ಇತ್ತೀಚಿನ ಸುದ್ದಿ
ಕೋಟೆದ ಬಬ್ಬು ದೈವಸ್ಥಾನದ ಗೋಪುರ ಪುನರ್ ನಿರ್ಮಾಣ: ಶಾಸಕ ಡಾ. ಭರತ್ ಶೆಟ್ಟಿ ವಿಜ್ಞಾಪನಾ ಪತ್ರ ಬಿಡುಗಡೆ
12/12/2022, 20:37

ಸುರತ್ಕಲ್(reporterkarnataka.com): ಕುಳಾಯಿಯ ಪುರಾತನ ಕೋಟೆದ ಬಬ್ಬು ದೈವಸ್ಥಾನದ ಗೋಪುರ ಪುನರ್ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾರ್ಯಗಳ “ವಿಜ್ಞಾಪನಾ ಪತ್ರ”ವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ದೈವಸ್ಥಾನದ ವಠಾರದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಸರಕಾರದ ವತಿಯಿಂದ ಹಾಗೂ ತನ್ನ ವೈಯಕ್ತಿಕ ನೆಲೆಯಿಂದಲೂ ಸಾಧ್ಯವಾದಷ್ಟು ಸಹಾಯವನ್ನು ಈ ಅಭಿವೃದ್ಧಿ ಕಾರ್ಯಗಳಿಗೆ ಒದಗಿಸಿಕೊಡುವುದಾಗಿ ತಿಳಿಸಿದರು.
ದೈವಸ್ಥಾನಕ್ಕೆ ಸಂಬಂಧ ಪಟ್ಟ ಬಗ್ಗುಂಡಿ ಕೆರೆ ಮತ್ತು ದೈವಸ್ಥಾನದ ಹತ್ತಿರ ಇರುವ ಕೆರೆ ಅಭಿವೃದ್ಧಿಯನ್ನೂ ಸರಕಾರ ಮತ್ತು ದಾನಿಗಳ ಸಹಕಾರದೊಂದಿಗೆ ಕೈಗೆತ್ತಿಕೊಳ್ಳುವುದಾಗಿ ನುಡಿದರು.
ದೈವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷರಾದ ಯೋಗೀಶ್ ಕುಳಾಯಿ, ಆಡಳಿತ ಮೊಕ್ತೇಸರರಾದ ಪಠೇಲ್ ಶಂಕರ್ ರೈ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಕಾರ್ಪೊರೇಟರ್ ಗಳಾದ ವೇದಾವತಿ, ವರುಣ್ ಚೌಟ, ಉದ್ಯಮಿ ರವಿರಾಜ್, ಕುಳಾಯಿಗುತ್ತು ಚರಣ್ ಶೆಟ್ಟಿ,
ಯೋಗೀಶ್ ಸನಿಲ್ ಕುಳಾಯಿ, ದೈವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್, ಗೀತಾ ಯಾದವ್ ಹಾಗೂ ಗಣ್ಯರು ಉಪಸ್ಥಿತರಿದ್ದರು.