7:25 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಎನ್ನೆಸ್ಸೆಸ್ ನಿಂದ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

25/09/2022, 19:39

ಪುತ್ತೂರು(reporterkarnataka.com): ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸ್‌ಸಿ ಸಹಭಾಗಿತ್ವದಲ್ಲಿ ಮಾಹಿತಿ ಕಾರ್ಯಾಗಾರ ಶುಕ್ರವಾರ ಜರುಗಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಮಾತನಾಡಿ,  ರಾಷ್ಟ್ರೀಯ ಸೇವಾ ಯೋಜನೆಯನ್ನು ಅಂತರ್ಗತಗೊಳಿಸುವ ವಿದ್ಯಾರ್ಥಿಗಳಿಗೆ ಹೊಸ ಹೊಸ ಅನುಭವಗಳು ಲಭಿಸುತ್ತವೆ.  ಹಾಗೂ  ಉತ್ತಮ ಗೌರವ ದೊರಕುತ್ತದೆ. ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಜ್ಞಾನ ಮತ್ತು ಅನುಭವವನ್ನು ಗಳಿಸಲು ರಾಷ್ಟ್ರೀಯ ಸೇವಾ ಯೋಜನೆಯು ಸಹಕಾರಿಯಾಗುತ್ತದೆ. ಇಲ್ಲಿಂದ ಸಿಗುವಂತಹ ಜ್ಞಾನವನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದು ಒಂದು ಕಲೆ. ಅಂತಹ ಕಲೆ ಒಲಿಯುವುದು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮಾತ್ರ. ವಿದ್ಯಾರ್ಥಿಗಳು ಕಾಲೇಜಿನ ಪಾಠವು ಔದ್ಯೋಗಿಕ ಜೀವನಕ್ಕೆ ಪೂರಕವಾಗಿರುತ್ತದೆ. ಆದರೆ ನಮ್ಮ ಜೀವನಕ್ಕೆ ಪೂರಕವಾಗುವಂತಹ ಪಾಠಗಳು ದೊರಕುವುದು ಪುಸ್ತಕದಿಂದಲ್ಲ, ಜೀವನಕ್ಕೆ ಬೇಕಾದಂತಹ  ಮೌಲ್ಯಗಳನ್ನು ನಾವು ಗಳಿಸಿಕೊಳ್ಳಬೇಕಾದರೆ ನಾವು  ಉತ್ತಮ ಚಿಂತಕರಾಗಿ ,ಹಾಗೂ ಉತ್ತಮ ಪ್ರಜೆಯಾಗಿ ಬಾಳಬೇಕಾದರೆ ಅಲ್ಲೂ ಕೂಡ ಜ್ಞಾನ ಬೇಕಾಗುತ್ತದೆ .ಆ ಜ್ಞಾನವು ರಾಷ್ಟ್ರೀಯ ಸೇವಯೋಜನೆಯಿಂದ ದೊರಕುತ್ತದೆ ಎಂದು ಹೇಳಿದರು

ವಿದ್ಯಾರ್ಥಿಗಳ ಮನಸ್ಸಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವಲ್ಲಿ ಇದು ಪ್ರಧಾನ ಪಾತ್ರ ವಹಿಸುವುದರೊಂದಿಗೆ ದೇಶಕ್ಕೆ ಬೇಕಾದಂತಹ ಸತ್ಪ್ರಜೆಗಳ ನಿರ್ಮಾಣದಲ್ಲಿ ಕೂಡ ಎನ್ ಎಸ್ ಎಸ್ ಪ್ರಧಾನ ಪಾತ್ರ ವಹಿಸುತ್ತದೆ. ದೇಶವನ್ನು, ಗುರುಗಳನ್ನು ಹೆತ್ತವರನ್ನು, ಹಿರಿಯರನ್ನು, ಗೌರವಿಸುವ ಮನಸ್ಥಿತಿ ಜೀವನಕ್ಕೆ ಮುಖ್ಯವಾಗಿದೆ. ಇದನ್ನು ರಾಷ್ಟ್ರೀಯ ಸೇವಾ ಯೋಜನೆಯಿಂದ ಪಡೆಯಲು ಸಾಧ್ಯ. ಎಂದು ನುಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ, ಶ್ರೀನಾಥ್. ಬಿ,ವಿದ್ಯಾ ಕೆ. ಎನ್. ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯರು ಎನ್ಎಸ್ಎಸ್ ಗೀತೆಯನ್ನು ಹಾಡಿದರು. ವಿನುಷಾ ಸ್ವಾಗತಿಸಿದರು. ಮಿಥುನ್ ವಂದಿಸಿದರು ಅನನ್ಯ ಕಮಿಲ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು