ಇತ್ತೀಚಿನ ಸುದ್ದಿ
ಕಡಲನಗರಿ ಮಂಗಳೂರು ದಸರಾ ವೈಭವಕ್ಕೆ ದಿನಗಣನೆ ಆರಂಭ: ವಿವಿಧ ಸಂಘಟನೆಗಳಿಂದ ಕರಸೇವೆ
23/09/2022, 18:56

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಂಗಳೂರು ದಸರಾ ಮಹೋತ್ಸವಕ್ಕೆ ಕಡಲನಗರಿ ತೆರೆದುಕೊಂಡಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಎಲ್ಲ ತರಹದ ಸಿದ್ಧತೆಗಳು ನಡೆದಿವೆ. ಇಡೀ ನಗರವನ್ನು ಬಣ್ಣದ ದೀಪಗಳಿಂದ ಅಲಂಕರಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.
ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕೇಂದ್ರ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ಆರಂಭಗೊಂಡ ಮಂಗಳೂರು ದಸರಾ ಇಂದು ವಿಶ್ವವ್ಯಾಪ್ತಿಯ ಛಾಪು ಹೊಂದಿದೆ. ಐತಿಹಾಸಿಕ ಮೈಸೂರು ದಸರಾ ಬಿಟ್ಟರೆ ಕಡಲನಗರಿಯ ಮಂಗಳೂರು ದಸರಾ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ದೇಶದ ಬೇರೆ ರಾಜ್ಯಗಳಿಂದ ಮಾತ್ರವಲ್ಲದೆ ಹೊರ ದೇಶಗಳಿಂದ ಕೂಡ ಪ್ರವಾಸಿಗರು ಮಂಗಳೂರು ದಸರಾ ವೈಭವವನ್ನು ಸವಿಯಲು ಇಲ್ಲಿಗಾಗಮಿಸುತ್ತಾರೆ. ವಾರಗಟ್ಟಲೆ ಮಂಗಳೂರಿನಲ್ಲಿ ತಂಗಿ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ರಾಷ್ಟಮಟ್ಟದ ಹಾಗೂ ವಿದೇಶದ ಚಾನೆಲ್ ಗಳು ಕೂಡ ಈ ಕುರಿತು ವಿಶೇಷ ವರದಿ ಪ್ರಕಟಿಸಿವೆ. ಸಾಕ್ಷ್ಯ ಚಿತ್ರಗಳು ಕೂಡ ನಿರ್ಮಿಸಲಾಗಿದೆ.
ಇದೀಗ ಮಂಗಳೂರು ದಸರಾ ಮಹೋತ್ಸವ ಹಾಗೂ ನವರಾತ್ರಿ ಮಹೋತ್ಸವಕ್ಕೆ ಕುದ್ರೋಳಿ ಕ್ಷೇತ್ರದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಕೇಂದ್ರ ಮಾಜಿ ಸಚಿವ, ಮಂಗಳೂರು ದಸರಾ ರುವಾರಿ ಬಿ. ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ಸಮಿತಿಯ ಪ್ರಮುಖರಾದ ಸಾಯಿರಾಂ, ನ್ಯಾಯವಾದಿ ಪದ್ಮರಾಜ್ ಮುಂತಾದವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆದಿದೆ. ಹಲವು ಸಮಿತಿಗಳ ಸಭೆಯೂ ಜರುಗಿದೆ. ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರು ಮಾರಿಗುಡಿ ಕ್ಷೇತ್ರ, ಗೋಕರ್ಣನಾಥ ಸೇವಾ ದಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಕರಸೇವಕರಿಂದ ದೇಗುಲದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಒಟ್ಟಿನಲ್ಲಿ ದಸರಾ ವೈಭವಕ್ಕೆ ಕುಡ್ಲ ನಗರ ಸಜ್ಜುಗೊಂಡಿದೆ.
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್.ಆರ್. ಏನು ಹೇಳಿದ್ದಾರೆ ಕೇಳೋಣ:
ನವರಾತ್ರಿ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ಅಂತಿಮ ಹಂತದ ವ್ಯವಸ್ಥೆಯಲ್ಲಿದ್ದೇವೆ.,ಭಕ್ತದಿಗಳಿಗೆ ಸುಸಜ್ಜಿತವಾಗಿ ಮಣ್ಣಗುಡ್ಡ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ಪಾರ್ಕಿಂಗ್ ಗಳಲ್ಲಿ ಸೆಕ್ಯೂರಿಟಿ ವ್ಯವಸ್ಥೆಯ ಸಿದ್ಧತೆಯು ಪೂರ್ಣಗೊಂಡಿದೆ.
26 ರಂದು 9.00 ಗಂಟೆಗೆ ಗುರು ಪ್ರಾಥನೆಯೊಂದಿಗೆ ದಸರಾಕ್ಕೆ ಚಾಲನೆ ದೊರಕಲಿದೆ.ಭಕ್ತಾದಿಗಳಿಗೆ ದಿನಾ ಅನ್ನಸಂತರ್ಪಣೆ ನಡೆಯಲಿರುವುದು.30.09.2022 ಬೆಳಿಗ್ಗೆ 8.30ಕ್ಕೆ ನವರಾತ್ರಿಯ ಸಾರ್ವಜನಿಕ ಚಂಡಿಕಾ ಹೋಮ ನಡೆಯಲಿದ್ದು,ನಂತರ 11.30 ಪರ್ಯಾಯ ನಡಯಲಿದೆ.
ಪ್ರತಿ ದಿನಾ ಸಂಜೆ 6 ರಿಂದ ಸಂತೋಷ ಕಲಾ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.5ರಂದು ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಕ್ಷೇತ್ರದಿಂದ ಹೊರಲಿದೆ.
6.00 ರಂದು ಗುರು ಪೂಜೆಯೊಂದಿಗೆ ನವರಾತ್ರಿ ಸಮಾಪ್ತಿ ಹೊಂದಲಿದೆ