2:51 AM Friday15 - May 2026
ಬ್ರೇಕಿಂಗ್ ನ್ಯೂಸ್
ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ…

ಇತ್ತೀಚಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

25/09/2022, 14:42

ಲಾರ್ಡ್ಸ್(reporterkarnataka.com): ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿರುವ ಭಾರತದ ಖ್ಯಾತ ಬೌಲರ್ ಜೂಲನ್ ಗೋಸ್ವಾಮಿಯವರ ವಿದಾಯ ಸರಣಿಯನ್ನು ಭಾರತ ಮಹಿಳಾ ಕ್ರಿಕೆಟ್ ತಂಡ ಸ್ಮರಣೀಯವಾಗಿಸಿದೆ.‌

ಅತಿಥೇಯ ಇಂಗ್ಲೆಂಡ್ ವಿರುದ್ಧ ಶನಿವಾರ ಲಾರ್ಡ್ಸ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 16 ರನ್‍ಗಳ ಜಯ ಸಾಧಿಸುವ ಮೂಲಕ ಭಾರತ ವನಿತೆಯರು ಸರಣಿಯಲ್ಲಿ ಕ್ಲೀನ್‍ಸ್ವೀಪ್ ಸಾಧಿಸಿದರು.

170 ರನ್‍ಗಳ ಗೆಲುವಿನ ಗುರಿ ಹೊಂದಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 103 ರನ್‍ಗಳಿಗೆ ಎಂಟು ವಿಕೆಟ್ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಆದಾಗ್ಯೂ ನಾಯಕಿ ಅಮೆ ಜೋನ್ಸ್ ಹಾಗೂ ಚಾರ್ಲಿ ಡೀನ್, ಭಾರತದ ಬೌಲರ್‍ಗಳನ್ನು ಬಹಳ ಹೊತ್ತು ಕಾಡಿದರು. ಕೊನೆಗೆ ಜೋನ್ಸ್ (28) ಅವರ ವಿಕೆಟ್ ಕಬಳಿಸಿ ಭಾರತ ಪಾಳಯದಲ್ಲಿ ಸಂತಸಕ್ಕೆ ಕಾರಣರಾದರು. ಡೀನ್ ಈ ಹಂತದಲ್ಲೂ ಭಾರತದ ಕೈಯಿಂದ ಗೆಲುವು ಕಸಿಯುವ ಏಕಾಂಗಿ ಪ್ರಯತ್ನ ನಡೆಸಿದರು. ಆದರೆ 47 ರನ್ ಗಳಿಸಿದ ಡೀನ್, ದೀಪ್ತಿ ಶರ್ಮಾ ಅವರಿಗೆ ಬಲಿಯಾದರು. ಇದರೊಂದಿಗೆ 153 ರನ್‍ಗಳಿಗೆ ಆಲೌಟ್ ಆದ ಇಂಗ್ಲೆಂಡ್ ತಂಡ 16 ರನ್ ಅಂತರದಲ್ಲಿ ಕೊನೆಯ ಪಂದ್ಯವನ್ನೂ ಸೋತಿತು.

ಇಂಗ್ಲೆಂಡ್ ತಂಡ ಟಾಸ್ ಗೆದ್ದು ಎದುರಾಳಿಗಳನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಸ್ಮೃತಿ ಮಂದಾನ (50) ಮತ್ತು ದೀಪ್ತಿ (ನಾಟೌಟ್ 68)ಯವರ ಅರ್ಧ ಶತಕಗಳ ಹೊರತಾಗಿಯೂ, ಇಂಗ್ಲೆಂಡ್ ತಂಡ ಭಾರತವನ್ನು 169 ರನ್‍ಗಳಿಗೆ ಕಟ್ಟಿ ಹಾಕಿತ್ತು. ಅಂತಿಮ ಅಂತರರಾಷ್ಟ್ರೀಯ ಪಂದ್ಯ ಆಡಿದ ಗೋಸ್ವಾಮಿ ಮೊದಲ ಬಾಲ್‍ನಲ್ಲೇ ಔಟ್ ಆಗಿ ನಿರಾಸೆ ಹೊಂದಿದರು.

ಇಂಗ್ಲೆಂಡ್ ಪರ ಕೇಟ್ ಕ್ರಾಸ್ 26 ರನ್‍ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರೆ, ಭಾರತದ ಪರ ರೇಣುಕಾ (29ಕ್ಕೆ 4) ಯಶಸ್ವಿ ಬೌಲರ್ ಎನಿಸಿದರು. ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‍ಗಳ ಜಯ ಸಾಧಿಸಿದ್ದರೆ, ಎರಡನೇ ಪಂದ್ಯವನ್ನು 88 ರನ್ ಅಂತರದಿಂದ ಗೆದ್ದುಕೊಂಡಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು