ಇತ್ತೀಚಿನ ಸುದ್ದಿ
ತಲೆನೋವು: ಮಂಚಿ ನಿವಾಸಿ ಕಾಲೇಜು ವಿದ್ಯಾರ್ಥಿನಿ ಆಕಸ್ಮಿಕ ಸಾವು
25/10/2022, 18:38

ಬಂಟ್ವಾಳ(reporterkarnataka.com): ತಲೆ ನೋವಿನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಮಂಚಿಯಲ್ಲಿ ನಡೆದಿದೆ.
ಮಂಚಿ ಸಮೀಪದ ನಿವಾಸಿ ರತಿ ಎಂಬವರ ಮಗಳು ಭವ್ಯಾ (20) ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭವ್ಯಾ ವಿದ್ಯಾಭ್ಯಾಸ ಮಾಡುತ್ತಿದ್ದರು. ತಲೆನೋವಿಗೆ ಇತ್ತೀಚೆಗೆ ಸ್ಥಳೀಯ ವೈದ್ಯರಲ್ಲಿ ಔಷಧಿ ಪಡೆದಿದ್ದಳು. ಸೋಮವಾರ ರಾತ್ರಿ ಸುಮಾರು 7 ಗಂಟೆ ವೇಳೆ ತಲೆ ನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಳು.
ರಾತ್ರಿ ವೇಳೆ ತಲೆ ನೋವು ಜಾಸ್ತಿಯಾಗಿ ಮತ್ತೆ ವಾಂತಿ ಮಾಡಿದ್ದಳು. ನಂತರ ಮುಂಜಾನೆ ವೇಳೆಗೆ ಭವ್ಯಾಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವೈದ್ಯರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ವೆನ್ಲಾಕ್ ಗೆ ಅಂಬ್ಯುಲೆನ್ಸ್ ನಲ್ಲಿ ಸಾಗಿಸುವ ದಾರಿ ಮಧ್ಯೆ ಭವ್ಯಾ ಮೃತಪಟ್ಟಿದ್ದಾರೆ.ಇದೀಗ ಭವ್ಯಾ ಮರಣೋತ್ತರ ಪರೀಕ್ಷೆ ನಡೆದಿದೆ