ಇತ್ತೀಚಿನ ಸುದ್ದಿ
ಪದ್ಮಶ್ರೀ ಡಾ.ಗೋಪಾಲನಾಥ್ ಸಂಸ್ಮರಣೆ: ಡಿ. 6ರಂದು ಒಂದು ದಿನದ ವಿಶೇಷ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ
26/11/2022, 21:57

ಮಂಗಳೂರು(reporterkarnataka.com): ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ) ಟ್ರಸ್ಟ್ ಆಶ್ರಯದಲ್ಲಿ ಪದ್ಮಶ್ರೀ ಡಾ.ಗೋಪಾಲನಾಥ್ ಅವರ ಸಂಸ್ಮರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಡಾ..ಅಂಬೇಡ್ಕರ್ ಭವನದಲ್ಲಿ ಡಿಸೆಂಬರ್ 6 ರಂದು ಒಂದು ದಿನದ ವಿಶೇಷ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಡಿಸೆಂಬರ್ 4ರಂದು ಭಾನುವಾರ ಅನಾಥಶ್ರಮದ ಮಕ್ಕಳಿಗೆ ಸಂಗೀತ ಸ್ಪರ್ಧೆ ಏರ್ಪಡಿಸಲಾಗಿದೆ. ಮಂಗಳೂರಿನ ಡೊಂಗರಕೇರಿ
ಕೆನರಾ ಹೈಸ್ಕೂಲ್ ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಾನಪದ, ಭಾವಗೀತೆ ಹಾಗೂ ಭಜನೆ ವಯಕ್ತಿಕ ಸ್ಪರ್ಧೆಯನ್ನು ಏರ್ಪಡಿಸಿದ್ದು ಭಾಗವಹಿಸಲಿಚ್ಚಿಸುವ ಅನಾಥಾಲಯ ಹಾಗೂ ಆಶ್ರಮಗಳ ಮಕ್ಕಳು ಡಿಸೆಂಬರ್ 1 ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು.7892714510 ವಾಟ್ಸ್ ಆಪ್ ಸಂಖ್ಯೆ ಹಾಗೂ kadriskeys@gmail.com ಗೆ ನೊಂದಾವಣೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ