10:40 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿದಂತೆ 3 ಮಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 

29/06/2021, 21:04

ಮಂಗಳೂರು(reporterkarnataka news): ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ “ಗೌರವ ಪ್ರಶಸ್ತಿ” ಮತ್ತು ಗೌರವ ಪುರಸ್ಕಾರ ಪ್ರಕಟಿಸಲಾಗಿದೆ.

ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ, ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ, ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಮಂದಿ ಗಣ್ಯರನ್ನು ಅಕಾಡೆಮಿಯು 2021ರ ಸಾಲಿನ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ.50000/- ನಗದು (ಪ್ರಯಾಣ ವೆಚ್ಚ ಮತ್ತು ವಾಸ್ತವ್ಯ ವೆಚ್ಚ ಸೇರಿ) ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪುರಸ್ಕಾರವು ರೂ.10000/- ನಗದು (ಪ್ರಯಾಣ ವೆಚ್ಚ ಮತ್ತು ವಾಸ್ತವ್ಯ ವೆಚ್ಚ ಸೇರಿ) ಶಾಲು, ಹಾರ, ಸ್ಮರಣಿಕೆ ಮತ್ತು ಪುರಸ್ಕಾರ ಪತ್ರಗಳನ್ನು ಒಳಗೊಂಡಿರುತ್ತದೆ. ಕೊರೊನಾದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಈ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪದ್ಮಶ್ರೀ ಸೇರಿದಂತೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲಾ ಪ್ರತಿಷ್ಠಿತ  ಪ್ರಶಸ್ತಿಯನ್ನು ಪಡೆದಿದ್ದರೂ, ಸ್ವತ: ಬ್ಯಾರಿ ಭಾಷಿಕರಾಗಿರುವ ಹರೇಕಳ ಹಾಜಬ್ಬರವರಿಗೆ ಈ ತನಕ ಅಕಾಡೆಮಿಯ ಪ್ರಶಸ್ತಿ ದೊರಕದೇ ಇರುವುದು ವಿಷಾದನೀಯ ಎಂದು ತಿಳಿಸಿದ ರಹೀಂ ಉಚ್ಚಿಲರವರು, ಈ ಬಾರಿಯು ಆ ಕೊರಗನ್ನು ನಿವಾರಿಸಿದ ಸಂತೃಪ್ತಿಯು ನಮಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 

ಗೌರವ ಪ್ರಶಸ್ತಿ -2021

1.ಬ್ಯಾರಿ ಭಾಷೆ ಮತ್ತು ಶಿಕ್ಷಣ ಕ್ಷೇತ್ರ:ಹರೇಕಳ ಹಾಜಬ್ಬ

2.ಬ್ಯಾರಿ ಕಲೆ ಮತ್ತು ಸಾಹಿತ್ಯ ಕ್ಷೇತ್ರ: ಹುಸೈನ್ ಕಾಟಿಪಳ್ಳ 

3.ಬ್ಯಾರಿ ಸಂಸ್ಕೃತಿ ಮತ್ತು ಸಮಾಜಸೇವೆ : ಡಾ.ಇ.ಕೆ.ಎ.ಸಿದ್ದೀಕ್ ಆಡ್ಡೂರು

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪುರಸ್ಕಾರಕ್ಕೆ ಈ ಕೆಳಗಿನ ಗಣ್ಯರು ಆಯ್ಕೆಯಾಗಿರುತ್ತಾರೆ. 

1.ಬ್ಯಾರಿ ಸಂಗೀತ ಕ್ಷೇತ್ರ- ಅಶ್ರಫ್ ಅಪೋಲೋ

2.ಬ್ಯಾರಿ ಸಂಘಟನೆ ಕ್ಷೇತ್ರ- ಡಾ.ಕೆ.ಎ. ಮುನೀರ್ ಬಾವ

3.ಬ್ಯಾರಿ ಮಹಿಳಾ ಸಾಧಕಿ-ಮರಿಯಮ್ ಫೌಝಿಯ ಬಿಯಸ್.

4.ಬ್ಯಾರಿ ಯುವ ಪ್ರತಿಭೆ -ಬ್ಯಾರಿ ಝುಲ್ಫಿ

5.ಬ್ಯಾರಿ ದಫ್ ಕ್ಷೇತ್ರ- ಮೊಹಮ್ಮದ್ ಬಶೀರ್ ಉಸ್ತಾದ್

6.ಬ್ಯಾರಿ ಬಾಲ ಪ್ರತಿಭೆ-ಮೊಹಮ್ಮದ್ ಫರಾಝ್ ಆಲಿ

ಇತ್ತೀಚಿನ ಸುದ್ದಿ

ಜಾಹೀರಾತು