11:52 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಕೆನರಾ ಕಾಲೇಜಿನಲ್ಲಿ ಅಂಗಾಂಗದಾನ, ನೇತ್ರದಾನ ಮತ್ತು ನೋಂದಣಿ ಜಾಗೃತಿ ಅಭಿಯಾನ

28/11/2022, 20:35

ಮಂಗಳೂರು(reporterkarnataka.com): “ನಮ್ಮ ಸಮಾಜದಲ್ಲಿ ದಾನ ಎಂಬುದು ಕರುಣೆ,ಪ್ರೀತಿ, ದಯೆ ಮೊದಲಾದ ಮೌಲ್ಯಗಳನ್ನೊಳಗೊಂಡ ನಮಗ್ರ ಆದರ್ಶ. ಈ ಆದರ್ಶವನ್ನು ನಿಸ್ವಾರ್ಥದಿಂದ ಪಾಲಿಸುವವರನ್ನು ಸಮಾಜ ಸರ್ವಕಾಲಕ್ಕೂ ಸ್ಮರಿಸುತ್ತದೆ. ಇಂತಹಾ ಆದರ್ಶವನ್ನು ಪಾಲಿಸಿದ ವ್ಯಕ್ತಿಗಳ ಹಾದಿಯಲ್ಲಿ ನಡೆಯಲು ನಮಗೆ ಅವಕಾಶ ಮಾಡಿಕೊಡುವ ಪುಣ್ಯಕರ ಕಾರ್ಯವೇ ಅಂಗಾಂಗ ದಾನ ಹಾಗೂ ನೇತ್ರದಾನ. ಇನ್ನೊಬ್ಬರ ಜೀವ ಉಳಿಸುವ,ಒಂದಷ್ಟು ಜನರ ಬದುಕಿಗೆ ಬೆಳಕಾಗುವ, ಸಾವಿನ ನಂತರವೂ ಮತ್ತೊಬ್ಬರಿಗೆ ಬದುಕು ನೀಡಿ, ಜನಮಾನಸದಲ್ಲಿ ನಮಗೆ ಬದುಕಲು ಇಂತಹ ದಾನದಿಂದ ಸಾಧ್ಯ. ಹಾಗಾಗಿ ಇದು ಎಲ್ಲಕ್ಕಿಂತ ಶ್ರೇಷ್ಠ ದಾನ.ಈ ರೀತಿಯ ಶ್ರೇಷ್ಠ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಜಾಗೃತಿ ಕಾರ್ಯ ಕೈಗೊಂಡಾಗ ಮಾತ್ರ ಅಂಗಾಂಗ ಹಾಗೂ ನೇತ್ರದಾನ ಜನರ ಅಭಿಯಾನವಾಗಿ,ಆಂದೋಲನವಾಗಿ ಬದಲಾಗಲು ಸಾಧ್ಯ” ಎಂದು ಅಂಗಾಂಗದಾನದ ಜಿಲ್ಲಾ ಮುಖ್ಯ ಸಂಯೋಜಕ ಲಯನ್ ಫಿಲಿಪ್ ಜೆ.ಪಿರೇರಾ ಹೇಳಿದರು.

ಅವರು ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಹಾಗೂ ಕದ್ರಿಯ ಲಯನ್ಸ್ ಹಾಗೂ ಲಿಯೋ ಕ್ಲಬ್ ನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ನೇತ್ರದಾನ ಹಾಗೂ ಅಂಗಾಂಗದಾನ ಮತ್ತು ನೋಂದಣಿ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕದ್ರಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಲಯನ್ ಸುಮಿತ್ರಾ ಶೆಟ್ಟಿ ಮಾತನಾಡಿ, ಅಂಗಾಂಗ ದಾನದ ಮಹತ್ವವನ್ನು ತಿಳಿಸಿ,ಈ ಒಂದು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಲಯನ್ ಜಯಕುಮಾರಿ ಸತೀಶನ್,ಲಯನ್ ರತ್ನಾಕರ್,ಲಯನ್ ಮಾಲಾ ಕಿಶೋರ್, ಲಯನ್ ವಿಜಯ ಶೆಟ್ಟಿ ,ಕಾಲೇಜಿನ ರಾ.ಸೇ.ಯೋ.ಯೋಜನಾಧಿಕಾರಿಗಳಾದ ಸೀಮಾ ಪ್ರಭು,ವಾಣಿ ಯು.ಎಸ್.ಉಪಸ್ಥಿತರಿದ್ದರು.


ಕು.ಸಮೀಕ್ಷಾ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕು.ವೀಕ್ಷಾ ಸಾಲ್ಯಾನ್ ವಂದಿಸಿ,ಕು.ಶ್ರಾವ್ಯ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು