ಇತ್ತೀಚಿನ ಸುದ್ದಿ
ಅಭಿಮನ್ಯು ಆನೆಗೆ ಅನಾರೋಗ್ಯ: ಆಪರೇಷನ್ ಭೈರ ಕಾರ್ಯಾಚರಣೆ ಸ್ಥಗಿತ; ದುಬಾರೆ, ನಾಗರಹೊಳೆಗೆ ವಾಪಸ್
06/11/2022, 18:57

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ:ಕೆಲ ದಿನಗಳ ಹಿಂದೆ ಊರುಬಗೆ ಗ್ರಾಮಕ್ಕೆ ಆಪರೇಷನ್ ಭೈರ ಕಾರ್ಯಾಚರಣೆಗೆ ಆಗಮಿಸಿದ ಅಭಿಮನ್ಯು ಆನೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಜ್ವರ ಹಾಗೂ ಬೇದಿಯಿಂದಾಗಿ ಅಭಿಮನ್ಯು ಬಳಲುತ್ತಿದ್ದು ಆಪರೇಷನ್ ಭೈರ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಕಾರ್ಯಾಚರಣೆಗೆ ಬಂದಿರುವ ಇನ್ನೆರಡು ಆನೆಗಳಾದ ಅಜಯ್, ಗೋಪಾಲಸ್ವಾಮಿ ಎಂಬ ಆನೆಗಳಿಗೆ ಮದ ಬಂದಿರುವುದರಿಂದ ಅವುಗಳನ್ನು ಕಾರ್ಯಾಚರಣೆಗೆ ಬಳಸಲು ಅಸಾಧ್ಯವಾಗಿದೆ.
ಇದರಿಂದಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದ್ದು ಎಲ್ಲಾ ಸಾಕಾನೆಗಳನ್ನು ದುಬಾರೆ ಹಾಗೂ ನಾಗರಹೊಳೆಗೆ ಕಳಿಸಿಕೊಡಲಾಗಿದೆ.