ಇತ್ತೀಚಿನ ಸುದ್ದಿ
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಯಕ್ಷಾಮೃತ’ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ
22/11/2022, 13:37
ಪುತ್ತೂರು(reporterkarnataka.com): ಸಂತ ಫಿಲೋಮಿನಾ ಕಾಲೇಜಿನ ಭಾರತೀಯ ರಾಷ್ಟ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರವಾದ ಯಕ್ಷ ಕಲಾ ಕೇಂದ್ರ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ದೇಶ ಭಕ್ತ ಎಸ್.ಎಸ್.ಕಿಲ್ಲೆ ಪ್ರತಿಷ್ಠಾನದ ಒಡಂಬಡಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಕಲೆಯ ಸರ್ಟಿಫಿಕೇಟ್ ಕೋಸ್ ದೇಶ ಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕನಕಮಜಲು ಸುಭಾಶ್ ರೈಯವರು “ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲಾಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
ನಮ್ಮ ವ್ಯಕ್ತಿತ್ವದ ಮುಂದೆ ನಾವು ಮಾಡಿದ ಬೇರೆಲ್ಲಾ ಸಂಪಾದನೆಗಳೂ ನಗಣ್ಯ. ಈ ಕಾಲೇಜಿನಿಂದ ಕರೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಲಿ ಇಂತಹ ಸತ್ಕಾರ್ಯದಲ್ಲಿ ದೇಶಭಕ್ತ ಎನ್ ಎಸ್ ಕಿಲ್ಲಿ ಪ್ರತಿಷ್ಠಾನದ ಬೆಂಬಲವಿದೆ: ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೆ ಯಕ್ಷಾಮೃತವು ವೇದಿಕೆಯಾಗಲಿ, ಹಾಗೂ ವಿದ್ಯಾರ್ಥಿಗಳು ಪತ್ಯೇತರ ಚಟುವಟಿಕಗಳಲ್ಲಿ ತೊಡಗಿಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲಿ’ ಎಂದು ಕರೆನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪನ್ಯಾುಪಾಲರಾದ ಪ್ರೊ. ಗಣೇಶ್ ಅವರು ಯಕ್ಷಗಾನ ಕಲೆಯ ವಿಸ್ತಾರವನ್ನು ವಿವರಿಸಿದರು, “ಯಕ್ಷಗಾನಕ್ಕೆ ಅದರದ್ದೇ ಆದ ಗಾಂಭೀರ್ಯವಿದೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಲೆ, ಸಾಹಿತ್ಯ ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಎಂದೂ ಅಚ್ಚಳಿಯದ ಹೆಜ್ಜೆಗುರುತನ್ನು ಮೂಡಿಸಿರುತ್ತಾರೆ, ಕಾಲೇಜಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಪುರ್ಣವಾಗಿ ಬಳಸಿಕೊಂಡು ಕಲಾ ಸೇವೆಯಲ್ಲಿ ತೊಡಗಿಸಿಕೊಳ್ಳಿ’ ಎಂದು ಹೇಳಿದರು.
ಯಕ್ಷ ಕಲಾಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯಕ್ಷ ಕಲಾ ಕೇಂದ್ರದ ನಿರ್ದೇಶಕ ಪ್ರಶಾಂತ್ ರೈ ಸ್ವಾಗ ಪ್ರಾಸ್ತಾವಿವನೆಗೈದರು. ಯಾದ್ಭುತ ಕೋರ್ಸ್ ನ ಸಂಯೋಜ ರಾಜೇಶ್ವರಿ ವಂದಿಸಿದರು. ಸಹನಿರ್ದೇಶಕ ದಿನಕರ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗುರುಗಳಾದ ಬಾಲಕೃಷ್ಣ ಪೂಜಾರಿ ಅರ್ಲಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಸುಮಾರು 50 ಮಂದಿ ವಿದ್ಯಾರ್ಥಿಗಳು ಸಫಿಕೇಟ್ ಕೋರ್ಸ್ ಗೆ ನೋಂದಾಯಿಸಿಕೊಂಡಿರುತ್ತಾರೆ,