1:02 PM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಬೆಂಕಿ ಅನಾಹುತ: ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಅಣಕು ಕಾರ್ಯಾಚರಣೆ

14/10/2022, 00:00

ಮಂಗಳೂರು(reporterkarnataka.com): ಇಂಟರ್ ನ್ಯಾಷನಲ್ ಡಿಸಾಸ್ಟರ್ ರಿಸ್ಕ್ ರಿಡಕ್ಷನ್ ಡೇ (ಅಂತಾರಾಷ್ಟ್ರೀಯ ಸಂಭಾವ್ಯ ದುರಂತಗಳ ಮಿತಗೊಳಿಸುವ ದಿನ)ದ ಅಂಗವಾಗಿ ನಿಟ್ಟೆ ಜಸ್ಟಿಸ್ ಕೆ.ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆಯ ಬೆಂಕಿ ಹಾಗೂ ಸುರಕ್ಷತಾ ವಿಭಾಗದ ಆಶ್ರಯದಲ್ಲಿ ಆಸ್ಪತ್ರೆ ಕಟ್ಟಡದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಆಸ್ಪತ್ರೆಯೊಂದರಲ್ಲಿ ಕೈಗೊಂಡ ಅಣಕು ಕಾರ್ಯಚರಣೆ ಯಶಸ್ವಿಯಾಯಿತು.


ಅ.13ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಕ್ಷೇಮ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಕೂಡಲೇ ಅಲಾರಾಂ ಧ್ವನಿ ಎಚ್ಚರಿಸಿತು. ಸಿಬ್ಬಂದಿಗಳು ವಾರ್ಡ್ ಗೆ ಆಗಮಿಸಿದರು, ಅಷ್ಟರಲ್ಲಾಗಲೇ ರೋಗಿಗಳು ಹಾಗೂ ಸಂಬಂಧಿಕರು ಓಡಾಡಲು ಆರಂಭಿಸಿದ್ದರು. ಅಗ್ನಿಶಾಮಕ ದಳದವರು ಆಸ್ಪತ್ರೆಗೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು, ಈ ಸಂದರ್ಭದಲ್ಲಿ ಆಸ್ಪತ್ರೆ ಕಟ್ಟಡದ ಎರಡನೇ ಮಹಡಿಯ ಹೊರಗಿನಿಂದ ಎನ್ ಡಿ ಆರ್ ಎಫ್ ತಂಡದ ಸದಸ್ಯರು ಒಳನುಗ್ಗಿ ಅಲ್ಲಿನ ರೋಗಿಗಳನ್ನು ಕೆಳಗಿಳಿಸುವ ಕಾರ್ಯದಲ್ಲಿ ತೊಡಗಿದರು, ಎರಡು ಗಂಟೆಗಳ ನಡೆದ ಕಾರ್ಯಚರಣೆ ಯಶಸ್ವಿಯಾಯಿತು.
ಈ ಅಣಕು ಕಾರ್ಯಾಚರಣೆಯ ನಂತರ ಆಸ್ಪತ್ರೆಯ ಆವಿಷ್ಕಾರ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದ್ದ ಸಮರೂಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಆಸ್ಪತ್ರೆಯಲ್ಲಿ ಎನ್‌.ಡಿ. ಆರ್.ಎಫ್, ಎಸ್.ಡಿ.ಆರ್.ಎಫ್ ಸೇರಿದಂತೆ ವಿವಿಧ ತಂಡಗಳೊಂದಿಗೆ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ, ಅದು ಯಶಸ್ವಿಯಾಗಿದ್ದು, ಇದು ಮಾದರಿ ಕಾರ್ಯಾಚರಣೆ ಎಂದು ಬಣ್ಣಿಸಿದರು.

ಣಕು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಾಗುವುದು ಸಹಜ, ಆದರೆ ನೈಜ ದುರಂತಗಳು ಸಂಭವಿಸಿದಾಗ ಅಣಕು ಕಾರ್ಯಾಚರಣೆಯಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ, ಆಗಾಗ್ಯೆ ಈ ರೀತಿಯ ಅಣಕು ಕಾರ್ಯಾಚರಣೆಗಳು ನಡೆಯಬೇಕು ಎಂದರು.


ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ವಿಜಯಕುಮಾರ್ ಪೂಜಾರಿ, ನಿಟ್ಟೆ ತಾಂತ್ರಿಕ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಜಿ. ಶ್ರೀನಿಕೇತನ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಮ್ಮದ್ ನವಾಜ್, ಎಸ್ ಡಿ ಆರ್ ಎಫ್ ಉಪ ಕಮಾಂಟೆಂಟ್ ಶರತ್, ಎನ್ ಡಿ ಆರ್ ಎಫ್ ಟಿಂ ಕಮಾಂಡರ್ ಶಿಬು ಕುಮಾರ್ ಭಾಗವಹಿಸಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು