9:44 PM Sunday29 - March 2026
ಬ್ರೇಕಿಂಗ್ ನ್ಯೂಸ್
ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌

ಇತ್ತೀಚಿನ ಸುದ್ದಿ

ಸೀಟ್​ ಬೆಲ್ಟ್ ಬಗ್ಗೆ ಮಾತನಾಡುವುದಕ್ಕಿಂತ ರಸ್ತೆಗಳನ್ನು ಸರಿಪಡಿಸುವುದು ಮುಖ್ಯ: ನಟಿ ಪೂಜಾ ಭಟ್ 

08/09/2022, 17:17

ಮುಂಬೈ(reporterkarnataka.com):
ಸೀಟ್​ ಬೆಲ್ಟ್ ಬಗ್ಗೆ ಮಾತನಾಡುವುದಕ್ಕಿಂತ ರಸ್ತೆಗಳನ್ನು ಸರಿಪಡಿಸುವುದು ಮುಖ್ಯ ಎಂದು ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್​​ನ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಸಾವಿನ ಕುರಿತು ಉಲ್ಲೇಖಿಸಿ ಬಾಲಿವುಡ್ ನಟಿ, ನಿರ್ದೇಶಕಿ
ಪೂಜಾ ಭಟ್ ಟ್ವೀಟ್ ಮಾಡಿದ್ದಾರೆ.

ಪೂಜಾ ಅವರ ಹೇಳಿಕೆಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಸರ್ಕಾರದವರು ರಸ್ತೆ ನಿರ್ಮಾಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ಪೂಜಾ ಭಟ್ ಅವರು ಮಾಡಿರುವ ಈ ಟ್ವೀಟ್​ಗೆ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಬೆಂಬಲ ಸೂಚಿಸಿದ್ದಾರೆ.

ಇತ್ತೀಚೆಗೆ ಅಪಘಾತಗಳು ಹೆಚ್ಚುತ್ತಿವೆ. ಮುಂಬೈ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಟಾಟಾ ಸನ್ಸ್​​ನ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ 

(Cyrus Mistry) ನಿಧನ ಹೊಂದಿದ್ದರು. ಅವರು ಸೀಟ್​ಬೆಲ್ಟ್ ಧರಿಸದೇ ಇದ್ದಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದರ ಜತೆಗೆ ರಸ್ತೆಗೆ ನಿರ್ಮಿಸಲಾದ ದೋಷಪೂರಿತ ಸೇತುವೆ ಕೂಡ ಈ ಅಪಘಾತಕ್ಕೆ ಕಾರಣ ಎಂದು ವಿಧಿವಿಜ್ಞಾನದ ಪ್ರಾಥಮಿಕ ವರದಿ ಹೇಳಿತ್ತು. ಈ ಘಟನೆ ಬಳಿಕ ಕಳಪೆ ರಸ್ತೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಈಗ ನಟಿ, ನಿರ್ದೇಶಕಿ ರಸ್ತೆ ಅಪಘಾತದ ಬಗ್ಗೆ ಧ್ವನಿ ಎತ್ತಿದ್ದಾರೆ. ದೋಷಪೂರಿತ ರಸ್ತೆಗಳು ಅಪಘಾತಕ್ಕೆ ಕಾರಣ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

‘ಎಲ್ಲರೂ ಸೀಟ್ ಬೆಲ್ಟ್ ಹಾಗೂ ಏರ್​ಬ್ಯಾಗ್ ಬಗ್ಗೆ ಮಾತನಾಡುತ್ತಾರೆ. ಮುಖ್ಯವೇ…? ಖಂಡಿತವಾಗಿಯೂ ಮುಖ್ಯ. ಆದರೆ, ದೋಷಪೂರಿತ ರಸ್ಯೆ ಹಾಗೂ ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ. ರಸ್ತೆ, ಹೆದ್ದಾರಿ ನಿರ್ಮಿಸಲು ಕಳಪೆ ವಸ್ತುಗಳನ್ನು ಬಳಸಿದರೆ ಅದು ಅಪರಾಧವೆಂದು ಪರಿಗಣಿಸಲ್ಪಡುವುದು ಯಾವಾಗ? ಒಮ್ಮೆ ನಿರ್ಮಿಸಿದ ರಸ್ತೆಗಳನ್ನು ನಿರ್ವಹಿಸುವುದು ಕೂಡ ಮುಖ್ಯ’ ಎಂದು ಪೂಜಾ ಟ್ವೀಟ್ ಮಾಡಿದ್ದಾರೆ.

ಪೂಜಾ ಅವರ ಹೇಳಿಕೆಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಸರ್ಕಾರದವರು ರಸ್ತೆ ನಿರ್ಮಾಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ಪೂಜಾ ಅವರು ಮಾಡಿರುವ ಈ ಟ್ವೀಟ್​ಗೆ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ದೊಡ್ಡ ಆಂದೋಲನ ನಡೆಯಬೇಕು ಎಂಬ ಮಾತುಗಳು ಕೇಳಿ ಬಂದಿವೆ.

ಸೈರಸ್ ಮಿಸ್ತ್ರಿ ಅವರು ಕಳೆದವಾರ ಅಹಮದಾಬಾದ್​ನಿಂದ ಮುಂಬೈಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್​ಗೆ ಹೊಡೆದಿತ್ತು. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಸೈರಸ್ ಮಿಸ್ತ್ರಿ ಅವರು ಸ್ಥಳದಲ್ಲೇ ಮೃತಪಟ್ಟರು. ಕಾರಿನ ಹಿಂಬದಿಯಲ್ಲಿ ಕುಳಿತವರು ಸೀಟ್ ಬೆಲ್ಟ್​ ಧರಿಸುವುದನ್ನು ಕಡ್ಡಾಯ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು