ಇತ್ತೀಚಿನ ಸುದ್ದಿ
ಫೋಟೋ ಜರ್ನಲಿಸ್ಟ್ ದಯಾ ಕುಕ್ಕಾಜೆಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
13/12/2022, 22:41

ಪುತ್ತೂರು(reporterkarnataka.com): ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಫರ್ಮ್ ಇನ್ನೋವೈಜ್ ಆರ್ಟ್ಸ್ ಆಂಡ್ ಕಲ್ಟರ್ ಸಂಸ್ಥೆ ಆಯೋಜಿಸಿದ್ದ 2022ರ ಜಾಗತಿಕ ಛಾಯಾಗ್ರಹಣ ಸ್ಪರ್ಧೆಯ ಸೀಸನ್-3ರಲ್ಲಿ ಮಂಗಳೂರಿನ ಖ್ಯಾತ ಫೋಟೋ ಜರ್ನಲಿಸ್ಟ್ ದಯಾನಂದ ಕುಕ್ಕಾಜೆ ‘ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ’ ಪಡೆದಿದ್ದಾರೆ.
ದಯಾನಂದ ಕುಕ್ಕಾಜೆ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗಿದೆ. ಈ ಹಿಂದೆ ಅವರು ಅತ್ಯುತ್ತಮ ಕ್ಯಾಂಡಿಡ್ ಆಕ್ಷನ್ ಛಾಯಾಗ್ರಹಣ ಪ್ರಶಸ್ತಿ ಮತ್ತು ಅತ್ಯುತ್ತಮ ಕ್ಯಾಂಡಿಡ್ ಛಾಯಾಗ್ರಹಣ ಪ್ರಶಸ್ತಿ ಪಡೆದಿದ್ದರು. ಗ್ಲೋಬಲ್ ಫೋಟೋಗ್ರಫಿ ಕಾಂಟೆಸ್ಟ್ 2022 ರ ಸೀಸನ್-3 ನ್ನು ಭಾರತದ ಛಾಯಾಗ್ರಾಹಕರು ಮತ್ತು ಹಲವಾರು ದೇಶಗಳ ಎನ್‌ಆರ್‌ಐಗಳ ನಡುವೆ ನಡೆಸಲಾಗಿತ್ತು.
ಕುಕ್ಕಾಜೆ ಅವರು 12ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದು ಅವರು ತಮ್ಮ ಛಾಯಾಗ್ರಹಣ ಕೌಶಲ್ಯವನ್ನು ಪ್ರದರ್ಶಿಸಲು ಆರಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ಮಾಣಿಲ ಗ್ರಾಮದ ಕುಕ್ಕಾಜೆ ನಿವಾಸಿಯಾಗಿರುವ ದಯಾರವರು ಡೈಜಿವರ್ಲ್ಡ್ ವಾಹಿನಿಯ ಪ್ರಮುಖ ಛಾಯಾಗ್ರಾಹಕರಾಗಿದ್ದಾರೆ.