ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ಸಂಸ್ಥೆ: ನವೆಂಬರ್ ತಿಂಗಳ ಸಹಾಯಧನ ಮಂಚಕಲ್ ನ ಪ್ರಶಾಂತಗೆ ಹಸ್ತಾಂತರ
06/12/2022, 12:21

ಮೂಡುಬಿದರೆ(reporterkarnataka.com): ಜನ ಸೇವೆಯೇ ಜನಾರ್ನಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನಾ ಸಂಸ್ಥೆ ನವೆಂಬರ್ ತಿಂಗಳ ಸಹಾಯಧನವನ್ನು ಉಡುಪಿ ಶಿರ್ವ ಮಂಚಕಲ್ ನಿವಾಸಿಯಾದ ಪ್ರಶಾಂತ ಅವರಿಗೆ ಹಸ್ತಾಂತರಿಸಿದೆ.
36ರ ಹರೆಯದ ಪ್ರಶಾಂತ್ ಅವರ ಬಲ ಕಾಲಿಗೆ ವಿಷ ಜಂತು ಕಚ್ಚಿ ಕಾಲು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದು ಅವರ ಚಿಕಿತ್ಸೆ ಗೆ ಧನ ಸಹಾಯ ನೀಡಲಾಯಿತು. ಇದುವರೆಗೆ ಆರದಿರಲಿ ಬದುಕು ಆರಾಧನ ತಂಡ 16.55 ಲಕ್ಷ ನೆರವು ನೀಡಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಸಂಸ್ಥೆಯ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ, ಡಾ.ನಾಗರಾಜ ಶೆಟ್ಟಿ ಅಂಬೂರಿ, ದೇವಿ ಪ್ರಸಾದ್, ದೀನ್ ರಾಜ್, ಕೆ.ಅಭಿಷೇಕ್ ಶೆಟ್ಟಿ ಐಕಳ, ಬಸವ ರಾಜ್ ಮಂತ್ರಿ, ಶ್ರೀನಿವಾಸ ಬಜಪೆ, ಪ್ರಸಾದ್ ನಾಯಕ್ ಉಡುಪಿ, ಮಂದಾರ ರಾಜೇಶ್ ಭಟ್, ನವೀನ್ ಪುತ್ತೂರು. ಗಣೇಶ್ ಪೈ, ವಿವೇಕ್ ಪ್ರಭು, ಧನಂಜಯ ಶೆಟ್ಟಿ, ಪ್ರವೀಣ್ ಶೆಟ್ಟಿ, ಲಿಲೇಶ್ ಶೆಟ್ಟಿ ಗಾರ್, ರಂಗನಾಥ್ ರಾವ್ ಪಕ್ಷಿಕೆರೆ, ದಿನೇಶ್ ಸಿದ್ದಕಟ್ಟೆ , ನಿಲೇಶ್ ಕಟೀಲು, ಪ್ರಭಾಕರ ಮಂಗಳೂರು, ದಿವಾಕರ ಪೂಜಾರಿ, ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.