2:08 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ದಲಿತ ಯುವಕನ ಮೇಲೆ ಶಾಸಕರ ಆಪ್ತನಿಂದ ಹಲ್ಲೆ ಆರೋಪ; ಉಪ ಅಧೀಕ್ಷಕರ ಕಚೇರಿಗೆ ಮುತ್ತಿಗೆ

03/11/2022, 19:36

ವಿ.ಜಿ. ವೃಚಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಮೆಜಾನ್ ಕಚೇರಿಯಲ್ಲಿ ಕೆಲಸ ಮಾಡುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬದ ಯುವಕ ನಾಗರಾಜ್ ನಿರ್ಕಲಪ್ಪನವರ್ ಮೇಲೆ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಆಪ್ತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಶಾಸಕರ ಆಪ್ತ ನೆಂದು ತನ್ನನ್ನ ತಾನೇ ಗುರುತಿಸಿಕೊಳ್ಳೊ ಮೂಲಕ ತಾಲೂಕು ಹಾಗೂ ನೆರೆ ಹೊರೆ ತಾಲೂಕಿನಾದ್ಯಂತ ನಿತ್ಯ ಸಾವಿರಾರು ಲೀಟರ್ ಮದ್ಯ ಬೈಕ್ ಗಳ ಮೂಲಕ ಸಾಗಿಸಿ ಮಾರಾಟದಲ್ಲಿ ತೊಡಗಿಕೊಂಡು ವೈನ್ ಲೋಕದ ಕಿಂಗ್ ಪಿನ್ ಎಂದೆ ಗುರುತಿಸಿ ಕೊಂಡಿರಿವ ಟಿ.ಜಿ.ಮಲ್ಲಿ ಕಾರ್ಜುನನ ನಿಜ ಬಣ್ಣ ಇಂದು ಬಯಲಾಗಿದೆ. ಈತ ಹಾಗೂ ಈತನ ಸಹೋದರ ನಾಗರಾಜ ಗೋಮುಖ ವ್ಯಾಘ್ರಗಳಾಗಿದ್ದಾರೆ ಎಂದು ಕೆಲ ದಲಿತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರು ಎಸ್ಸಿ ಎಸ್ಟಿ ಯುವಕರನ್ನು ತನ್ನ ವೈನ್ ನ್ನು ಅಕ್ರಮ ಸಾಗಾಣಿಕೆ ಮಾಡಲು ದುರುಪಯೋಗಪಡಿಸಿಕೊಂಡು ಅವರಿಗೆ ಬಿಡಿಗಾಸು ಕೊಟ್ಟು ತಾನು ಮಾತ್ರ ಆರ್ಗರ್ಭ ಶ್ರೀಮಂತನಾಗಲು ದಲಿತ ಯುವಕರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ ಎಂಬ ಗಂಭೀರ ಆರೋಪವಿದೆ. ತಾಲೂಕು ಹಾಗೂ ನೆರೆ ಹೊರೆತಾಲೂಕುನಾದ್ಯಂತ ವೈನ್ ಅಕ್ರಮ ವ್ಯಾಪಾರ ಮಾಡೋ ಮೂಲಕ ಗುರುತಿಸಿಕೊಂಡಿದ್ದ, ಅಕ್ರಮ ವ್ಯಾಪಾರಕ್ಕಾಗಿ ಶಾಸಕರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಪಟ್ಟಣದ ಅಶ್ಟಮೇಧ ಗ್ರೂಪ್ಸ್ ಮಾಲೀಕನಾದ ಮಲ್ಲಿಕಾರ್ಜುನ್ ಗೌಡ, ಹಾಗೂ ಆತನ ಸಹೋದರ ನಾಗರಾಜ್ ಗೌಡ ತಮ್ಮ ಸಹಚರರೊಡಗೂಡಿ ಎಲ್ಲರೂ ಸೇರಿ ಅಮಾಯಕ ದಲಿತ ಯುವಕ ನಾಗರಾಜನ ನಿರ್ಕಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂದು ಆರೋಪ ಕೇಳಿಬಂದಿದೆ. ಸಂಬಂಧಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರುವ ಹಾಗೂ ಕಚೇರಿ ಅತಿಕ್ರಮ ಪ್ರವೇಶ, ಹಲ್ಲೆ ಮತ್ತು ಎಸ್ಟಿ ಎಸ್ಸಿ ಕಾಯ್ದೆಯಡಿ ಜಾತಿ ನಿಂದನೆ ಆರೋಪದ ಪ್ರಖರಣ ದಾಖಲಾಗಿದೆ. ಹಲ್ಲೆಗೊಳಗಾದ ನಾಗರಾಜ ಚಿಕಿತ್ಸೆ ಪಡೆಯುತ್ತಿದ್ದಾನೆ, ಹಲ್ಲೆ ಮಾಡಿರುವ ಟಿ.ಜಿ.ಮಲ್ಲಿಕಾರ್ಜುನ ಗೌಡ್ರು ಹಾಗೂ ಸಹೋದರ ಶಿಕ್ಷಕ ಟಿ.ಜಿ.ನಾಗರಾಜ ಗೌಡ ಅನಾರೋಗ್ಯದ ನೆಪ ವಡ್ಡಿದ್ದಾರೆಂದು ಕೇಳಿ ಬಂದಿದೆ. ಇದೆಲ್ಲಾ ನಾಟಕವೆಂದು ಪ್ರಕರಣದಡಿ ಬಂಧನ ಭೀತಿಯ ಕಾರಣ ತಪ್ಪಿಸಿಕೊಳ್ಳೋ ನಾಟಕವಾಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ವೀರಶೈ ಸಮುದಾಯದ ಹೆಸರು ಹೇಳಿಕೊಂಡು ಶಾಸಕರ ಹತ್ತಿರ ಗುರುತಿಸಿಕೊಳ್ಳೋ ಟಿ.ಜಿ.ಮಲ್ಲಿಕಾರ್ಜುನ ಗೌಡ, ಸಮುದಾಯಕ್ಕೆ ಮಾಡಿರೋ ಸೇವೆ ಶೂನ್ಯ ಇಂತಹ ಪಾಖಂಡಿಯನ್ನ ಹತ್ತಿರ ಇಟ್ಟುಕೊಂಡಿರುವ ಹಿರಿಯ ಶಾಸಕರ ಪ್ರತಿಷ್ಠೆಗೆ ಧಕ್ಕೆಯಾಗೋದಂತು ಖಾಯಂ, ಅದರ ಪ್ರಭಾವ ಮುಂಬರುವ ಚುನಾವಣೆಯಲ್ಲಿ ಫಲಿತಾಂಶ ನೀಡಲಿದೆ ಎಂದು ಹಿರಿಯ ನಾಗರೀಕರು ಹಾಗೂ ವೀರಶೈವ ಸಮಾಜದ ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ; ಕೂಡ್ಲಿಗಿ ಉಪ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಯುವಕರು ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು