7:11 PM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ…

ಇತ್ತೀಚಿನ ಸುದ್ದಿ

ಹುಲಿ ದಾಳಿಗೆ 3 ಹಸುಗಳು ಬಲಿ: ಕಾಫಿನಾಡಲ್ಲಿ ಮುಂದುವರೆದ ವ್ಯಾಘ್ರ ಅಟ್ಟಹಾಸ; ಕೈಕಟ್ಟಿ ಕುಳಿತ ಅರಣ್ಯ ಇಲಾಖೆ

26/11/2022, 21:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka.com

ಭಾರತಿಬ್ಯೆಲು ಕನ್ನಗೆರೆ ಕಣ್ಣ ಕಾಫಿ ಎಸ್ಟೇಟ್ ನಲ್ಲಿ ಶುಕ್ರವಾರ ರಾತ್ರಿ ಸಮಯದಲ್ಲಿ ಹುಲಿ ಸುಮಾರು 4 ಹಸುಗಳನ್ನು ಬೇಟೆಯಾಡಿದ್ದು,ಇದರಲ್ಲಿ ಒಂದು ಕರು ಕೂಡ ಸೇರಿದೆ.

ಇವುಗಳಲ್ಲಿ ಒಂದು ಹಸು ಜೀವ ಉಳಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದೆ. ಇನ್ನೆರಡು ಹಸುಹಾಗು ಒಂದು ಕರು ಪ್ರಾಣ ಬಿಟ್ಟಿದ್ದು ಒಂದನ್ನು ಭಾಗಶಃ ತಿಂದು ಹಾಕಿದೆ.

ಅದರಲ್ಲಿ ಒಂದು ಹಸು ಗರ್ಭ ಧರಿಸಿದ್ದು ಹೊಟ್ಟೆಯಿಂದ ಕರವನ್ನು ಹೊರಹಾಕಿ ತಿಂದಿರುವ ಭಯಾನಕ ದೃಶ್ಯವನ್ನು ಗ್ರಾಮಸ್ಥರು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲವು ದಿವಸಗಳಿಂದ ಎರಡು ಹುಲಿಗಳು ಸಂಚರಿಸುತ್ತಿದ್ದು, ಅನೇಕ ಹಸುಗಳನ್ನು ಇದುವರೆಗೂ ಬೇಟೆಯಾಡಿರುವ ವರದಿಯಾಗಿದೆ.

ಕೂಡಲೇ ಜೀವಹಾನಿ ಸಂಭವಿಸುವ ಮುಂಚೆ ಈ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಗ್ರಹಿಸಿದ್ದಾರೆ.
ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು