಡುಗನ ಕಣ್ಣಿಗೆ ಹಬ್ಬ. ಆದ್ರೆ, ಬೇಸಿಗೆಯಲ್ಲಿ ಈ ರಾಣಿಝರಿಯ ನೋಟ ಪ್ರವಾಸಿಗರ ಎದೆಯನ್ನ ಝಲ್ ಎನಿಸುತ್ತೆ. ಅದೇನೆ ಇದ್ರು, ಇಲ್ಲಿನ ಟ್ರಕ್ಕಿಂಗ್, ಪ್ರಕೃತಿ ಸೌಂದರ್ಯ ಎಲ್ಲವೂ ಅದ್ಭುತವೇ ಸರಿ.

ಇತ್ತೀಚಿನ ಸುದ್ದಿ

ಜಾಹೀರಾತು