10:08 PM Sunday14 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ಅರ್ಧಂಬರ್ಧ ಕಾಮಗಾರಿ!: ಜನರಿಗೆ ತಪ್ಪದ ಕಿರಿಕಿರಿ!!: ಅಭಿವೃದ್ಧಿ ಹೆಸರಿನಲ್ಲಿ ನಿತ್ಯ ನರಕ!

25/09/2022, 19:13

ಅನುಷ್ ಪಂಡಿತ್ ಮಂಗಳೂರು /ಗಣೇಶ್ ಅದ್ಯಪಾಡಿ

info.reporterkarnataka@gmail.com

ಸ್ಮಾರ್ಟ್ ಸಿಟಿ ಆಗುವ ಕನಸು ಕಾಣುತ್ತಿರುವ ಮಂಗಳೂರು ಮಹಾನಗರ ಇನ್ನೂ ಹಲವಾರು ಮೂಲ ಸೌಕರ್ಯಗಳ ಸಮರ್ಪಕ ನಿರ್ವಹಣೆಯಲ್ಲಿ ಹಿಂದೆ ಉಳಿದಿದೆ ಎಂದರೆ ತಪ್ಪಾಗಲಾರದು.

ಹೌದು, ನಗರದ ಮುಖ್ಯ ಸಮಸ್ಯೆಯಾದ ಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.


ವೇದವ್ಯಾಸ ಕಾಮತರು ಶಾಸಕರಾದ ಮೇಲೆ ಹಲವಾರು ಅನುದಾನಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಿಕ್ಕಿದರೂ ಕೂಡ ಕಾಮಗಾರಿಗಳು ಸಮಯಕ್ಕೆ ಮುಕ್ತಾಯಗೊಳ್ಳದೆ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ನಗರದ ಹಲವು ಭಾಗಗಳಲ್ಲಿ ಒಳಚರಂಡಿ ದುರಸ್ತಿಗಾಗಿ ರಸ್ತೆಯನ್ನು ಅಗೆದು ಹಾಗೆಯೆ ಬಿಡಲಾಗಿದೆ. ಜ್ಯೋತಿ ಬಲ್ಮಠದ ಸುತ್ತಾ ಈ ರೀತಿಯ ಸಮಸ್ಯೆಗಳನ್ನು ಕಾಣಬಹುದು.

ಅದೇ ರೀತಿ ಹಲವು ಕಡೆ ಫುಟ್ ಪಾತ್ ಚರಂಡಿ ಸ್ಲ್ಯಾಬ್‌ಗಳು ಕಳಚಿ ಹೋಗಿದ್ದರೂ ಇನ್ನೂ ರಿಪೇರಿ ನಡೆದಿಲ್ಲ. ಕಲೆಕ್ಟರ್‌ಸ್ ಗೇಟ್ ಹಾಗೂ ಬಲ್ಲಾಳ್ ಭಾಗ್‌ನ ಮಣ್ಣಗುಡ್ಡೆ ರಸ್ತೆಯಲ್ಲಿ ಈ ಸಮಸ್ಯೆಯನ್ನು ಕಾಣಬಹುದು. ಅದೇ ರೀತಿ ನಗರದ ಮುಖ್ಯ ಭಾಗದ ಹಲವಾರು ರಸ್ತೆಗಳ ರಿಪೇರಿ ಕೂಡ ಸಮರ್ಪಕವಾಗಿ ಮಾಡಲಿಲ್ಲ..

ಮಂಗಳೂರು ಮಹಾನಗರ ಪಾಲಿಕೆ ಸಮೀಪದಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಇ-ಟಾಯ್ಲೆಟ್ ಸ್ಥಾಪಿಸಲಾಗಿತ್ತು ಆದರೆ ಇದೀಗ ಸಮರ್ಪಕ ನಿರ್ವಹಣೆ ಇರದೆ ಮೂಲೆಗೆ ಸೇರಿಬಿಟ್ಟಿದೆ. ಇದರ ಬಗ್ಗೆಯೂ ಮಾರ್ವಲೆಸ್ ಮಂಗಳೂರು, ಗ್ರೀನ್ ಮಂಗಳೂರು ಅಭಿಯಾನಗಳನ್ನು ಆರಂಭಿಸಿದ ಮಾನನೀಯ ಶಾಸಕರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು