ಇತ್ತೀಚಿನ ಸುದ್ದಿ
ಮಂಗಳೂರು ಉತ್ತರ ಕ್ಷೇತ್ರ: ರಾಜ್ಯ ಸರ💐ಕಾರದ ‘ನಮ್ಮ ಕ್ಲಿನಿಕ್’ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ
14/12/2022, 22:38

ಸುರತ್ಕಲ್(reporterkarnataka.com): ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಮೂರು ಕಡೆ ರಾಜ್ಯ ಸರಕಾರದ ನಮ್ಮ ಕ್ಲಿನಿಕ್” ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ಶಾಸಕ ಡಾ. ಭರತ್ ಶೆಟ್ಟಿ ವೈ. ನೆರವೇರಿಸಿದರು.
ಅವರು ಪಚ್ಚನಾಡಿಯಲ್ಲಿ ನೂತನ ನಮ್ಮ ಕ್ಲಿನಿಕ್ ಕೇಂದ್ರವನ್ನು
ಉದ್ಘಾಟಿಸಿ, ಮೀನಕಳಿಯ, ಮರಕಡ ಸಹಿತ ಮೂರು ಕಡೆ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ.
ಪಚ್ಚನಾಡಿ ಸುತ್ತಮುತ್ತಲಿನ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಶಕ್ತಿನಗರ ಇಲ್ಲವೇ ಬೊಂದೆಲ್ ಕೇಂದ್ರವನ್ನು ಅವಲಂಬಿಸಿದ್ದರು.
ಇದೀಗ ಈ ಸಮಸ್ಯೆ ತಪ್ಪಿದಂತಾಗಿದೆ.
ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಇಲ್ಲಿ ತಪಾಸಣೆ, ರಕ್ತ ತಪಾಸಣೆ, ದಂತ, ಕಣ್ಣು, ಮಹಿಳಾ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ರಘು ಸಾಲ್ಯಾನ್, ಪಾಲಿಕೆ ಸದಸ್ಯೆ ಸಂಗೀತ ರವೀಂದ್ರ , ವೈದ್ಯಾಧಿಕಾರಿ ಡಾ. ರಾಜೇಶ್, ನಮ್ಮ ಕ್ಲಿನಿಕ್ ನ ನೂತನ ವೈದ್ಯಾಧಿಕಾರಿ ರಾಜೇಶ್ ಚಂದ್ರ ಬಿಎಸ್, ಡಾ.ಚಿರಾಗ್, ಡಾ. ಅಭಿಷೇಕ್, ಆರೋಗ್ಯ ಇಲಾಖೆಯ ಸುದರ್ಶನ್, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ ,ಪೂಜಾ ಪೈ, ಪ್ರಶಾಂತ್ ಪೈ ಮತ್ತಿತರರು ಉಪಸ್ಥಿತರಿದ್ದರು.