ಇತ್ತೀಚಿನ ಸುದ್ದಿ
26.58 ಕೋಟಿ ರೂ.ವೆಚ್ಚದಲ್ಲಿ 6 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ: ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿ ಪೂಜೆ
01/10/2022, 18:40
ಮಂಗಳೂರು(reporterkarnataka.com):ಸರಕಾರದ ಜಲಜೀವನ್ ಮಿಷನ್ ವತಿಯಿಂದ ಅಡ್ಯಾರ್ ,ಅರ್ಕುಳ, ಮಲ್ಲೂರು, ಬೊಂಡಂತಿಲ, ಉಳಾಯಿಬೆಟ್ಟು ಹಾಗೂ ನೀರುಮಾರ್ಗ ಗ್ರಾಮ ಪಂಚಾಯತ್ ಗಳಿಗೆ ಬಹುಗ್ರಾಮ ಶುದ್ದ ಕುಡಿಯುವ ನೀರಿನ ಯೋಜನೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ
ಡಾ.ಭರತ್ ಶೆಟ್ಟಿ ವೈ. ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಜಲಜೀವನ ಮಿಷನ್ ಯೋಜನೆಯಡಿ 6 ಗ್ರಾಮಗಳಿಗೆ ಪೈಪ್ ಲೈನ್ ಹಾಕುವ ಯೋಜನೆ, ಸಮೀಪದಲ್ಲಿ ಬೋರ್ ವೆಲ್ ತೋಡುವ ಮೂಲಕ ನೀರಿನ ಸಂಪರ್ಕ ನೀಡಲಾಗುವುದು. ನೀರಿನ ಮೂಲ ನಿರಂತರವಾಗಿ ಇರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಒಟ್ಟು 140 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಉತ್ತರ, ಮೂಡಬಿದ್ರೆ, ಬಂಟ್ವಾಳ, ಮಂಗಳೂರು,ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 41 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಇದಾಗಿದೆ.
ಪಂಚಾಯತ್ ನೀರಿನ ಸಂಪರ್ಕ ನೀಡುವ ಜವಾಬ್ದಾರಿ ಹೊಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪಿಡಿಒ ಜೀನತ್ ಅಡ್ಯಾರ್, ದಮಯಂತಿ ನೀರುಮಾರ್ಗ, ಮನಪಾ ಸದಸ್ಯರಾದ ಹೇಮಲತಾ ರಘು ಸಾಲ್ಯಾನ್ಸ್, ಇಸ್ಮಾಯಿಲ್ ಮಲ್ಲೂರು, ರತ್ನಾ ಸುರೇಶ್, ಉಳಾಯಿಬೆಟ್ಟು ಪಿಡಿಒ ಅನಿತಾ ವಿ.ಕ್ಯಾತರಿನ್,ಪಿಡಿಒ ರಾಜೇಂದ್ರ, ನರೇಂದ್ರ ಬಾಬು, ನೀರು ಸರಬರಾಜಿನ ಎಂಜಿನಿಯರ್, ಜಿ ಕೆ ನಾಯಕ್ ನರೇಂದ್ರ, ಜಗದೀಶ್ ಎಂಜಿನಿಯರ್ ಸುಧಾಕರ ಶೆಟ್ಟಿ, ಕಿಶೋರ್,ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.