ಇತ್ತೀಚಿನ ಸುದ್ದಿ
ಕಾಟಿಪಳ್ಳ ಕೋಡ್ದಬ್ಬು ದೈವಸ್ಥಾನದ ಬಳಿ ಇಂಟರ್ ಲಾಕ್ ವ್ಯವಸ್ಥೆ: ಶಾಸಕ ಡಾ. ಭರತ್ ಶೆಟ್ಟಿ ಲೋಕಾರ್ಪಣೆ
04/12/2022, 15:08

ಸುರತ್ಕಲ್ (reporterkarnataka.com): ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಾಸಕರ ವಿಶೇಷ ಅನುದಾನದಿಂದ ಸುಮಾರು 6.5 ಲಕ್ಷ ರೂ ವೆಚ್ಚದಲ್ಲಿ ಕಾಟಿಪಳ್ಳ 3ನೇ ವಾರ್ಡಿನ ಕೋಡ್ದಬ್ಬು ದೈವಸ್ಥಾನದ ಬಳಿ ಅಳವಡಿಸಲಾದ ಇಂಟರ್ ಲಾಕ್ ವ್ಯವಸ್ಥೆಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ ,ಕೋಡಬ್ಬು ದೈವಸ್ಥಾನದ ಅಧ್ಯಕ್ಷರಾದ ಮಹೇಶ್ ಕರ್ಕೆರ, ಹರೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿಗಾರ್,ಭಗವಾನ್ ದಾಸ್, ಸಾರ್ತೋಜಿ, ದಿನೇಶ್ ಶೆಟ್ಟಿ,ಸೇಸಪ್ಪ ಗುರಿಕಾರ,ವಿನೋದ್ ಕುಮಾರ್ ಬಾಲಕೃಷ್ಣ ಸುವರ್ಣ, ದೇವಿಕಿರಣ್ ಗಣೇಶಪುರ,ಮತ್ತಿತರು ಉಪಸ್ಥಿತರಿದ್ದರು.