ಇತ್ತೀಚಿನ ಸುದ್ದಿ
ಪುತ್ತೂರು: ‘ಶಾಲೆಗೆ ಬನ್ನಿ ಶನಿವಾರ ಕಲಿಕೆಗೆ ನೀಡಿ ಸಹಕಾರ’ ಕಾರ್ಯಾಗಾರ
26/09/2022, 22:56
ಪುತ್ತೂರು(reporterkarnataka.com):
ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿಯ ಜಂಟಿ ಆಶ್ರಯದಲ್ಲಿ ಶಾಲೆಗೆ ಬನ್ನಿ ಶನಿವಾರ ಕಲಿಕೆಗೆ ನೀಡಿ ಸಹಕಾರ ಎಂಬ ಒಂದು ದಿನದ ಶಿಬಿರವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಂಬೈಲು ನಲ್ಲಿ ಆಯೋಜಿಸಲಾಯಿತು.
ಪುತ್ತೂರು ವಿವೇಕಾನಂದ ಕಲಾ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮಕ್ರಮ ಉದ್ಘಾಟಿಸಿ ಮಕ್ಕಳಿಗೆ ಕಥೆಯ ಮೂಲಕ ಬದುಕುವ ಕಲೆಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ಕುಡ್ಲ ಹಾಗೂ ರಾಷ್ಟ್ರೀಯ ಯೋಜನಾಧಿಕಾರಿ ಶ್ರೀನಾಥ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕ ಸೇವಕಿಯರು ಮಕ್ಕಳನ್ನು ಆಟ ಪಾಠ ಎರಡರೊಂದಿಗೆ ಮನೋರಂಜಿಸಿದರು.