6:07 AM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಎನ್ ಸಿಸಿ ಘಟಕದಿಂದ ಅನಂದಾಶ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ

25/11/2022, 12:21

ಪುತ್ತೂರು(reporterkarnataka.com): ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಎನ್. ಸಿ.ಸಿ ಘಟಕ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಆನಂದಾಶ್ರಮ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಎನ್ ಸಿಸಿ ದಿನಾಚರಣೆಯ ಪ್ರಯುಕ್ತ ಆನಂದಾಶ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಆನಂದಾಶ್ರಮ ಸೇವಾ ಟ್ರಸ್ಟ್ ನ ಮುಖ್ಯ ಟ್ರಸ್ಟಿಯಾದ ಡಾ. ಗೌರಿ ಪೈ ಮಾತನಾಡಿ “ ಗಿಡ ನೆಡುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿಲ್ಲಿ ದೇಶ ಸಮೃದ್ಧವಾಗುವುದು, ಯುವ ಜನರಲ್ಲಿ ಪರಿಸರ ಪ್ರೇಮ ಮೂಡಿಸುವ ಕೆಲಸವನ್ನು ಎನ್.ಸಿ.ಸಿ ಮಾಡುತ್ತಿದೆ. ಪರಿಸರ ಪ್ರೇಮ ಮಾತ್ರವಲ್ಲದೆ ಹೆತ್ತವರನ್ನು ಅವರ ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಂಡು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರವೇ ನಾವು ಉತ್ತಮ ಪ್ರಜೆಗಳಾಗುತ್ತೇವೆ. ವೃತ್ತಿಜೀವನ ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವುದು ಬಹಳ ಮುಖ್ಯವಾಗಿದೆ” ಎಂದು ಹೇಳಿದರು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆ| ಜಾನ್ಸನ್ ಡೇವಿಡ್ ಸಿಕ್ವೆರಾರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ೭೫ನೇ .ಎನ್. .ಸಿ.ಸಿ ದಿನದ ಮಹತ್ವವನ್ನು ತಿಳಿಸಿದರು. ಸುಮಾರು 50 ಕ್ಕೂ ಹೆಚ್ಚಿನ ವಿವಿದ ಹಣ್ಣುಗಳ ಗಿಡಗಳನ್ನು ಆನಂದಾಶ್ರಮ ಪರಿಸರದಲ್ಲಿ ನೆಡಲಾಯಿತು. ಕಾಲೇಜಿನ ಎನ್ .ಸಿ.ಸಿ ಘಟಕಗಳ ವತಿಯಿಂದ ಆಶ್ರಮ ನಿವಾಸಿಗಳಿಗೆ ಅಕ್ಕಿ ಹಾಗೂ ಹಣ್ಣುಹಂಪಲುಗಳನ್ನು ನೀಡಲಾಯಿತು.

ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ಸಾತ್ವಿಕ್ ಡಿ. ಎನ್ ಸ್ವಾಗತಿಸಿ ಜ್ಯೂನಿಯರ್ ಅಂಡ‌ ಆಫೀಸರ್ ಕೆಲ್ವಿನ್ ಆಂಟನಿ ವಂದಿಸಿದರು. ಕೃತಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್ .ಸಿ.ಸಿ ಘಟಕಗಳ 105 ಕೆಡೆಟ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು