4:16 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಮರಳಿ ಬಂದಿದೆ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ)!: 15ನೇ ಆವೃತ್ತಿ ಘೋಷಣೆ

12/10/2022, 21:27


*ರೋಟರಿ ಬೆಂಗಳೂರು ಐಟಿ ಕಾರಿಡಾರ್ನಿಂದ ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಏಷ್ಯಾದ ಏಕೈಕ ಮಧ್ಯರಾತ್ರಿ ಮ್ಯಾರಥಾನ್ನ 15ನೇ ಆವೃತ್ತಿ ಘೋಷಣೆ
*ಬಹುನಿರೀಕ್ಷಿತ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ 2022ಕ್ಕೆ ನೋಂದಣಿ ಆರಂಭ.
ಈ ವರ್ಷದ ಹೊಸತು- ಬಿಎಂಎಂ 2022ರಲ್ಲಿ ವೇಗದ 5 ಕಿ.ಮೀ. ಓಟ (ಟೈಮ್ಡ್)
•ನೋಂದಣಿ ಮತ್ತು ತರಬೇತಿಗಾಗಿ ಫಿಟ್ಪೇಜ್ನ `ಇಂಡಿಯಾ ರನ್ನಿಂಗ್’ ಜೊತೆ ಸಹಯೋಗ
•ನೋಂದಣಿ ಮಾಡಲು www.midnightmarathon.inಅಥವಾ https://registrations.indiarunning.com/bmm-2022ಗೆ ಲಾಗಿನ್ ಆಗಿ
•ಈ ವರ್ಷದ ಬಿಎಂಎಂ ಮ್ಯಾರಥಾನ್ನ ಥೀಮ್ `ಮತ್ತೆ ಮುಕ್ತವಾಗಿ ಓಡಿ’ (ರನ್ ಫ್ರೀಲಿ ಅಗೇನ್)
•ಕಳೆದ ಆವೃತ್ತಿಗಿಂತ ಈ ಸಲ ವಿಜೇತ ಓಟಗಾರರಿಗೆ ಬಹುಮಾನದ ಮೊತ್ತ 40% ಅಧಿಕ

ಬೆಂಗಳೂರು(reporterkarnataka.com): ಜಗತ್ತಿನ ಮೊಟ್ಟಮೊದಲ ರಾತ್ರಿ ಮ್ಯಾರಥಾನ್ಗೆ ಈಗ 15 ವರ್ಷದ ಹರೆಯ!! ದೇಶದ ಅತ್ಯಂತ ಹಳೆಯ ಹಾಗೂ ಈ ಮಾದರಿಯ ಏಕೈಕ ಮಧ್ಯರಾತ್ರಿ ಮ್ಯಾರಥಾನ್ ಆಗಿರುವ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ (ಬಿಎಂಎಂ)ನ 15ನೇ ಆವೃತ್ತಿಗೆ ಅಕ್ಟೋಬರ್ 06, 2022ರಿಂದ ನೋಂದಣಿ ಆರಂಭವಾಗಿದೆ. ಅಸೋಸಿಯೇಷನ್ ಆಫ್ ಇಂಟರ್ನ್ಯಾಷಲ್ ಮ್ಯಾರಥಾನ್ಸ್ ಹಾಗೂ ಡಿಸ್ಟೆನ್ಸ್ ರೇಸಸ್ (ಎಐಎಂಎಸ್)ನ ಸದಸ್ಯನಾಗಿರುವ ಬಿಎಂಎಂ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಮ್ಯಾರಥಾನ್ ಸ್ಪರ್ಧೆಯಾಗಿ ಬೆಳೆದಿದೆ. ಕಳೆದ 14 ವರ್ಷಗಳಿಂದ ಯಶಸ್ವಿಯಾಗಿ ಮ್ಯಾರಥಾನ್ ನಡೆಸಿರುವ ಬಿಎಂಎಂ ಇಂದು 12,000+ ಸ್ಪರ್ಧಿಗಳ ಬಲದೊಂದಿಗೆ ಜಗತ್ತಿನ ಮುಂಚೂಣಿ ಮ್ಯಾರಥಾನ್ಗಳಲ್ಲಿ ಒಂದಾಗಿ ಹೆಸರು ಗಳಿಸಿದೆ.
ಈ ವರ್ಷದ ಬಿಎಂಎಂ ಮ್ಯಾರಥಾನ್ಗೆ ಅತ್ಯಂತ ಸೂಕ್ತವಾದ `ಮತ್ತೆ ಮುಕ್ತವಾಗಿ ಓಡಿ’ ಎಂಬ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳ ಕಾಲ ನಮ್ಮೆಲ್ಲರ ಬದುಕನ್ನು ಕೋವಿಡ್-19 ಸಾಂಕ್ರಾಮಿಕ ನಿಯಂತ್ರಿಸುತ್ತಿತ್ತು. ಈಗ ಅದರ ಕಪಿಮುಷ್ಟಿಯಿಂದ ಹೊರಬಂದು ಮತ್ತೆ ಮುಕ್ತವಾಗಿ ಆನಂದಿಸುವ ಕಾಲ. ಹೀಗಾಗಿ ಸಾವಿರಾರು ವೃತ್ತಿಪರ ಓಟಗಾರರು, ಅಂತಾರಾಷ್ಟ್ರೀಯ ಅಥ್ಲೀಟ್ಗಳು, ಬೆಂಬಲಿಗರು, ಕಾರ್ಪೊರೇಟ್ಗಳು ಹಾಗೂ ಎನ್ಜಿಒಗಳು ರೋಟರಿ
ಬೆಂಗಳೂರು ಐಟಿ ಕಾರಿಡಾರ್ (ಆರ್ಬಿಐಟಿಸಿ) ಆಯೋಜಿಸಿರುವ ಈ ವರ್ಷದ ಬಿಎಂಎಂ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ಡಿಸೆಂಬರ್ 10, 2022ರ ಶನಿವಾರ ವೈಟ್ಫೀಲ್ಡ್ನ ಕೆಟಿಪಿಒದಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ.
ಫುಲ್ ಮ್ಯಾರಥಾನ್ ಹಾಗೂ ಹಾಫ್ ಮ್ಯಾರಥಾನ್ ಸೇರಿದಂತೆ ಎಲ್ಲಾ ರೀತಿಯ ಓಟಗಳಿಗೂ ಆನ್ಲೈನ್ ನೋಂದಣಿ ಆರಂಭಿಸಲಾಗಿದೆ. ಆಸಕ್ತರು www.midnightmarathon.inವೆಬ್ಸೈಟ್ಗೆ ಲಾಗಿನ್ ಆಗಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಡಿಸೆಂಬರ್ 10, 2022ರಂದು ನಡೆಯುವ ಪ್ರಮುಖ ಓಟಗಳಲ್ಲಿ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಮುಕ್ತ ಓಟ, ಐಟಿ ಸಿಟಿ ಫನ್ ರನ್ (5 ಕಿ.ಮೀ.), ಕಾರ್ಪೊರೇಟ್ ರಿಲೇ ಸ್ಪರ್ಧೆ, ಫಿಟ್ಟೆಸ್ಟ್ ಸ್ಟಾರ್ಟಪ್ ಚಾಲೆಂಜ್ ರಿಲೇ ಹಾಗೂ ಹೊಸತಾಗಿ ಈ ವರ್ಷ ಸೇರ್ಪಡೆಯಾದ ವೇಗದ 5ಕೆ ಓಟ (ಟೈಮ್ಡ್) ಸೇರಿವೆ.
ಈ ಕುರಿತು ಮಾಹಿತಿ ನೀಡಿದ ಬಿಎಂಎಂ 2022 ಚೇರ್ಮನ್ ವಿರಾಫ್ ಎಂ. ಸುತಾರಿಯಾ, “ಬಿಎಂಎಂ ಮ್ಯಾರಥಾನ್ನ ಪ್ರಸಕ್ತ ಆವೃತ್ತಿಯಿಂದ ನೋಂದಣಿ ಮತ್ತು ತರಬೇತಿ ಪಾಲುದಾರರಾಗಿ ಫಿಟ್ಪೇಜ್ನ ಇಂಡಿಯಾ ರನ್ನಿಂಗ್ ಜೊತೆ ಸಹಭಾಗಿತ್ವ ಹೊಂದಿರುವುದು ನಮಗೆ ಸಂತಸ ತಂದಿದೆ. ಈ ಪಾಲುದಾರಿಕೆಯ ಮೂಲಕ ನಾವು ಹೆಚ್ಚಿನ ಆಸಕ್ತರನ್ನು ತಲುಪುತ್ತೇವೆಂಬ ನಿರೀಕ್ಷೆಯಿದೆ. ಜೊತೆಗೆ ಈ ಪಾಲುದಾರಿಕೆಯ ಮೂಲಕ ನಮ್ಮ ವೃತ್ತಿಪರ ಹಾಗೂ ಹವ್ಯಾಸಿ ಓಟಗಾರರಿಗೆ ಸಾಕಷ್ಟು ಅಗತ್ಯವಿರುವ ತರಬೇತಿಯನ್ನೂ ನೀಡಲಿದ್ದೇವೆ. ಈ ವರ್ಷದ ವಿಶೇಷವೆಂದರೆ ಹೊಸದಾಗಿ ವೇಗದ 5ಕೆ ಓಟ ಸೇರಿಸಿರುವುದು. ದೀರ್ಘ ಅಂತರದ ವೇಗದ ಓಟಗಾರರಿಗೆ ಇದು ಹೆಚ್ಚು ಖುಷಿ ಕೊಡಲಿದೆ” ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಮ್ಯಾರಥಾನ್ ಓಟಗಳು ಅತಿಹೆಚ್ಚು ಜನರು ಪಾಲ್ಗೊಳ್ಳುವ ಕ್ರೀಡೆಯಾಗಿ ಹೆಸರು ಪಡೆದಿವೆ. ಅದರಲ್ಲೂ ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಬೆಂಗಳೂರಿನಂತಹ ನಗರಗಳಲ್ಲಿ ಮ್ಯಾರಥಾನ್ಗೆ ಜನರು ಸಾಕಷ್ಟು ಆಸಕ್ತಿ ತೋರುತ್ತಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 200,000ಕ್ಕೂ ಹೆಚ್ಚು ಓಟಗಾರರು ನಾನಾ ವಿಧದ ಸಾಮಾಜಿಕ ಹಾಗೂ ಸಹಾಯಾರ್ಥ ಉದ್ದೇಶಗಳಿಗಾಗಿ ಅರಿವು ಮೂಡಿಸಲು ಬೇರೆ ಬೇರೆ ಕಡೆ ಆಯೋಜನೆಯಾಗುವ ಅಂತಾರಾಷ್ಟ್ರೀಯ ಮ್ಯಾರಥಾನ್ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವುಗಳಲ್ಲಿ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಪ್ರತ್ಯೇಕ ವೈಶಿಷ್ಟ್ಯತೆಯನ್ನೇ ಪಡೆದಿದೆ. 2007ರಿಂದ 2019ರ ನಡುವೆ 14 ಅಂತಾರಾಷ್ಟ್ರೀಯ ಮ್ಯಾರಥಾನ್ಗಳು ಬಿಎಂಎಂ ಬ್ಯಾನರ್ ಅಡಿ ಆಯೋಜನೆಯಾಗಿವೆ. ಈ ವರ್ಷದ ಮ್ಯಾರಥಾನ್ನಲ್ಲಿ 17 ದೇಶಗಳ 12,000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನ ಜನರು ಹಾಗೂ ಇಲ್ಲಿನ ಸಂಸ್ಕøತಿಯ ಈ ಸಂಭ್ರಮದಲ್ಲಿ ಇವರೆಲ್ಲ ಕೈಜೋಡಿಸಲಿದ್ದಾರೆ.
ಮ್ಯಾರಥಾನ್ ಓಟದ ದಿನ ಸ್ಪರ್ಧಿಗಳಿಗಾಗಿ ಹಾಗೂ ಪಾಲ್ಗೊಳ್ಳುವ ಸಮಸ್ತರಿಗಾಗಿ ಲೈವ್ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಬಹು ವೈವಿಧ್ಯದ ಫುಡ್ ಕೋರ್ಟ್ಗಳು ಇರಲಿವೆ. ಓಟಗಾರರು ಹಾಗೂ ಅವರ ಬೆಂಬಲಿಗರನ್ನು ಇಡೀ ರಾತ್ರಿ ಇವು ಲವಲವಿಕೆಯಿಂದ ಇರಿಸಲಿವೆ.
ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್ಬಿಐಟಿಸಿ) ವತಿಯಿಂದ ಆಯೋಜಿಸುವ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ನ ಮೊದಲ ಆವೃತ್ತಿ 2007ರ ಮೇ 19ರಂದು ನಡೆದಿತ್ತು. ಅಂದಿನಿಂದ ಆರಂಭಿಸಿ ಈವರೆಗೆ ಪ್ರತಿ ವರ್ಷವೂ ಬಿಎಂಎಂಗೆ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.
ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್ಬಿಐಟಿಸಿ) ಅಧ್ಯಕ್ಷೆ ಡಾ.ಸೀಮಂತಿನಿ ದೇಸಾಯಿ ಮಾತನಾಡಿ, “ಆರ್ಬಿಐಟಿಸಿಯ ಸಾಮಾಜಿಕ ಕಳಕಳಿಯ ಯೋಜನೆಗಳಿಗೆ ನಿಧಿ ಸಂಗ್ರಹಿಸುವ ಅತ್ಯಂತ ಪ್ರಮುಖ ಕಾರ್ಯಕ್ರಮ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಆಗಿದೆ. ನಮ್ಮ ಸಂಸ್ಥೆಯ ವತಿಯಿಂದ ಶಿಕ್ಷಣ, ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಸೇವಾ ಕಾರ್ಯಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಕಳೆದ 15 ವರ್ಷಗಳಲ್ಲಿ ನಾವು 25 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಹಾಯಾರ್ಥ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಕಳೆದ 14 ಆವೃತ್ತಿಗಳಲ್ಲಿ ಸಂಗ್ರಹಿಸಿದ ನಿಧಿಯನ್ನು ಸೌಲಭ್ಯವಂಚಿತರ ಕಲ್ಯಾಣಕ್ಕಾಗಿ ಅತ್ಯಂತ ಸೃಜನಶೀಲ ಕಾರ್ಯಕ್ರಮಗಳ ಮೂಲಕ ವ್ಯಯಿಸಿದ್ದೇವೆ. ತನ್ಮೂಲಕ ಅವರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ತರಲು ಯತ್ನಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ಬಿಎಂಎಂ 2022ರ ರೇಸ್ ಡೈರೆಕ್ಟರ್ ಗುಲ್ ಮೊಹಮದ್ ಮಾತನಾಡಿ, “ಆರಂಭದಿಂದಲೂ ಆರ್ಬಿಐಟಿಸಿಯ ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ರಾತ್ರಿ ವೇಳೆ ನಡೆಯುವ ಏಕೈಕ ಮ್ಯಾರಥಾನ್ ಎಂಬ ಹೆಗ್ಗಳಿಕೆಯನ್ನು
ಕೂಡ ಇದು ಹೊಂದಿದೆ. ಬೆಂಗಳೂರಿನ ಸ್ಫೂರ್ತಿ ಹಾಗೂ ಸೃಜನಶೀಲತೆಯನ್ನು ಸಂಭ್ರಮಿಸಲು ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ನಮ್ಮೆಲ್ಲರ ಆಶಾಕಿರಣವಾಗಿ ಹೊರಹೊಮ್ಮಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಬಿಎಂಎಂ ಮ್ಯಾರಥಾನ್ ಬಗ್ಗೆ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ www.midnightmarathon.in

More on the race at www.midnightmarathon.in

BMM 2022 Events and Schedule on Race Day – December 10, 2022

1. Community Relay 5 x 500m. each 04:30 pm
2. Fast 5K Run (timed) 5 km. 06:30 pm
3. 5K IT City Fun Run 5 km. 06:30 pm
4. Prime VP FittestStartupChallenge Relay 4 x 5 km. each 08:15 pm
5. Airbus Corporate Relay 4 x 5 km. each 08:20 pm
6. Open 10K Run 10 km. 08:30 pm
7. Full Marathon 42.195 km. 11:00 pm
8. Half Marathon 21.097 km. 11:10 pm

ಇತ್ತೀಚಿನ ಸುದ್ದಿ

ಜಾಹೀರಾತು