ಇತ್ತೀಚಿನ ಸುದ್ದಿ
ಕಣ್ಣು ದೃಷ್ಟಿ ತೆಗೆಯುವ ಕೆಸವಳಲು ಕೂಡಿಗೆ: ನವ ವಿವಾಹಿತ ಜೋಡಿಗಳು ಬರುತ್ತಾರೆ ಇಲ್ಲಿಗೆ!
10/10/2022, 13:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka gmail.com
ಮೂಡಿಗೆರೆ ತಾಲ್ಲೂಕಿನ ಜೊಗಣಕೆರೆ ಗ್ರಾಮದ ಕೆಸವಳಲು ಕೂಡಿಗೆಗೆ ದಕ್ಷಿಣ ಕರ್ನಾಟಕದ ಹೆಚ್ಚಿನ ಜನ ಬರುತ್ತಾರೆ. ಇದು ಕೆಸವಳಲು ಮತ್ತು ಅಬಚೂರು- ಹಾಲೂರು ಮದ್ಯ ಭಾಗದಲ್ಲಿ ಸೇರುವ ಹೇಮಾವತಿ ಮತ್ತು ಜಪವಾತಿ ನದಿ ಸೇರುವ ಸ್ಥಳಕ್ಕೆ ಕೂಡಿಗೆ ಅನ್ನುತ್ತಾರೆ. ಇಲ್ಲಿ ರಾಮ ದೇವಸ್ಥಾನ ಇದೇ. ಹಾಗೆ ನದಿಗಳು ಸೇರುವ ಜಾಗದಲ್ಲಿ ಆಸ್ರಕೊಂಡ ಇದೇ ಅದೆ ರೀತಿ ಅನಾದಿಕಾಲದಿಂದಲೂ ಕಣ್ಣು ದೃಷ್ಟಿ ತೆಗೆಯುವ ವಿಧಿವಿಧಾನವಿದೆ.
ದೃಷ್ಟಿ ದೋಷ ಆಗುವುದು ನೀಜವಾದರೆ ತೆಗೆಯುವುದು ನಿಜ. ವಿಶೇಷವಾಗಿ ನವ ವಿವಾಹ ಜೋಡಿಗಳು ದೃಷ್ಟಿ ಆಗಿರುತ್ತದೆ ಎಂದು ಹಾಗೆ ಇಲ್ಲಿ ಪ್ರತಿ ವರ್ಷದಲ್ಲಿ ಒಂದೆರಡು ಬಾರಿ ಬಂದು ವ್ಯಾಪಾರ ವಹಿವಾಟುದಾರರು ದೃಷ್ಟಿ ತೆಗೆಸಿಕೊಳ್ಳಲು ಎಲ್ಲಾ ಧರ್ಮದವರು (ಮುಸ್ಲಿಮ್ ಮತ್ತು ಕ್ರೀಶ್ಚಿಯನ್) ಸೇರಿದಂತೆ ಲಕ್ಷಾಂತರ ಜನ ಬಂದು ಹೋಗುತ್ತಾರೆ.
ಹೊಸ ವಾಹನಗಳಿಗೆ ವಿಶೇಷವಾಗಿ ದೃಷ್ಟಿ ಪೊಜೆ , ನವ ಜೋಡಿಗಳಿಗೆ ಬಾಸಿಂಗ ಪೊಜೆ , ಮನೆಯ ಹಾಗೂ ತೋಟದ ಮಣ್ಣು ತಂದು ದೃಷ್ಟಿ ಪೊಜೆ ಮಾಡುತ್ತಾರೆ , ನಿಮಗೆ ಆಗಿರುವ ದೃಷ್ಟಿ ದೋಷ ತೆಗೆಯಲು ನೀವು ಹೋಗಿ ಬನ್ನೀ.
ಇಲ್ಲಿ ಗದ್ದೆ ಕುಯ್ಯುವ ಮೂದಲು ಅಂದರೆ ಹಸಿರು ಫಲ ಕಟಾವು ಮಾಡುವ ಮೊದಲು ಪೊಜೆ ಮಾಡಿಸಿದರೆ ಉತ್ತಮ ಎಂಬ ವಾಡಿಕೆ ಇದೇ
ಹಾಗೆ ಇಲ್ಲಿ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ,ಸಾವಿರಾರು ಜನ ಬರುವ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ , ಕ್ಯಾಂಟಿನ್ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,ಪೂಜೆಗೆ ಒಂದು ಬಾರಿಗೆ ಹತ್ತು ಕುಟುಂಬ ಗಳಿಗೆ ಅವಕಾಶ ಇದೆ.