12:44 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಬಲವಾಂಡಿ ಪಿಲಿಚಾಮುಂಡಿ ದೈವಸ್ಥಾನ ಜೀರ್ಣೋದ್ಧಾರ: ಶಾಸಕ ಡಾ. ಭರತ್ ಶೆಟ್ಟಿ ಶಿಲಾನ್ಯಾಸ

27/11/2022, 11:51

ಸುರತ್ಕಲ್(reporterkarnataka.com); ತುಳುನಾಡಿನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದು ನ್ಯಾಯಪೀಠವಾಗಿರುವ ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ಪಿಲಿಚಾಮುಂಡಿ ದೈವಸ್ಥಾನದ ಬಂಟಕಂಬ ರಾಜಾಂಗಣ ಅನುಜ್ಞಾವಿಧಿ ಪೂಜಾ ಕಾರ್ಯಕ್ರಮ ಜನವರಿ 15ರಿಂದ 48 ದಿನಗಳವರೆಗೆ ನಡೆಯಲಿದೆ.
ಶ್ರೀ ಕ್ಷೇತ್ರದ ರಾಜಾಂಗಣ ಬಂಟಕoಬ ಹಾಗೂ ಪಿಲಿಚಾಮುಂಡಿ ದೈವಸ್ಥಾನ 1.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ದೈವಸ್ಥಾನಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅವರು ಭೇಟಿ ನೀಡಿ ಪಿಲಿಚಾಮುಂಡಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಮುಖರೊಂದಿಗೆ ಜೀರ್ಣೋದ್ಧಾರ ಕಾರ್ಯಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ನೀಡಿದರು.


ಕುಡುಪು ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಪೂಜಾ ವಿಧಿವಿಧಾನ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಮಾತನಾಡಿ, ಅನುಜ್ಞಾವಿಧಿಗೆ ಶುದ್ಧ ಎಳ್ಳೆಣ್ಣೆ ಸೇವೆ ನೀಡುವ ಭಕ್ತರಿಗೆ ಅವಕಾಶ ಇದೆ. ಕರಸೇವೆಯ ಮೂಲಕ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ಈವರೆಗೆ ಸುಮಾರು 1,500 ಕರಸೇವಕರು ನಿರಂತರ ಕರಸೇವೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸಂಘ-ಸ0ಸ್ಥೆಗಳು ಹಾಗೂ ಊರ ಭಕ್ತರಿಂದ ಕರಸೇವೆ ನಡೆಯಲಿದೆ ಎಂದರು.


ಈ ಸಂದರ್ಭದಲ್ಲಿ ಪೆರ್ಗಡೆಯವರಾದ ಮುಂಡಬೆಟ್ಟುಗುತ್ತು ಗಂಗಾಧರ ರೈ, ಮಧ್ಯಸ್ಥ ಬ್ರಾಣಬೆಟ್ಟುಗುತ್ತು ಪ್ರತಾಪಚಂದ್ರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲು, ಉಪಾಧ್ಯಕ್ಷ ಕೃಷ್ಣ ಅಮೀನ್, ಇಂಜಿನಿಯರ್ ರತೀಶ್ ದಾಸ್, 16 ಗುತ್ತುಮನೆತನದ ಪ್ರಮುಖರು, ಓಂ ಪ್ರಕಾಶ್ ಶೆಟ್ಟಿ, ಪ್ರತೋಷ್ ಮಲ್ಲಿ, ಡಾ. ಮೋಹನ್‌ದಾಸ್ ಶೆಟ್ಟಿ, ವಿದ್ಯಾ ಜೋಗಿ, ಪ್ರಕಾಶ್ ಭಂಡಾರಿ, ರಮೇಶ್ ಅಮೀನ್, ಸುರೇಶ್ ಅಂಚನ್, ರಂಗನಾಥ ಭಂಡಾರಿ, ಹರೀಶ್ ಶೆಟ್ಟಿ ನಡುಗುತ್ತು, ಮೋಹನ್ ಪೂಜಾರಿ ಕಬೆತ್ತಿಗುತ್ತು, ಶೇಖರ ಸಪಲಿಗ, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್ ಚೌಟ, ವಿವಿಧ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ವಿಲೇದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು