2:05 AM Friday30 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಜಿಲ್ಲೆಯ ಸಂಸದ, ಶಾಸಕರೇ ಮೌನ ಮುರಿದು ಉತ್ತರಿಸಿ: ಟೋಲ್ ಮುತ್ತಿಗೆ ಪಾದಯಾತ್ರೆಯಲ್ಲಿ ಎಂ.ಜಿ. ಹೆಗಡೆ ಒತ್ತಾಯ

10/10/2022, 19:28

ಮಂಗಳೂರು(reporterkarnataka.com): ಸುರತ್ಕಲ್ ಅಕ್ರಮ ಟೋಲ್ ವಸೂಲಿ ಕೇಂದ್ರದ ವಿರುದ್ಧ ಕಳೆದ ಹಲವು ವರುಷಗಳಿಂದ ನಿರಂತರ ಹೋರಾಟ ಮೂಲಕ ಜಿಲ್ಲೆಯ ಜನ ಪ್ರಬಲ ವಿರೋಧ ದಾಖಲಿಸುತ್ತಿದ್ದರೂ ಇಲ್ಲಿನ ಸಂಸದರಾಗಲಿ, ಶಾಸಕರುಗಳಾಗಲಿ ಯಾರೂ ಮಾತನಾಡದೆ ಮೌನವಹಿಸುತ್ತಿರುವುದರ ಹಿಂದಿನ ಗುಟ್ಟೇನು? ವ್ಯಾಪಕ ವಿರೋಧ ವ್ಯಕ್ತವಾಗಿರುವ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ಬಗ್ಗೆ ಜನಪ್ರತಿನಿಧಿಗಳು ಮೌನ ಮುರಿದು ಉತ್ತರಿಸಬೇಕೆಂದು ಜನಪರ ಹೋರಾಟಗಾರ ಎಂ.ಜಿ. ಹೆಗಡೆ ಆಗ್ರಹಿಸಿದರು.


ಅವರು ಅಕ್ಟೋಬರ್ 18ರಂದು ನಡೆಯುವ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ನೇರ ಕಾರ್ಯಾಚರಣೆ, ಮುತ್ತಿಗೆ ಕಾರ್ಯಕ್ರಮದ ಪ್ರಚಾರದ ಭಾಗವಾಗಿ ಇಂದು
ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಲೇಡಿಗೋಶನ್ ವರೆಗೆ ನಡೆದ ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವ ನಿರ್ಣಾಯಕ ಹೋರಾಟದ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ತಯಾರಿಗಳು, ಚರ್ಚೆಗಳು ನಡೆಯುತ್ತಿದ್ದರೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕರುಗಳಾದ ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್, ವೇದವ್ಯಾಸ್ ಕಾಮತ್ ಯಾರೂ ಈ ಬಗ್ಗೆ ಮಾತನಾಡದೆ ಜನರ ಬೇಡಿಕೆಗೆ ಸ್ಪಂದಿಸದೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. ಇವರ ಈ ಮೌನವನ್ನು ಮುರಿಯಲು ಅಕ್ಟೋಬರ್ 18ರಂದು ನಡೆಯುವ ಐತಿಹಾಸಿಕ ಹೋರಾಟ ಸಾಕ್ಷಿಯಾಗಬೇಕು. ಅಂದು ನಡೆಯುವ ಟೋಲ್ ಗೇಟ್ ಮುತ್ತಿಗೆ, ನೇರ ಕಾರ್ಯಾಚರಣೆ ದಿನ ಜಿಲ್ಲೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.

ಪಾದಯಾತ್ರೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಜೆಡಿಎಸ್ ಜಿಲ್ಲಾ ಮುಖಂಡರಾದ ಸುಮತಿ ಎಸ್ ಹೆಗ್ಡೆ, ಸಿಪಿಎಂನ ಸುನೀಲ್ ಕುಮಾರ್ ಬಜಾಲ್, ಕಾರ್ಪೊರೇಟರ್ ಲತೀಫ್‌ ಕಂದುಕ, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಯಶವಂತ ಮರೋಳಿ, ಸಿಪಿಐ ನ ವಿ ಕುಕ್ಯಾನ್, ಸೀತರಾಮ್ ಬೇರಿಂಜೆ, ಕರುಣಾಕರ್, ಜೆಡಿಎಸ್ ನ ಶುಶೀಲ್ ನರೋನ್ಹಾ, ಅಲ್ತಫ್ ತುಂಬೆ, ಸಾಮರಸ್ಯ ಮಂಗಳೂರು ಮಂಜುಳಾ ನಾಯಕ್ , ಸಮರ್ಥ್ ಭಟ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ. ಇಮ್ತಿಯಾಜ್, ನವೀನ್ ಕೊಂಚಾಡಿ, ಆಶಾ ಬೋಳೂರು, ಪ್ರಮಿಳಾ ದೇವಾಡಿಗ, ಭಾರತೀ ಬೋಳಾರ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಸಿಐಟಿಯು ಮುಖಂಡರುಗಳಾದ ಮುಸ್ತಫ ಕಲ್ಲಕಟ್ಟೆ, ವಿಲ್ಲಿ ವಿಲ್ಸನ್, ಬಸ್ಸು ನೌಕರರ ಸಂಘದ ಅಲ್ತಫ್ ದೇರಳಕಟ್ಟೆ, ಸಾಮಾಜಿಕ ಮುಖಂಡರುಗಳಾದ ಶಾಹುಲ್ ಹಮೀದ್ , ದುರ್ಗಾ ಪ್ರಸಾದ್, ಎಲ್ಲಪ್ಪ ಮುಂತಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು