6:58 AM Monday21 - July 2025
ಬ್ರೇಕಿಂಗ್ ನ್ಯೂಸ್
ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು

ಇತ್ತೀಚಿನ ಸುದ್ದಿ

ಪ್ರೋಟಿಯಮ್ ಆಂಪಿಡ್‍: ಹೆಸರಾಂತ ಇಂಡೀ ಕಲಾವಿದರಾದ ಮೇರಿ ಆನ್ ಅಲೆಕ್ಸಾಂಡರ್ ಮತ್ತು ಅಲನ್ ವರ್ಗೀಸ್ ಹೃದಯಂಗಮ ಪ್ರದರ್ಶನ

24/11/2022, 18:01

ಬೆಂಗಳೂರು(reporterkarnataka.com): ಅಪೂರ್ವ ಆರ್ & ಬಿ ಮತ್ತು ಹೃದಯಂಗಮ ಕಲಾವಿದೆ ಮೇರಿ ಆನ್ ಅಲೆಕ್ಸಾಂಡರ್ ಮತ್ತು ಬಹು- ವಾದ್ಯವಾದಕ ಮತ್ತು ಜಾಝ್‍ಹೆಡ್ ಅಲನ್ ವರ್ಗೀಸ್ ಅವರು ಪ್ರೋಟಿಯಮ್‍ನ ಬೆಂಗಳೂರು ಕಛೇರಿಯಲ್ಲಿ ಇಂದು ಮೂರನೇ ‘ಪ್ರೋಟಿಯಮ್ ಆಂಪ್ಡ್’ ಉತ್ಸವಕ್ಕೆ ಚಾಲನೆ ನೀಡಿದರು, ತಮ್ಮ ಧ್ವನಿ ಮತ್ತು ಬಹುಮುಖ ಪ್ರತಿಭೆಯಿಂದ ಪ್ರೇಕ್ಷಕರ ಮನ ಸೂರೆಗೊಂಡರು. ಅವರು ಮೂಲ ಹಾಡುಗಳು ಮತ್ತು ಇಂಗ್ಲಿಷ್, ಹಿಂದಿ, ತಮಿಳು ಮತ್ತು ಸ್ಪ್ಯಾನಿಷ್ ಹೀಗೆ ಬಹು ಭಾಷೆಗಳಲ್ಲಿ ಒಟ್ಟು 12 ಹಾಡುಗಳನ್ನು ಪ್ರಸ್ತುತಪಡಿಸಿದರು. ಅಸಾಧಾರಣ ಕಲಾವಿದರು ಪ್ರೇಕ್ಷಕರನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಏಕರೂಪತೆಯಿಂದ ಹಾಡುವ ಮೂಲಕ ಪ್ರೇಕ್ಷಕರನ್ನು ತಮ್ಮ ಅಭಿನಯಕ್ಕೆ ಮರುಳಿಸಿದರು. ಈ ಜೋಡಿಯು ಅವರ ತೀವ್ರ ಹಾಗೂ ಶಕ್ತಿಶಾಲಿ ಕಥೆ ಹೇಳುವ ಪ್ರಜ್ಞೆಗೆ ಹೆಸರುವಾಸಿಯಾಗಿದ್ದು, ಅದು ಅವರು ಪ್ರಸ್ತುತಪಡಿಸಿದ ಹಾಡುಗಳಲ್ಲಿ ಪ್ರತಿಫಲಿಸಿತು.
ಈ ವರ್ಷದ ಅಕ್ಟೋಬರ್‍ನಲ್ಲಿ ಪ್ರಾರಂಭವಾದ, ಪ್ರೋಟಿಯಮ್ ಆಂಪಿಡ್ ಭಾರತೀಯ ಇಂಡೀ ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಗುರುತಿಸಬಹುದಾದ ವೇದಿಕೆಯಾಗಿ ಬದಲಾಗುತ್ತಿದೆ ಮತ್ತು ಈಗಾಗಲೇ ರಘು ದೀಕ್ಷಿತ್‍ರಂತಹ ಪ್ರಮುಖ ಇಂಡೀ ಕಲಾವಿದರಿಂದ ಪ್ರದರ್ಶನಗಳನ್ನು ಕಂಡಿದೆ. ರಘು ದೀಕ್ಷಿತ್ ಪ್ರಾಜೆಕ್ಟ್‍ನಿಂದ ಹಿಡಿದು ಅಂತಾರಾಷ್ಟ್ರೀಯವಾಗಿ ಪ್ರಸಿದ್ಧವಾದ ಇಂಡೀ ಬ್ಯಾಂಡ್ ಮತ್ತು ಜನಪ್ರಿಯ ಗಾಯಕಿ ಮತ್ತು ಗೀತ ರಚನೆಕಾರರಾದ ವಸುದಾ ಶರ್ಮಾ ಅವರಂಥ ಮೇರು ಕಲಾವಿದರಿಂದ ಪ್ರಸ್ತುತಿಗಳನ್ನು ಕಂಡಿದೆ.
ಪ್ರೋಟಿಯಂ ಆಂಪಿಡ್ ಸಾವಿರಾರು ಮಹತ್ವಾಕಾಂಕ್ಷೆಯ ಇಂಡೀ ಕಲಾವಿದರಿಗೆ ಧ್ವನಿಯಾಗಲು ಮತ್ತು ಅವರ ಅಸಾಧಾರಣ ಪ್ರತಿಭೆಯೊಂದಿಗೆ ಜನಸಾಮಾನ್ಯರನ್ನು ತಲುಪಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾರಾಟ ಮತ್ತು ಪ್ರಗತಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಜಿಬಿ ಮ್ಯಾಥ್ಯೂ ಆಂಟೋನಿ ಅವರು, ಪ್ರೋಟಿಯಮ್‍ನ ‘ಮಹತ್ವಾಕಾಂಕ್ಷೆಗೆ ಶಕ್ತಿತುಂಬುವ ದೃಷ್ಟಿಗೆ ಅನುಗುಣವಾಗಿ, ಪ್ರೋಟಿಯಮ್ ಆಂಪಿಡ್ ಅಂತಹ ಕಲಾವಿದರಿಗೆ ಯಾವುದೇ ಪ್ರಕಾರ ಅಥವಾ ಸಂಗೀತ ಶೈಲಿಗೆ ವ್ಯಾಪ್ತಿ ಮತ್ತು ಪ್ರೇಕ್ಷಕವರ್ಗವನ್ನು ಒದಗಿಸುವ ಭರವಸೆಯ ವೇದಿಕೆಯನ್ನು ಕಲ್ಪಿಸುತ್ತದೆ. ಪ್ರತಿ ವಾರ ಪ್ರತಿಭಾನ್ವಿತ ಇಂಡೀ ಕಲಾವಿದರು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರೇಕ್ಷಕರಿಗೆ ಮತ್ತು ನಮ್ಮ ಲಕ್ಷಾಂತರ ಅನುಯಾಯಿಗಳಿಗೆ ಪ್ರೋಟಿಯಮ್‍ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‍ಗಳಾದ್ಯಂತ ಲೈವ್- ಸ್ಟ್ರೀಮಿಂಗ್ ಮೂಲಕ ಪ್ರಸ್ತುತಪಡಿಸುತ್ತಾರೆ. ಈ ಆಸ್ತಿಯು ನಮ್ಮ ಕೆಲಸದ ಸಂಸ್ಕøತಿಗೆ ಸಾಕ್ಷಿಯಾಗಿದೆ ಮತ್ತು ಸಂಗೀತದ ಸಾರ್ವತ್ರಿಕ ಭಾಷೆಯ ಮೂಲಕ ಪ್ರೋಟಿಯಮ್‍ನ ಎಲ್ಲಾ ಉದ್ಯೋಗಿಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ” ಎಂದು ಬಣ್ಣಿಸಿದರು.
ಮೇರಿ ಆನ್ ಅಲೆಕ್ಸಾಂಡರ್ ಕೇರಳದಲ್ಲಿ ಜನಿಸಿದ ಆರ್ & ಬಿ ಕಲಾವಿದೆ ಮತ್ತು ಈಗ ಸುಂದರ ನಗರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಏಳನೇ ವಯಸ್ಸಿನಿಂದಲೂ ರೆಕಾಡಿರ್ಂಗ್ ಕಲಾವಿದೆಯಾಗಿದ್ದಾರೆ ಮತ್ತು ಅವರ ಧ್ವನಿ ಮತ್ತು ಸಂಯೋಜನೆಯೊಂದಿಗೆ ಆರ್ & ಬಿ, ಸೋಲ್ ಮತ್ತು ಪಾಪ್‍ನಂತಹ ಅನೇಕ ಪ್ರಕಾರಗಳನ್ನು ಅನ್ವೇಷಿಸಿದ್ದಾರೆ. ಜತೆಜತೆಗೆ ನೋ ಹೋಮ್‍ನೊಂದಿಗೆ ಕೆಲವು ಪರ್ಯಾಯ ಧ್ವನಿಗಳನ್ನು ರಚಿಸಿದರು. ಕಳೆದ ಎರಡು ವರ್ಷಗಳಿಂದ, ಅವರು ಸಂಜೀವ್ ಟಿ, ಸಿದ್ ಶ್ರೀರಾಮ್, ನೀರಜ್ ಮಾಧವ್, ರಂಜ್, ಪ್ರಣಯ್ ಪಾರ್ಟಿ, ಟಿ.ಇಲ್ ಏಪ್ಸ್ ಮತ್ತು ಹೆಚ್ಚಿನ ಭಾರತೀಯ ಇಂಡೀ ಕ್ಷೇತ್ರದಲ್ಲಿ ಕಲಾವಿದರೊಂದಿಗೆ ಸಹಯೋಗದಲ್ಲಿ ಬಹುಭಾಷಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಾದೇಶಿಕ ಉದ್ಯಮಗಳಲ್ಲಿ ತಮ್ಮನ್ನು ತಾವು ಸೃಷ್ಟಿಸಿಕೊಂಡಿದ್ದಾರೆ. ಅಲನ್ ವರ್ಗೀಸ್ ಬಹು- ವಾದ್ಯವಾದಕ ಮತ್ತು ಶುದ್ಧ ಜಾಝ್ ಹೆಡ್. ಅವರು ರಿಫ್ಸ್, ಲಯಗಳು, ಧ್ವನಿಗಳು, ಪ್ರಗತಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳ ಅಪೇಕ್ಷೆ ಹೊಂದಿದ್ದು, ಬಹುತೇಕ ಅವುಗಳು ಅಸಾಮಾನ್ಯವಾಗಿರುತ್ತವೆ.

ಇತ್ತೀಚಿನ ಸುದ್ದಿ

ಜಾಹೀರಾತು