ಇತ್ತೀಚಿನ ಸುದ್ದಿ
ಪುತ್ತೂರಿನ ಆನಂದಾಶ್ರಮದಲ್ಲಿ ದೀಪಾವಳಿ ಹಬ್ಬ ಆಚರಣೆ: ಸಾಂಸ್ಕೃತಿಕ ವೈಭವ
30/10/2022, 22:44
ಪುತ್ತೂರು(reporterkarnataka.com)
ಐ ಕ್ಯೂ ಎಸ್ ಸಿ, ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆನಂದಾಶ್ರಮದ ಜಂಟಿ ಆಶ್ರಯದಲ್ಲಿ ಪುತ್ತೂರಿನ ಆನಂದಾಶ್ರಮದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅತಿಥಿಯಾಗಿ ವಿವೇಕಾನಂದ ಕಾಲೇಜು ಪುತ್ತೂರಿನ, ನಿವೃತ್ತ ಕಚೇರಿ ಅಧೀಕ್ಷಕ ಪಿ. ಕುನಿಯಣ್ಣ ಗೌಡ ಆಗಮಿಸಿದ್ದರು. ಡಾ. ಗೌರಿ ಪೈ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀನಾಥ್ ಹಾಗೂ ವಿದ್ಯಾ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಯು ತಮ್ಮ ದೀಪಾವಳಿಯ ದಿನಗಳನ್ನು ಮೆಲುಕು ಹಾಕಿ ಎಲ್ಲರಿಗೂ ಈ ದೀಪಾವಳಿ ಶುಭವನ್ನು ತರಲಿ ಎಂದು ಹಾರೈಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಆಶ್ರಮದವರೊಂದಿಗೆ ಕೂಡಿ ದೀಪಗಳನ್ನು ಬೆಳಗಿಸಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು.