ಇತ್ತೀಚಿನ ಸುದ್ದಿ
ಕೆನರಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಸಂಭ್ರಮ
25/09/2022, 21:54
ಮಂಗಳೂರು(reporterkarnataka.com) ನಗರದ ಕೆನರಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಶನಿವಾರ ಜರುಗಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರಥ ಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಶೇಸಪ್ಪ ಅಮೀನ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಜನರ ಕಷ್ಟಗಳಿಗೆ ನಿಮ್ಮ ಕೈಲಾಗುವಷ್ಟು ನೆರವಾಗಿ, ಆರೋಗ್ಯಪೂರ್ಣವಾದ ಸಮುದಾಯವೇ ದೇಶದ ಬೆನ್ನೆಲುಬು ಎಂಬುದು ಗಾಂಧೀಜಿಯವರು ಕಂಡುಕೊಂಡ ಸತ್ಯ. ಆ ಮಾತೀಗ ಎನ್ನೆಸ್ಸೆಸ್ ನಿಂದ ನನಸಾಗುತ್ತಿದೆ. ಆದ್ದರಿಂದ ನೀವೆಲ್ಲ ಶೋಕೀ ಜೀವನಕ್ಕೆ, ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮಲತಾ ವಿ. ಮಾತನಾಡಿ, ಎನ್ನೆಸ್ಸೆಸ್ ನಿಂದ ದೊರೆಯುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುದರ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ವಿಶೇಷ ಸಾಧನೆಯನ್ನು ಮಾಡಿದ ಕಾಲೇಜಿನ ಎನ್ನೆಸ್ಸೆಸ್ ಸ್ವಯಂ, ಸೇವಕ ಸೇವಕಿಯರಾದ ,ಮನೀಶ್ ಸೂರ್ಯ ಅಡ್ಕ,ಅಭಿನ್ ಬಂಗೇರ, ದೀಪಾ ಹಡಪದ್, ಅನಂತಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಭಾರ್ಗವಿ ನಾಯಕ್ ಸ್ವಾಗತಿಸಿ, ಡ್ಯಾಫ್ನಾ ವಂದಿಸಿ.ಅನನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.