ಇತ್ತೀಚಿನ ಸುದ್ದಿ
ಗಣೇಶೋತ್ಸವ: ಬೆಂಗಳೂರು ಕಾಶಿ ಮಠದಲ್ಲಿ ಭಜನಾ ಕಾರ್ಯಕ್ರಮ; ಸಹಸ್ರ ಮೋದಕ ಹವನ
03/09/2022, 16:31

ಬೆಂಗಳೂರು(reporterkarnataka.com): ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಶ್ರೀ ಕಾಶಿ ಮಠ ವ್ಯವಸ್ಥಾಪನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ ಗೌಡ ಸಾರಸ್ವತ ಮಹಿಳಾ ವೃಂದದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಶನಿವಾರ ನಡೆಯಿತು.
ಮಧ್ಯಾಹ್ನ 12.15ಕ್ಕೆ ಸಹಸ್ರ ಮೋದಕ ಹವನ ನಡೆಯಿತು. ಮಧ್ಯಾಹ್ನ 1.30ರಿಂದ ಭಜನಾ ಕಾರ್ಯಕ್ರಮ ಮೇಳೈಸಿತು. 1.45ಕ್ಕೆ ಮಹಾ ನೈವೇದ್ಯ ಹಾಗೂ ಮಧ್ಯಾಹ್ನ 2 ಗಂಟೆಗೆ ಮಹಾಪೂಜೆ ನೆರವೇರಿತು.
ಬೆಂಗಳೂರು ಕಾಶಿ ಮಠ ವ್ಯವಸ್ಥಾಪನ ಸಮಿತಿ ವತಿಯಿಂದ ಗಣೇಶೋತ್ಸವ ಆಗಸ್ಟ್ 31ರಂದು ಆರಂಭಗೊಂಡಿದ್ದು, ಸೆ.4ರ ವರೆಗೆ ನಡೆಯಲಿದೆ. ಗಣೇಶೋತ್ಸವ ಅಂಗವಾಗಿ ನಿನ್ನೆ ವಿಶೇಷ ಚೆಂಡೆ ವಾದನ ನಡೆಯಿತು.