12:16 PM Tuesday26 - November 2024
ಬ್ರೇಕಿಂಗ್ ನ್ಯೂಸ್
ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಆಶೀರ್ವಾದ ಮಾಡಿ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ

30/11/2022, 11:42

ಶಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ

info.reporterkarnataka@gmail.com

ಮುಂದಿನ ಚುನಾವಣೆ ಜನರು ಪ್ರಾದೇಶಿಕ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಮನವಿ ಮಾಡಿದರು.

ಪಟ್ಟಣದ ವಿವೇಕಾನಂದ ವೃತ್ತ ಬಳಿ ನಡೆದ ರಸಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಳಬಾಗಿಲು ತಾಲೂಕಿನಿ೦ದ ಪ್ರಾರಂಭವಾದ ಪಂಚರತ್ನ ಯಾತ್ರೆಯು ಕುಮಾಸ್ವಾಮಿ ಯವರ ಕನಸಿನ ಯೋಜನೆಗಳು ಸಂಪೂರ್ಣ ಗೊಳಿಸಬೇಕು. ರಾಜ್ಯದಲ್ಲಿ ಜನತಾ ಸರ್ಕಾರ ಬರಬೇಕು ಎನ್ನುವ ರೀತಿಯಲ್ಲಿ ಕುಮಾರಸ್ವಾಮಿರವರು ಹಗಲಿರಳು ಹೋರಾಟ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಪಂಚರತ್ನ ಯಾತ್ರೆಯು ಮುಗಿದಿದ್ದು , ಇಂದು ದೇವನಹಳ್ಳಿಯತ್ತಾ ಪಂಚರತ್ನ ಯಾತ್ರೆ ಸಾಗಿದೆ ಎಂದು ಮಾಹಿತಿ ನೀಡಿದರು.

ಇದುವರೆಗೂ ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಸಹಸ್ರಾರು ಸಂಖ್ಯೆಯ ಪಂಚರತ್ನ ಯಾತ್ರೆಯಲ್ಲಿ ಪಾಲ್ಗುಂಡು ಕುಮಾರಸ್ವಾಮಿ ರವರಿಗೆ ಬೆಂಬಲ ನೀಡುತ್ತಿದ್ದಾರೆ.

ಕುಮಾರಸ್ವಾಮಿರವರೇ ಮುಖ್ಯಮಂತ್ರಿ ಯಾಗಬೇಕೆಂಬ ಕೂಗು ಕೇಳಿಬರುತ್ತಿದೆ. 2018ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ಪಕ್ಷವು 7ಕ್ಕೆ ಸ್ಥಾನಗಳು ಗೆದ್ದವೂ ಅದೇರೀತಿ ಕೋಲಾರ ಜಿಲ್ಲೆಯಲ್ಲಿ 6 ಸ್ಥಾನಗಳಲ್ಲಿ ಗೆಲ್ಲುತ್ತದೆ. ಅದರ ಬಗ್ಗೆ ಸಂಶಯವಿಲ್ಲ ಎಂದರು.
ನನಗೆ ಪಕ್ಷದ ನಾಯಕರು ಪಕ್ಷದ ಸ೦ಘಟನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಯುವಕರ ಸಂಘಟನೆ ಮಾಡುತ್ತಿದೇನೆ ಕುಮಾರಸ್ವಾಮಿ ರವರ ಹೆಗೆಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾನೆ. ಸ್ವಾತಂತ್ರ ಬಂದು 75 ವರ್ಷ ಆಯಿತು , ಶಿಕ್ಷಣ , ಆಸ್ಪತ್ರೆ ವ್ಯವಸ್ಥೆಗಳು ಸರಿಯಿಲ್ಲ ಹಾಗೂ ರೈತರಿಗೆ ಕೈಗೆ ಸಿಕ್ಕಿದ ಬೆಳೆಗಳಿಗೆ ಬೆಲೆಯಿಲ್ಲ. ಕುಮಾರಸ್ವಾಮಿ ರವರು ರೈತರ ಸಾಲಮನ್ನಾ ಮಾಡಿದ್ದರು , ಈವತ್ತು ನೀರಾವರಿ ಯೋಜನೆಗಳು ಸರಿಯಿಲ್ಲ , ಜಾರಿಯಲ್ಲಿರುವ ನೀರಿನ ಯೋಜನೆಗಳು ಕುಂಠಿಗೊಂಡಿವೆ.
ಕುಮಾರಸ್ವಾಮಿ ರವರು 20 ತಿಂಗಳು ಹಾಗೂ 18 ತಿಂಗಳು ಆಡಳಿತ ನಡೆಸಿದ್ದಾರೆ ಅಷ್ಟೆ . 5 ವರ್ಷಗಳ ಕಾಲ ಪೂರ್ಣಾವಧಿ ಆಡಳಿತ ಸಿಕ್ಕಿಲ್ಲ ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬರುತ್ತದೆ ಎಂಬ ದೃಢವಾದ ನಂಬಿಕೆ ಇದೆ. ಕುಮಾರ ಸ್ವಾಮಿರವರ ನುಡಿದಂತೆ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರವು ಆಡಳಿತಕ್ಕೆ ಬಂದ ತಕ್ಷಣ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಮಾಡಲಾಗುವುದು ಎಂದರು.
ಬಿಜೆಪಿ ಪಕ್ಷವು ಹಿಜಾಬ್ ಹಾಗೂ ಹಲಾಲ್ ಮೂಲಕ ಸಮುದಾಯ ಹಾಗೂ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಯಿತು. ನಮ್ಮ ಪಕ್ಷಕ್ಕೆ ಬೆಂಬಲಕೊಡಿ. ಕಾಂಗ್ರೆಸ್ ಪಕ್ಷವು ಅನೇಕ ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿ , ಅವರ ಆಡಳತಿದ ಸಮಯದಲ್ಲಿ ಅಭಿವೃದ್ಧಿ ಶೂನ್ಯ , ನಾಲ್ಕು ತಲಮಾರಿನಷ್ಟು ದುಡಿದುಕೊಂಡಿದ್ದಾರೆ.

ನಮ್ಮ ಪಕ್ಷದ ಜಿ.ಕೆ. ವೆಂಕಟಶಿವಾರೆಡ್ಡಿಯರನ್ನ ಗೆಲ್ಲಸಿ , ಅವರಿಗೆ ಖಂಡಿತ ಮಂತ್ರಿ ಪದವಿಯನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಇತ್ತೀಚಿಗೆ ಕುಮಾರಸ್ವಾಮಿರವರ ಪಂಚರತ್ನ ಯಾತ್ರೆಯ ಸಮಯದಲ್ಲಿ ಬಂಗವಾದಿ ಗ್ರಾಮದ ಸರ್ಕಾರಿ ಶಾಲೆಯು ಶಿಥಿಲವಾಗಿರುವ ಬಗ್ಗೆ ಶಾಲೆಯ ಮಕ್ಕಳು ಕುಮಾರಸ್ವಾಮಿರವರ ಗಮನ ಸೆಳೆದಾಗ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಬಂಗವಾದಿ ಗ್ರಾಮದ ಶಾಲೆಯನ್ನು ಅಭಿವೃದ್ಧಿ ಪಡಿಸಲು ಬಂದವರ ಮೇಲೆ ನಡೆದ ಘಟನೆಯ ಬಗ್ಗೆ ಪತ್ರಕರ್ತರ ಕೇಳಿದ ಪ್ರಶ್ನೆಗೆ ಉತ್ತರಿಸಿಗಡಿಭಾಗದ ಪುಂಡರನ್ನ ಪತ್ತೆ ಹಚ್ಚಿ ಅವರ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳು ವಂತೆ ಮನವಿ ಮಾಡಿದರು.

ಜೆಡಿಎಸ್‌ ಪಕ್ಷದ ರಾಜ್ಯ ವಕ್ತಾರರಾದ ನಜನಜೀರ್ , ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ , ಮಾಜಿ ಎಂಎಲ್‌ಸಿ ತೂಪಲ್ಲಿ ಆರ್.ಚೌಡರೆಡ್ಡಿ , ಅಂಜುಮಾನ್ ಇಸ್ಲಾಮಿಯ ಕೋಲಾರ ಅಧ್ಯಕ್ಷ ಜಮೀರ್ ಅಹ್ಮದ್ , ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್ . ನಾರಾಯಣಸ್ವಾಮಿ , ಕೋಲಾರ ಕ್ಷೇತ್ರದ ಸಾಂಭಾವ್ಯ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ , ಕೆಜಿಎಫ್ ಕ್ಷೇತ್ರದ ಸಾಂಭಾವ್ಯ ಅಭ್ಯರ್ಥಿ ಡಾ. ಆರ್.ರಮೇಶ್ ಬಾಬು ಮುಖಂಡರಾದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ, ಬಿ.ವಿ.ಶಿವಾರೆಡ್ಡಿ , ಸುಧಾಕರ್‌ , ಪೂಲ್‌ಶಿವಾರೆಡ್ಡಿ , ಕಾರ್‌ಬಾಬು , ಪುರಸಭೆ ಸದಸ್ಯರಾದ ಬಿ.ವಿ.ರೆಡ್ಡಿ ,ಶಬ್ಬೀರ್ ಖಾನ್ , ರಸೂಲ್ ಖಾನ್ ,ಅದ್ದೂರ್ ರಾಜು, ಮಾಜಿ ಉಪಾಧ್ಯಕ್ಷ ಸೈಯದ್ ಏಜಾಜ್ ಪಾಷಾ, ಟಿಎಂಎಂ ಮಾವು ಕಂಪನಿ ಮಾಲೀಕ ಟಿ ಜವಾದ್ ಅಹಮದ್ ಇತರರು ಇದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು