ಇತ್ತೀಚಿನ ಸುದ್ದಿ
ಗಾಂಧೀಜಿ ವಿಚಾರಧಾರೆ ಕಡೆಗಣಿಸಿ ಭಾರತವನ್ನು ಸದೃಢವಾಗಿ ಕಟ್ಟಲು ಸಾಧ್ಯವಿಲ್ಲ: ಬಿ.ಕೆ. ಇಮ್ತಿಯಾಝ್
03/10/2022, 14:28
ಮಂಗಳೂರು(reporterkarnataka.com): ಅಹಿಂಸೆ ಅಥವಾ ಸಂಪೂರ್ಣ ಅಹಿಂಸೆಯ ಮೇಲೆ ದೃಢವಾಗಿ ರೂಪಿಸಲ್ಪಟ್ಟ ಸಾಮೂಹಿಕ ಅವಿಧೇಯತೆಯ ಮೂಲಕ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹದ ಪರಿಕಲ್ಪನೆಗೆ ಜಗತ್ತಿಗೆ ದಾರಿ ತೋರಿಸಿದವರು. ಮಹಾತ್ಮ ಗಾಂಧೀಜಿಯವರು ಅದೇ ಅಹಿಂಸಾತ್ಮಕ ಹೋರಾಟವೇ ಭಾರತವನ್ನು ಸ್ವಾತಂತ್ರ್ಯದತ್ತ ತಂದು ನಿಲ್ಲಿಸಿತು ಹಾಗೂ ಜಗತ್ತಿನ ವಿವಿಧ ದೇಶಗಳಲ್ಲಿ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್ ಹೇಳಿದರು.
ಅವರು ನಗರದ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯ ವಿಚಾರಗಳನ್ನು ಕಡೆಗಣಿಸಿ ಭಾರತವನ್ನು ಸದೃಢವಾಗಿ ಕಟ್ಟುವುದು ಸಾಧ್ಯವಿಲ್ಲ. ಭಾರತದ ಬಹುತ್ವ ಮತ್ತು ಸಮಾನತೆ,ಏಕತೆಯನ್ನು ಉಳಿಸಲು ಗಾಂಧೀ ತತ್ವ ಅನುಕರಣೀಯ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಸಂತೋಷ್ ಆರ್.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಮುಖರಾದ ಅಸೀಫ್ ಬಾವ, ರಿಯಾಜ್, ಆದಂ ಬಜಾಲ್, ಮನ್ಸೂರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು