2:25 PM Thursday15 - May 2025
ಬ್ರೇಕಿಂಗ್ ನ್ಯೂಸ್
ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.…

ಇತ್ತೀಚಿನ ಸುದ್ದಿ

ಬೆಳುವಾಯಿಯ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಘಟಕಕ್ಕೆ ರಾಷ್ಟ್ರೀಯ ಮನ್ನಣೆ

21/09/2022, 08:04

ಮಂಗಳೂರು(reporterkarnataka.com): ಮೂಡಬಿದಿರೆ ತಾಲೂಕಿನ ಬೆಳುವಾಯಿಯ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(YHAI)ಇದರ  ಘಟಕಕ್ಕೆ ರಾಷ್ಟ್ರೀಯ ಮನ್ನಣೆ ದೊರೆತು ಪೂರ್ಣ ಪ್ರಮಾಣದ ಘಟಕಕ್ಕೆ ಚಾಲನೆ ದೊರಕಿದೆ.

ಯೂಥ್ ಹಾಸ್ಟೆಲ್  ಅಸೋಸಿಯೇಷನ್ ಆಫ್ ಇಂಡಿಯಾ  ಅಂದರೆ ಇದೊಂದು ಅಂತಾರಾಷ್ಟ್ರೀಯ ಸೇವಾ ಸಂಸ್ಥೆ. ಇದರ ಸ್ಥಾಪನೆಯ ಮೂಲ ಉದ್ದೇಶ ಬಡ ವಿದ್ಯಾರ್ಥಿಗಳು ಅಧ್ಯಯನ ಪ್ರವಾಸ ಐತಿಹಾಸಿಕ ಸ್ಥಳ ವೀಕ್ಷಣೆ ಹಾಗೂ ಇತರೆ ಪ್ರವಾಸಗಳು ಹಾಗೂ ಕಡಿಮೆ ಖರ್ಚಿನಲ್ಲಿ ಐತಿಹಾಸಿಕ ಕಟ್ಟಡಗಳು, ಪ್ರೇಕ್ಷಣೀಯ ಸ್ಥಳಗಳು, ಪಾರಂಪರಿಕ ತಾಣಗಳು, ಜಲಪಾತಗಳು, ಪ್ರಕ್ರತಿಯ ಮಡಿಲಲ್ಲಿ ಹುದುಗಿರುವ ಮನಮೋಹನ ಹಾಗೂ ಸುಂದರವಾದ ಜಾಗಗಳನ್ನು ನೋಡಿ ಸ್ವಹಾನುಭವವನ್ನು ಗಳಿಸುವುದು, ಹೆಚ್ಚು ಹೆಚ್ಚು ಜನರೊಂದಿಗೆ ಬೆರೆತು ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನರ ಸ್ನೇಹ ಸಂಪಾದಿಸುವುದು. ಸಾಹಸೀ ಚಟುವಟಿಕೆಗಳಲ್ಲಿ ಭಾಗವಹಿಸಿ ಧೈರ್ಯವಂತರಾಗುವುದನ್ನು ಪ್ರೇರೇಪಿಸುವುದಾಗಿದೆ.

1918ರ ಕಾಲಘಟ್ಟದಲ್ಲಿ ಇಂತಹ ಯೋಚನೆಯ ಆರಂಭಿಕ ಸಮಯಗಳಲ್ಲಿ, ಕಾರ್ಯಕ್ರಮಗಳ ಸಂದರ್ಭಗಳಲ್ಲಿ ದೂರದ ಊರಿನಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯ  ಕೊರತೆ ಕಂಡು ಬಂದು ಅಲ್ಲಲ್ಲಿ ಹಾಸ್ಟೆಲ್ಗಳ  ನಿರ್ಮಾಣ ಆರಂಭವಾಯಿತು.

ಇದರ ಪರಿಕಲ್ಪನೆಯು  ಜರ್ಮನ್ ಉಪನ್ಯಾಸಕ ಸರ್ ರಿಚರ್ಡ್ ಶೆರ್ಮನ್ ಎಂಬವರಿಂದ ಬಂದಿದ್ದು ಅವರು 1918ರ ಸಮಯದಲ್ಲಿ ಒಂದು ಚಿಕ್ಕ ಹಾಸ್ಟೆಲ್ ಪ್ರಾರಂಭಿಸಿದ್ದು ಅನಂತರ ತುಂಬಾ ಕಡಿಮೆ ಅವಧಿಯಲ್ಲಿ ಪ್ರಪಂಚದ ಎಲ್ಲಾ ಕಡೆ ಶಾಖೆಗಳು ಪಸರಿಸಿದವು. ಇಂದು ಪ್ರಪಂಚದ ಸುಮಾರು 90 ದೇಶಗಳಲ್ಲಿ 4000 ಹಾಸ್ಟೆಲ್ಗಳ ಸೇವೆಯನ್ನು ಜಗತ್ತಿನ  ಎಲ್ಲಾ ವರ್ಗದ ಜನರು ಪಡೆಯುತ್ತಿದ್ದಾರೆ.

ಇಂದು ಅತಿ ಕಡಿಮೆ ಖರ್ಚಿನಲ್ಲಿ ಯುವ ಜನತೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಇರುವ ಸುಂದರ ತಾಣಗಳನ್ನು ಸಂದರ್ಶಿಸುವ ಅವಕಾಶಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಸಂದರ್ಶಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಅನುಭವ ಮತ್ತು ಜ್ಞಾನವನ್ನು ಸಂಪಾದಿಸುತ್ತಾರೆ.

ಭಾರತದಲ್ಲಿ ಇದರ ಮೊದಲ ಶಾಖೆಯು ನಮ್ಮ ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ಯುನಿವರ್ಸಿಟಿಯ ಕೆಲವು ಉಪನ್ಯಾಸಕರಿಂದ 1948ರಲ್ಲಿ ಆರಂಭಗೊಂಡಿತು. ಆಡಳಿತ ದೃಷ್ಟಿಯಿಂದ ಕಚೇರಿಯನ್ನು ದೆಹಲಿಗೆ ಸ್ಥಳಾಂತರಿಸಲಾಯಿತು.

ಪ್ರಾರಂಭದ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಇಂಟರ್ನ್ಯಾಷನಲ್ ಯೂತ್ ಹಾಸ್ಟೆಲ್ಸ್ ಫೆಡರೇಷನ್ (IYHF) ಎಂದು ನಾಮಕರಣ ಮಾಡಲಾಗಿತ್ತು. ಇಂದು ಹೋಸ್ಟೆಲಿಂಗ್ ಇಂಟರ್ನ್ಯಾಷನಲ್ ಯು.ಕೆ ಎಂದು ಗುರುತಿಸಲಾಗುತ್ತಿದೆ.

ಭಾರತದಲ್ಲಿ ಕೇಂದ್ರ ಕಚೇರಿಯ ವತಿಯಿಂದ ಕಡಿಮೆ ಖರ್ಚಿನಲ್ಲಿ ವಿವಿಧೆಡೆ ಚಾರಣ, ಪರ್ವತಾರೋಹಣ, ಸೈಕ್ಲಿಂಗ್, ಪ್ರಕ್ರತಿ ಶಿಬಿರ, ಈಜಾಟ, ಕುಟುಂಬಗಳ ಶಿಬಿರ, ಚರ್ಚಾ ಕೂಟ, ಕ್ವಿಜ್ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸುತ್ತಿದೆ. ಹಾಗೆಯೆ ರಾಜ್ಯ ಶಾಖೆ ಮತ್ತು ಸ್ಥಳೀಯ ಘಟಕಗಳು ಈ ಮೇಲಿನ ಕಾರ್ಯ ಚಟುವಟಿಕೆಗಳನ್ನು ಸ್ಥಳೀಯಮಟ್ಟದಲ್ಲಿವ್ಯವಸ್ಥೆಗೊಳಿಸುತ್ತವೆ.

 ಕೇಂದ್ರ ಕಛೇರಿಯು ಪ್ರತಿ ವರ್ಷ ಮೇ, ಜೂನ್ ತಿಂಗಳಲ್ಲಿ ಚಂದ್ರಕಣಿ ಮತ್ತು ಸರ್ಪಾಸ್ ಕಣಿವೆಯಲ್ಲಿ   ನಡೆಸುವ ಹಿಮಾಲಯ ಚಾರಣವು ಬಹು ಜನರ ಮನ ಗೆದ್ದಿದೆ. ಇದಲ್ಲದೆ ಶ್ರೀನಗರ, ಲೋನವಾಲ, ಮೈಸೂರು, ಹಿಮಾಚಲ ಪ್ರದೇಶ, ಲೇಹ್ ಇಲ್ಲಿ ನಡೆಯುವ ಫ್ಯಾಮಿಲಿ ಕ್ಯಾಂಪಿಂಗ್, ಅಂಡಾಮಾನ್ ಪ್ರಕ್ರತಿ ಶಿಬಿರ, ಲಡಾಕ್ ಸಾಹಸ ಯಾತ್ರೆ, ಲೇಹ್ ಮೋಟಾರ್ ಬೈಕ್ ರೈಡ್, ವ್ಯಾಲಿ ಆಫ್ ಫ್ಲವರ್ಸ್ ಚಾರಣ,ಛಾರ್ ಧಾಮ್ ಯಾತ್ರೆ ಇವು ಕೆಲವು ಮುಖ್ಯ ಕಾರ್ಯಕ್ರಮಗಳು, ಇವಲ್ಲದೆ ಹಲವಾರು ಚಟುವಟಿಕೆಗಳನ್ನು ವರ್ಷವಿಡೀ ನಡೆಸಲಾಗುತ್ತದೆ.

ಸಂಸ್ಥೆಯ ಸದಸ್ಯತ್ವವನ್ನು ಯಾವುದೇ ವಯಸ್ಸು, ಜಾತಿ, ಮತದ ಭೇದವಿಲ್ಲದೆ ಎಲ್ಲರೂ ಪಡೆಯ ಬಹುದಾಗಿದೆ. ಒಂದು ವರ್ಷ, ಎರಡು ವರ್ಷಗಳ ಅವಧಿಗೆ ಅಥವಾ ಅಜೀವ ಸದಸ್ಯರಾಗ ಬಹುದು. 10ರಿಂದ 18 ವರ್ಷದ ಮಕ್ಕಳಿಗೆ ಜ್ಯೂನಿಯರ್ ಸದಸ್ಯತನ ನೀಡಲಾಗುತ್ತದೆ. ವಿದ್ಯಾ ಸಂಸ್ಥೆಗಳ ಪ್ರಾಧ್ಯಾಪಕರು, ಮಕ್ಕಳು  ಕೂಡ ಸದಸ್ಯರಾಗಬಹುದು. ಸದಸ್ಯರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತದೆ, ಇದನ್ನು ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ಹಾಸ್ಟೆಲ್ ಸೇವೆಯನ್ನು ಪ್ರಪಂಚದಾದ್ಯಂತ ಪಡೆಯ ಬಹುದಾಗಿದೆ. ಒಂದು ವರ್ಷದ ಶುಲ್ಕ ರೂ.170/-, ಎರಡು ವರ್ಷಕ್ಕೆ ರೂ.300/- ಅಜೀವ ಸದಸ್ಯತ್ವ ರೂ.2500/-. ಸದಸ್ಯರಾಗ ಬಯಸುವವರು ನಿಗದಿತ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ ಮತ್ತು ಒಂದು ಫೊಟೊ ನೀಡಬೇಕು. ಅಜೀವ ಸದಸ್ಯರಾಗ  ಬಯಸುವವರು ಎರಡು ಫೊಟೊ ನೀಡ ಬೇಕಾಗುತ್ತದೆ.

ಸ್ಥಳೀಯ ಘಟಕಗಳ ಮೂಲಕ ಸದಸ್ಯರಾದರೆ ಇಲ್ಲಿ ಸ್ಥಳೀಯವಾಗಿ ಮತ್ತು ರಾಷ್ಟ್ರೀಯ, ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ.

ಈ ಸಂಸ್ಥೆಯ ಸದಸ್ಯರಾದವರು ಭಾರತ ಮತ್ತು ವಿದೇಶಗಳಲ್ಲಿ ಇರುವ ಹಾಸ್ಟೆಲ್ ಸೇವೆಯನ್ನು ಪಡೆಯ ಬಹುದು. ರಾಷ್ಟ್ರ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ಸ್ಥಳೀಯ ಘಟಕಗಳು ನಡೆಸುವ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬಹುದಾಗಿದೆ. ಪ್ರಸ್ತುತ ಬೆಳುವಾಯಿ ಘಟಕ ಪೂರ್ಣ ಪ್ರಮಾಣದ ಘಟಕವಾಗಿ ಪದೋನ್ನತಿ ಹೊಂದಿದ್ದು ಹೆಚ್ಚಿನ ಮಾಹಿತಿಗಾಗಿ ಹಾಗು ಸದಸ್ಯತ್ವದ ನೋಂದಾವಣೆಗೆ ಜಯರಾಮ ಪೂಜಾರಿ, ಬೆಳುವಾಯಿ (9986587439,9448083025) ಇವರನ್ನು ಸಂಪರ್ಕಿಸ ಬಹುದು ಹಾಗೆಯೇ www.yhaindia.org ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯ ಬಹುದಾಗಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ಘಟಕದ ಪದಾಧಿಕಾರಿಗಳು ತಿಳಿಸಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು