5:44 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಮಂಗಳೂರು ಕೆನರಾ ಕಾಲೇಜಿನಲ್ಲಿ ರಕ್ತ ಕಾಂಡಕೋಶ ದಾನ ಜಾಗೃತಿ ಮತ್ತು ನೋಂದಣಿ ಆಂದೋಲನ

15/11/2022, 22:54

ಮಂಗಳೂರು(reporterkarnataka.com): “ರಕ್ತ ಕ್ಯಾನ್ಸರ್ ಗೆ ಹೊಸ ತಂತ್ರಜ್ಞಾನದ ಸಹಾಯದಿಂದ ರಕ್ತ ಕಾಂಡ ಕೋಶ ಕಸಿ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ಕಾಂಡಕೋಶವನ್ನು ನಾಶ ಮಾಡಿ ರೋಗಿಯನ್ನು ಗುಣಪಡಿಸಬಹುದು ಎಂದು
ಡಿಕೆಎಂಎಸ್,ಬಿಎಂಎಸ್ಟಿ ಫೌಂಡೇಶನ್ ನ ದಾನಿ ನೇಮಕಾತಿ ವಿಭಾಗದ ಉಪ ವ್ಯವಸ್ಥಾಪಕ ಪ್ರಜಿತ್ ಸುಧಾಕರ್ ಹೇಳಿದರು.

ಅವರು ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಕದ್ರಿ ಲಯನ್ಸ್ ಮತ್ತು ಲಿಯೋ ಕ್ಲಬ್,ಡಿಕೆಎಂಎಸ್,ಬಿಎಂಎಸ್ಟಿ ಫೌಂಡೇಶನ್ ಇಂಡಿಯಾ ದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಕ್ತಕಾಂಡಕೋಶ ದಾನ ಜಾಗೃತಿ ಮತ್ತು ನೋಂದಣಿ ಆಂದೋಲನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ರಕ್ತದಾನದಂತೆ ಇದೂ ರಕ್ತಕಾಂಡಕೋಶ ದಾನವೂ ಪುಣ್ಯಕಾರ್ಯವಾಗಿದ್ದು, ಇದರಿಂದ ರೋಗಿಗಳ ಜೀವವುಳಿಸಲು ಸಾಧ್ಯ. ಭಾರತದಲ್ಲಿ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತ ಕಾಂಡ ಕೋಶಗಳ ಕಸಿ ಅಗತ್ಯತೆ ಹೆಚ್ಚಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಈ ದಾನಕ್ಕೆ ಮುಂದೆ ಬರಬೇಕು.ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಕ್ತ ಕಾಂಡಕೋಶ ದಾನಿಗಳ ಸಂಖ್ಯೆ ಇರುವುದರಿಂದ ರೋಗಿಗಳಿಗೆ ಹೊಂದಿಕೆಯಾಗಬಲ್ಲ ದಾನಿಗಳನ್ನು ಪಡೆಯುವ ಅವಕಾಶ ಶೇ.10ರಿಂದ ಶೇ.15 ಮಾತ್ರ ಇದೆ.ಈ ನಿಟ್ಟಿನಲ್ಲಿ ಯುವಜನಾಂಗ ಈ ದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ಹೆಚ್ಚುಹೆಚ್ಚು ತೊಡಗಿಸಿಕೊಳ್ಳಬೇಕು ಎಂದು
ಹೇಳಿದರು.

ಕೆನರಾ ವಿಕಾಸ ಸಂಸ್ಥೆಯ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈಯವರು ಅಧ್ಯಕ್ಷತೆಯನ್ನು ವಹಿಸಿದ್ದರು .ಚೈಲ್ಡ್ ಹುಡ್ ಕ್ಯಾನ್ಸರ್ ನ ಜಿಲ್ಲಾ ಸಂಯೋಜಕ ಲಯನ್ ಸಬಿತಾ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಅಂಗಾಂಗ ದಾನ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಫಿಲಿಪ್ ಪಿರೇರಾ,ಡಿಕೆಎಂಎಸ್ ಬಿಎಂಎಸ್ ಟಿ ಫೌಂಡೇಶನ್ ಮಹಾಮಿತ್ರ ಎಸ್ ಅರ್, ಆಶಿತಾ ಶೆಟ್ಟಿ, ಕದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಲಯನ್ ಸುಮಿತ್ರಾ ಶೆಟ್ಟಿ,ವಿವಿಧ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳಾದ ಲಯನ್ ಆಶಾ ಚಂದ್ರಮೋಹನ್,ಲಯನ್ ಆಶಾ ಶೆಟ್ಟಿ, ಲಯನ್ ಆಶಾ ನಾಗರಾಜ್,ಲಯನ್ ಮೀರಾ ಶೆಟ್ಟಿ, ಲಯನ್ ವಿಜಯ ಶೆಟ್ಟಿ, ಕೆನರಾ ಕಾಲೇಜಿನ ರಾ.ಸೇ.ಯೋ.ಅಧಿಕಾರಿಗಳಾದ ಸೀಮಾ ಪ್ರಭು,ವಾಣಿ ಯು.ಎಸ್, ಉಪ ಯೋಜನಾಧಿಕಾರಿಗಳಾದ ವಿಜೇತಾ ಭಟ್,ಸುಶಾಮ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ.ಸ್ವಾಗತಿಸಿ, ವಿಜೇತಾ ಭಟ್ ವಂದಿಸಿದರು.ರಾ.ಸೇ.ಯೋ.ಸ್ವಯಂಸೇವಕಿ ಶ್ರೀಮಾ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು