ಇತ್ತೀಚಿನ ಸುದ್ದಿ
ನೀಟ್ ಫಲಿತಾಂಶ: ರಾಜಸ್ಥಾನದ ತನಿಷ್ಕಾ ಏರ್ ಪ್ರಥಮ, ಕರ್ನಾಟಕದ ಹೃಷಿಕೇಶ್ ತೃತೀಯ
08/09/2022, 11:45
ಹೊಸದಿಲ್ಲಿ(reporterkarnataka.com): ನೀಟ್ 2022 ಫಲಿತಾಂಶ ಪ್ರಕಟವಾಗಿದ್ದು,ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 9.93 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ರಾಜಸ್ಥಾನದ ತನಿಷ್ಕಾ ಮೊದಲ Rank ಪಡೆದಿದ್ದಾರೆ. ಕರ್ನಾಟಕದ ಹೃಷಿಕೇಶ್ ನಾಗಭೂಷಣ್ ಗಂಗುಲೆ ತೃತೀಯ Rank ಗಳಿಸಿದ್ದಾರೆ.
ದೆಹಲಿಯ ವತ್ಸ ಆಶಿಶ್ ಬಾತ್ರಾ ಎರಡು ಸ್ಥಾನ ಪಡೆದಿದ್ದಾರೆ. 17.64 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 9.93 ಲಕ್ಷಕ್ಕೂ ಹೆಚ್ಚು ಮಂದಿ ಉತ್ತೀರ್ಣರಾದರು. ಇದೇ ಮೊದಲ ಬಾರಿಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್, ದುಬೈ ಮತ್ತು ಕುವೈತ್ ಸಿಟಿಯಲ್ಲಿ ಪರೀಕ್ಷೆ ನಡೆಸಲಾಗಿದೆ.