ಇತ್ತೀಚಿನ ಸುದ್ದಿ
ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ರಸ್ತೆ, ಚರಂಡಿ ಹಾಗೂ ರಾಜಕಾಲುವೆಗಳ ಅಭಿವೃದ್ಧಿ: ಶಾಸಕ ವೇದವ್ಯಾಸ ಕಾಮತ್
16/09/2022, 21:38

ಮಂಗಳೂರು(reporterkarnataka.com): ನಗರದ ಬೆಳವಣಿಗೆ ಹಾಗೂ ಮುಂದಿನ ಭವಿಷ್ಯದ ಕುರಿತು ದೂರಾಲೋಚನೆಯಿಂದ ರಸ್ತೆ, ಚರಂಡಿ ಹಾಗೂ ರಾಜಕಾಲುವೆಗಳ ಅಭಿವೃದ್ಧಿಯ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಂಕನಾಡಿ ವಾರ್ಡಿನ ಪ್ರಗತಿ ನಗರದಲ್ಲಿ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ನಿರ್ಮಾಣದೊಂದಿಗೆ ಒಳಚರಂಡಿ ವ್ಯವಸ್ಥೆ, ರಾಜಕಾಲುವೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೃತಕ ನೆರೆ ಹಾವಳಿ ಉಂಟಾಗದಂತೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಶೋಭಾ ಪೂಜಾರಿ, ವೀಣಾ ಮಂಗಳ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಕಿರಣ್ ರೈ, ಭರತ್ ರಾಜ್ ಶೆಟ್ಟಿ, ಸುಕೇಶ್ ಅಳಪೆ, ಸತೀಶ್ ರೈ, ಮಾನಸ ರೈ, ರಾಮಚಂದ್ರ ಆಳ್ವ, ಜಯಂತ್ ಭವಾನಿ, ಬಾಬು ಪುಜಾರಿ, ಸಂತೋಷ್ ಕಾವುಬೈಲ್, ಸಂದೇಶ್ ಕಾವುಬೈಲ್, ನಾರಾಯಣ್ ನಾಯಕ್, ಚೇತನ್, ರಕ್ಷಿತ್ ನಾಯಕ್, ರೇಖಾ ಶೆಟ್ಟಿ, ವೀಣಾ ರೈ, ಸುಮಾ ನಾಯಕ್, ಅರುಣ ನಾಯಕ್ ಉಪಸ್ಥಿತರಿದ್ದರು.