ಇತ್ತೀಚಿನ ಸುದ್ದಿ
ಮಂಜೇಶ್ವರ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಸರಕಾರಿ ಬಸ್ಸಿಗೆ ಕಲ್ಲೆಸೆತ; ಚಾಲಕನಿಗೆ ಗಾಯ
23/09/2022, 16:08

ಕಾಸರಗೋಡು(reporterkarnataka.com): ಮಂಜೇಶ್ವರ ಬಳಿ ಇಂದು ಮುಂಜಾನೆ ಸರಕಾರಿ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದ ಘಟನೆ ನಡೆದಿದ್ದು, ಚಾಲಕ ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮೇಲೆ ಕಲ್ಲೆಸೆಯಲಾಗಿದೆ.
ಬಸ್ ಚಾಲಕ ಎನ್.ಶಿಬು(44) ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.