1:57 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಅಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಪ್ರತ್ಯಕ್ಷ; ಬರ್ಕಣ ಜಲಪಾತ ಪ್ರವಾಸಿಗರಿಗೆ ಜಾಗ್ರತೆ ವಹಿಸಲು ಸೂಚನೆ

06/09/2022, 20:05

ಕಾರ್ಕಳ(reporterkarnataka.com): ಆಗುಂಬೆ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಆನೆಯೊಂದು ಪ್ರತ್ಯಕ್ಷ ವಾಗಿದ್ದು  ಆಗುಂಬೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಾಗುತ್ತಿದ್ದ ಪ್ರಯಾಣಿಕರು ಸ್ವಲ್ಪ ಹೊತ್ತು ಆತಂಕಕ್ಕೀಡಾದರು.

ಪ್ರತಿ  ವರ್ಷದ ಮಳೆಗಾಲದಲ್ಲಿ ಅನೆಯೊಂದು ಅಹಾರ ಅರಸಿಕೊಂಡು ಅಗುಂಬೆಯತ್ತ ಬರುತ್ತಿದ್ದು ಯಾವುದೇ ಹಾನಿಮಾಡದೆ  ಮಲ್ಲಂದೂರು ತಲ್ಲೂರು ನಾಕೂರು ಕಾಡಿನಲ್ಲಿ ಸಂಚರಿಸುತ್ತದೆ . ಮಳೆಗಾಲ‌ ಮುಗಿದ ಬಳಿಕ ಮತ್ತೆ ಕೆರೆಕಟ್ಟೆ ಮಾಳ ನಾರಾವಿಯತ್ತ ಸಾಗಿ ಹಿಂತಿರುಗುತ್ತದೆ. ಬರ್ಕಣ ಜೋಗಿಗುಂಡಿ ಜಲಪಾತ ವೀಕ್ಷಿಸಲು ಅಗಮಿಸುವ ಪ್ರವಾಸಿಗರು ಅರಣ್ಯಾಧಿಕಾರಿಗಳ ಮಾಹಿತಿ ಪಡೆದು ಸಾಗುವುದು ಒಳಿತು. 

ಅಗುಂಬೆ  ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರು ಜಾಗೃತೆ ವಹಿಸಬೇಕು.ಪ್ರಾಣಿಗಳಿಗೆ ಹಾನಿಯಾಗಬಾರದು . ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ  ಆನೆಯ ಚಲನವಲನಗಳ ಮಾಹಿತಿ ನೀಡಿ ಜಲಪಾತ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಮಲ್ಲಂದೂರು ಸಮೀಪದಲ್ಲಿ ಆನೆಯ ಚಲನವಲನಗಳಿದ್ದರೆ ಜಲಪಾತ ವೀಕ್ಷಣೆ ತಾತ್ಕಾಲಿಕ ಬಂದ್ ಮಾಡಲಾಗುತ್ತದೆ. ಅರಣ್ಯಾಧಿಕಾರಿ ಗಳು ,ಅರಣ್ಯ ವೀಕ್ಷಕರ ಸೂಚನೆಗಳನ್ನು ಪಾಲಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು