ಇತ್ತೀಚಿನ ಸುದ್ದಿ
ಭಾರಿ ಕುಸಿತದ ಹಾದಿಯಲ್ಲಿ ಅಡಿಕೆ ಧಾರಣೆ: ರಾಜ್ಯದ ರೈತ ಕಂಗಾಲು
30/11/2022, 11:08

ಬೆಂಗಳೂರು(reporter Karnataka): ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಆರ್ಥಿಕ ಬೆನ್ನೆಲುಬಾಗಿರುವ ಅಡಿಕೆ ಬೆಲೆ ಕುಸಿತದತ್ತ ಸಾಗಿದೆ.
ಇದರಿಂದಾಗಿ ರಾಜ್ಯದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿಅಡಿಕೆ ಧಾರಣೆ 48,899 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) ರಾಶಿ ಅಡಿಕೆ 45,899 ರೂ., ಬಂಟ್ವಾಳ (ದಕ್ಷಿಣ ಕನ್ನಡ)ಹಳೆದು 30,500 -31,000 ರೂ.ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) ರಾಶಿ ಅಡಿಕೆ 47,209 ರೂ. , ಇದೆ.