2:02 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಫುಟ್ ಪಾತ್ ನುಂಗಿ ಹಾಕಿದ ಮೆಸ್ಕಾಂ ವಿದ್ಯುತ್ ಕಂಬಗಳು!: ಪಾದಚಾರಿಗಳ ಸುಗಮ ಸಂಚಾರಕ್ಕೆ ಬ್ರೇಕ್ !

08/11/2022, 14:16

ಅನುಷ್ ಪಂಡಿತ್ ಮಂಗಳೂರು

info.reporter Karnataka@gmail.com

ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವುದು, ವಾಹನ ನಿಲ್ಲಿಸುವುದು ತಪ್ಪು. ಆದರೆ ಫುಟ್ ಪಾತ್ ನಲ್ಲೇ ಮೆಸ್ಕಾಂನವರು ವಿದ್ಯುತ್ ಕಂಬ ನೆಟ್ಟರೆ ಹೇಗೆ? ಕಡಲನ ನಗರಿ ಮಂಗಳೂರಿನಲ್ಲಿ ಇಂತಹ ಅನೇಕ ತಾಜಾ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.


ಮೊದಲೇ ಇಕ್ಕಟ್ಟಾದ ಫುಟ್ ಪಾತ್ ನಲ್ಲಿ ಅಲ್ಲಿಲ್ಲಿ ಮೆಸ್ಕಾಂ ವತಿಯಿಂದ ವಿದ್ಯುತ್ ಕಂಬಗಳನ್ನು ನೆಡಲಾಗಿದೆ. ಪಾದಚಾರಿಗಳ ತಲೆಗೆ ಹೊಡೆಯುವ ರೀತಿಯಲ್ಲಿ ಕಂಬಗಳಿವೆ.ನಗರದ ಕೆ.ಎಸ್. ರಾವ್ ರೋಡಿನಿಂದ ರಾಮಭವನ ರಸ್ತೆಗೆ ಸಾಗುವ ಫುಟ್ ಪಾತ್ ನಲ್ಲಿ ಇಂತಹ ದೃಶ್ಯ ಕಾಣಸಿಗುತ್ತದೆ. ಬಣ್ಣದ ಫುಟ್ ಪಾತ್ ನಲ್ಲೇ ವಿದ್ಯುತ್ ಕಂಬಗಳನ್ನು ನೆಡಲಾಗಿದೆ.

ಸ್ಮಾರ್ಟ್ ಮಂಗಳೂರಿಗೆ ಇದು ಕಪ್ಪು ಚುಕ್ಕೆಯಾಗಿದೆ. ನಡೆದು ಕೊಂಡು ಹೋಗುವ ಫುಟ್ ಪಾತ್ ನ್ನು ಮೆಸ್ಕಾಂ ಕಂಬಕ್ಕೆ ಬಳಸಿದರೆ ಅಂಗಡಿ ಎದುರಿನ ತಗ್ಗು ಜಾಗದಲ್ಲಿ ವಾಹನ ನಿಲ್ಲಿಸೋದು ತಪ್ಪೇ ಎಂದು ಕೆಲವು ವಾಹನ ಮಾಲೀಕರು ಪ್ರಶ್ನಿಸುತ್ತಾರೆ.
ಇತ್ತ ಪೊಲೀಸ್ ಫುಟ್ ಭತ್ ನಲ್ಲಿ ನಿಲ್ಲಿಸಿದ ವಾಹನಗಳನ್ನು ಲಾಕ್ ಹಾಕಿ ಫೈನ್ ಹಾಕುವ ಪ್ರಕ್ರಿಯೆ ಮಾಡಿಕೊಂಡಿದ್ದಾರೆ. ಅನೇಕ ಶಾಪ್ ಗಳು ಪಾರ್ಕಿಂಗ್ ಜಾಗವನ್ನೇ ನುಂಗಿವೆ. ಬಹುತೇಕ ಅಂಗಡಿಗಳಿಗೆ ಪಾರ್ಕಿಂಗ್ ಇಲ್ಲ. ಪಾರ್ಕಿಂಗ್ ಸಮಸ್ಯೆಯ ಪಾಲಿಕೆ ತಲೆಕೆಡಿಸಿಕೊಂಡಂತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು