ಇತ್ತೀಚಿನ ಸುದ್ದಿ
ಸರ್ವರ್ ಢಮಾರ್: ನ್ಯಾಯಬೆಲೆ ಅಂಗಡಿ ಬಾಗಿಲಲ್ಲಿ ಪಡಿತರಕ್ಕಾಗಿ ಕಾದು ಬಸವಳಿದ ವೃದ್ಧರು, ಮಹಿಳೆಯರು!!
23/09/2022, 20:33

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಬಳಿಯ ಸುಂಕಸಾಲೆ ಸಮೀಪದ ಅಬ್ರುಗುಡಿಗೆಯ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರು ಪರದಾಡುವಂತಾಗಿದೆ.
ಕಳೆದ ಕೆಲದಿನಗಳಿಂದ ಸರ್ವರ್ ಸಮಸ್ಯೆಯಿಂದ ಪಡಿತರದಾರರು ನ್ಯಾಯಬೆಲೆ ಅಂಗಡಿಯಲ್ಲಿ ಸಂಜೆಯವರೆಗೂ ಕಾದು ಹಿಂದಿರುಗುವಂತಾಗಿದೆ.
ಈ ಭಾಗದಲ್ಲಿ ಬಹುತೇಕರೂ ಕೂಲಿ ಕಾರ್ಮಿಕರಾಗಿದ್ದು ಕೆಲಸಕ್ಕೆ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೂ ಬಂದರೂ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗದಂತಾಗಿದೆ. ಹಳ್ಳಿಗಾಡು ಪ್ರದೇಶದಿಂದ ಬರುವ ಮಹಿಳೆಯರು, ವೃದ್ದರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿ ಬಾಗಿಲು ಕಾಯುವಂತಾಗಿದೆ.
ಅರಮನೆ ತಲಗೂರು ಗ್ರಾಮದ ವೃದ್ದೆ ಸುಂದರಮ್ಮ ಸುಮಾರು 15 ಕಿ.ಮಿ ದೂರದಿಂದ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬಂದಿದ್ದು ಬೆಳಿಗ್ಗೆ 9 ರಿಂದ ಸಂಜೆ 5-30 ರವರೆಗೂ ಕಾದರೂ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಸಾಧವಾಗಲಿಲ್ಲ. ಕೆಲ ಮಹಿಳೆ ತಮ್ಮ ಮಕ್ಕಳೊಂದಿಗೆ ಬಂದು ಕಾದಿ ಬಸವಳಿದ ದೃಶ್ಯ ಮನಕಲಕುವಂತಿತ್ತು