ಇತ್ತೀಚಿನ ಸುದ್ದಿ
ಖಡಕ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ. ಮಹೇಶ್ ಮಾನನಷ್ಟ ಮೊಕದ್ದಮೆ
11/09/2022, 16:26
ಬೆಂಗಳೂರು(reporterkarnataka.com):ಭೂ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ. ಮಹೇಶ್ ಅವರು ಖಡಕ್ ಐಎಎಸ್ ಅಧಿಕಾರಿ ಎಂದೇ ಖ್ಯಾತರಾದ ರೋಹಿಣಿ ಸಿಂಧೂರಿ ವಿರುದ್ಧ ಮಾನ ನಷ್ಟ ಮೊಕದ್ದವೆ ಹೂಡುವ ಸಂಬಂಧ ಲೀಗಲ್ ನೋಟಿಸ್ ನೀಡಿದ್ದಾರೆ.
ಸಾ.ರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ವಿಚಾರವಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು.ಈ ವಿಚಾರವಾಗಿ ಸಾ.ರಾ ಮಹೇಶ್ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನಲೆ ರೋಹಿಣಿ ಸಿಂಧೂರಿ ಯವರಿಗೆ ಲೀಗಲ್ ನೋಟಿಸ್ ಅನ್ನು ಕೂಡ ಜಾರಿಗೊಳಿಸಲಾಗಿದ್ದು, ಅಧಿಕಾರಿ ಇದಕ್ಕೆ ಉತ್ತರ ಕೊಟ್ಟಿದ್ದರು.
ಈ ಬಗ್ಗೆ ಮಾತನಾಡಿದ ಶಾಸಕ ಸಾ.ರಾ ಮಹೇಶ್ ಹಿಂದಿನ ಜಿಲ್ಲಾಧಿಕಾರಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಸರಕಾರಿ ಹಣ ದುರ್ವಿನಿಯೋಗವಾಗಿದೆ, ಕೋವಿಡ್ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿಯಿಂದ ವರ್ತನೆ ಮಾಡಿದ್ದಾರೆ. ಈ ಬಗ್ಗೆ ಚೀಫ್ ಸೆಕ್ರೆಟರಿ ವರದಿ ಬಂದ ನಂತರ ವರ್ಗಾವಣೆ ಮಾಡಿದ್ದು, ಆದರೆ ಅದೇ ಕಾರಣಕ್ಕೆ ನನ್ನ ವಿರುದ್ಧ ಭೂಹಗರಣದ ಆರೋಪ ಮಾಡಲಾಗಿದೆ. ಭೂ ಅಕ್ರಮದ ಕಾರಣಕ್ಕೆ ವರ್ಗಾವಣೆಯಾಗಿದೆ ಎಂದು ಬಿಂಬಿಸಿದ್ದಾರೆ. ಆ ಸಮಯದಲ್ಲಿ ನಾನು ಮಾನನಷ್ಟ ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದೆ. ಅದರಂತೆ ಮೈಸೂರಿನ ನ್ಯಾಯಾಲಯದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಹೂಡಿದ್ದೇನೆ ಎಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.