ಇತ್ತೀಚಿನ ಸುದ್ದಿ
ಮೊಡಂಕಾಪು ಕಾರ್ಮೆಲ್ ಕಾಲೇಜಿನ 2022- 23ನೇ ಸಾಲಿನ ರಾಷ್ಟೀಯ ಸೇವಾ ಯೋಜನಾ ಘಟಕ ಉದ್ಘಾಟನೆ
25/11/2022, 22:37
ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜಿನ 2022- 23ನೇ ಶೈಕ್ಷಣಿಕ ಸಾಲಿನ ರಾಷ್ಟೀಯ ಸೇವಾ ಯೋಜನಾ ಘಟಕದ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ನಾಯ್ಕ್ ಉದ್ಘಾಟಿಸಿ ಮಾತನಾಡಿದ ಅವರು, ಎನ್ ಎಸ್ಎಸ್ ಯುವ ಜನರಿಗೆ ಸಮಾಜದಲ್ಲಿ ಹಲವು ಬದಲಾವಣೆಗಳನ್ನು ತರಲು ಸಾಧ್ಯವಿದೆ. ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು.ಆಗ ಮಾತ್ರ ಎನ್.ಎಸ್.ಎಸ್ ನಂತಹ ಸಂಘಗಳ ಕೆಲಸ ಸಾರ್ಥಕವಾಗುತ್ತದೆ.ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ ಫೆರ್ನಾಂಡಿಸ್ ಎ.ಸಿ. ಎನ್.ಎಸ್,ಎಸ್ ಸ್ವಯಂ ಸೇವಕ,ಸೇವಕಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ರಾ.ಸೆ.ಯೋ ಯೋಜನಾಧಿಕಾರಿ ಕೀರ್ತನ್ ,ಎನ್.ಎಸ್.ಎಸ್ ಘಟಕದ ನಾಯಕಿ ಅಸಿಯಾ, ಘಟಕದ ನಾಯಕ ಅಕ್ಷಿತ್ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ನಿಕಟ ಪೂರ್ವ ರಾ.ಸೇ.ಯೋ ಯೋಜನಾಧಿಕಾರಿ ಮಧುರ. ಕೆ ಅವರನ್ನು ಸನ್ಮಾನಿಸಲಾಯಿತು.
ರಾಷ್ಟೀಯ ಯೋಜನಾಧಿಕಾರಿ ಕೀರ್ತನ್ ಸ್ವಾಗತಿಸಿದರು. ಘಟಕದ ನಾಯಕಿ ಅಸಿಯಾ ವಂದಿಸಿ,ಸ್ವಯಂಸೇವಕ ಅಫ್ರಿಜ್ ನಿರೂಪಿಸಿದರು.