5:05 PM Tuesday23 - September 2025
ಬ್ರೇಕಿಂಗ್ ನ್ಯೂಸ್
ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು

ಇತ್ತೀಚಿನ ಸುದ್ದಿ

ಬೆಂಗಳೂರು: ಬಾಗ್ಮನೆ ಟೆಕ್ ಪಾರ್ಕ್ ಒತ್ತುವರಿ ತೆರವು 3 ವಾರಗಳ ಕಾಲ ಮುಂದೂಡಿಕೆ

15/09/2022, 11:21

ಬೆಂಗಳೂರು(reporterkarnataka.com): ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಯಲು ಸ್ವಲ್ಪ ಕಾಲಾವಕಾಶ ಬೇಕಿದೆ. ಸರಿಯಾದ ರೀತಿಯಲ್ಲಿ ಮತ್ತು ತುರ್ತಾಗಿ ತೆರವು ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಉಭಯ ಪಕ್ಷಕಾರರು ಪರಸ್ಪರ ಸಹಕಾರ ನೀಡಬೇಕು. ಬಾಗ್ಮನೆ ಟೆಕ್‍ಪಾರ್ಕ್ ಪ್ರಕರಣವನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ ಎಂದು ಲೋಕಾಯುಕ್ತ ಆದೇಶದಲ್ಲಿ ಹೇಳಲಾಗಿದೆ.

ಬಿಬಿಎಂಪಿಯು ಬಾಗ್ಮನೆ ಟೆಕ್‍ಪಾರ್ಕ್ ಬಳಿ ರಾಜಕಾಲುವೆ ಒತ್ತುವರಿ ಆಗಿರುವುದನ್ನು ತೆರವು ಮಾಡುವುದಕ್ಕೆ ಸಂಬಂಧಿಸಿದಂತೆ ಮಾರ್ಕ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಶನಿವಾರ ನೀಡಿದ್ದ ದೂರಿನ ವಿಚಾರಣೆ ನಡೆಸಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸೆ.12ರಂದೇ ಆದೇಶ ಮಾಡಿದ್ದಾರೆ.

ನಗರದಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸುವಂತೆ ಲೋಕಾಯುಕ್ತ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಬಾಗ್ಮನೆ ಟೆಕ್‍ಪಾರ್ಕ್ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಬಿಬಿಎಂಪಿಯು ತಾರತಮ್ಯದಿಂದ ಬಾಕ್ಸ್ ಚರಂಡಿಗಳನ್ನು (ಡ್ರೈನ್ಸ್) ತೆರವು ಮಾಡಬಾರದು. ಇದರಿಂದ ದೂರುದಾರರಾದ ಬಾಗ್ಮನೆ ಮತ್ತು ಸಮೀಪದ ಸ್ಥಳಗಳಲ್ಲಿ ಪ್ರವಾಹದ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಆರ್‍ಸಿಸಿ ಕಾಲುವೆಯ ಮಟ್ಟದ ವ್ಯತ್ಯಾಸದಿಂದ ನೀರಿನ ಹರಿವಿನಲ್ಲಿ ಅಡಚಣೆ ಉಂಟಾಗಿ ತೊಂದರೆಯಾಗುತ್ತಿದೆ ಎನ್ನುವ ಆತಂಕ ಬಿಬಿಎಂಪಿಯದಾಗಿದ್ದರೆ, ದೂರುದಾರರು (ಬಾಗ್ಮನೆ ಟೆಕ್‍ಪಾರ್ಕ್) ಕಾಲುವೆಯ ಮೇಲಿನ ನಿರ್ದಿಷ್ಟ ಸ್ಥಳಗಳಲ್ಲಿ ಚಪ್ಪಡಿಗಳನ್ನು ತೆಗೆದು ಅಧಿಕಾರಿಗಳು ಪರಿಶೀಲಿಸಲು ಅನುವು ಮಾಡಲಿ ಎಂದು ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರು ತಮ್ಮ ಆದೇಶದಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ.

ಬಾಗ್ಮನೆ ಟೆಕ್‍ಪಾರ್ಕ್ ವಾದ ಮಂಡಿಸಿ, ‘ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿಯು ನೋಟಿಸ್ ಜಾರಿ ಮಾಡಿಲ್ಲ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಮತ್ತೊಂದು ರಿಯಲ್ ಎಸ್ಟೇಟ್ ಕಂಪೆನಿಗೆ ಬಿಬಿಎಂಪಿ ನೆರವು ನೀಡಿದೆ. ಆ ರಿಯಲ್ ಎಸ್ಟೇಟ್ ಕಂಪೆನಿಯು ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ’ ಎಂದು ತಿಳಿಸಿತ್ತು.

‘ಬಾಗ್ಮನೆ ಟೆಕ್‍ಪಾರ್ಕ್ ಹಾಕಿರುವ ಆರ್‍ಸಿಸಿ ಕಾಲುವೆಯ ಮಟ್ಟದಲ್ಲಿನ ಎತ್ತರ ವ್ಯತ್ಯಾಸದಿಂದಾಗಿ ನೀರು ತುಂಬಿಕೊಂಡು ಪ್ರವಾಹಕ್ಕೆ ಕಾರಣವಾಗಿದೆ. ಅಲ್ಲದೇ, ಇತರೆ ರಿಯಲ್ ಎಸ್ಟೇಟ್ ಕಂಪೆನಿಗಳು ಒತ್ತುವರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದು, ನ್ಯಾಯಾಲಯದ ನಿರ್ದೇಶನ ಪಾಲಿಸಲಾಗುವುದು ಎಂದು ಬಿಬಿಎಂಪಿ’ ವಾದ ಮಂಡಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು