ಇತ್ತೀಚಿನ ಸುದ್ದಿ
ಕೆನರಾ ಕಾಲೇಜಿನ ಎನ್ನೆಸ್ಸೆಸ್: ತಣ್ಣೀರುಬಾವಿ ಸಮುದ್ರ ಕಿನಾರೆಯ ಸ್ವಚ್ಛತೆ, ಸುಲ್ತಾನ್ ಬತ್ತೇರಿ ಸ್ಮಾರಕ ಶುದ್ಧೀಕರಣ
04/10/2022, 21:24
ಮಂಗಳೂರು(reporter Karnataka.com):ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕದ್ರಿ ಲಯನ್ಸ್ ಮತ್ತು ಲಿಯೋ ಕ್ಲಬ್ ನ ಸಹಯೋಗದೊಂದಿಗೆ ತಣ್ಣೀರುಬಾವಿ ಸಮುದ್ರಕಿನಾರೆಯ ಸ್ವಚ್ಛತೆ, ಸುಲ್ತಾನ್ ಬತ್ತೇರಿಯ ಸ್ಮಾರಕ ಶುದ್ಧೀಕರಣ ಹಾಗೂ ಪ್ಲಾಸ್ಟಿಕ್ ಜಾಗೃತಿ ಕಾರ್ಯಾಚರಣೆಯನ್ನು ಮಾಡುವುದರ ಮೂಲಕ ಗಾಂಧಿ ಮತ್ತು ಶಾಸ್ತ್ರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕದ್ರಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಸುಮಿತ್ರಾ ಶೆಟ್ಟಿ, ಸದಸ್ಯರುಗಳಾದ ಲಯನ್ ವಿಜಯ್ ಶೆಟ್ಟಿ, ಲಯನ್ ಪ್ರಕಾಶನ್,ಲಯನ್ ಸತೀಶನ್,ಲಯನ್ ರತ್ನಾಕರ್,ಲಯನ್ ತಿರುಮಲೇಶ್,ಲಯನ್ ಶ್ರೀಧರ್ ,ಕೆನರಾ ಕಾಲೇಜಿನ ರಾ.ಸೇ.ಯೋ.ಅಧಿಕಾರಿಗಳಾದ ಸೀಮಾ ಪ್ರಭು,ವಾಣಿ ಯು.ಎಸ್.,ಸಹಾಯಕರಾದ ವಿಜೇತಾ ಭಟ್ ಹಾಗೂ ಸುಷಮಾ ಉಪಸ್ಥಿತರಿದ್ದರು.
97 ಸ್ವಯಂಸೇವಕರು ಈ ಒಂದು ಸಮಾಜ ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.