4:34 AM Monday10 - August 2026
ಬ್ರೇಕಿಂಗ್ ನ್ಯೂಸ್
Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ…

ಇತ್ತೀಚಿನ ಸುದ್ದಿ

ಯಜಮಾನನ ಆಕಸ್ಮಿಕ ಸಾವಿನಿಂದ ಆಧಾರಸ್ತಂಭ ಕಳೆದುಕೊಂಡ ಈ ಬಡ ಕುಟುಂಬಕ್ಕೆ ಸಹಾಯ ಮಾಡುವಿರಾ?

03/09/2022, 16:25

ಮಂಗಳೂರು(reporterkarnataka.com)

ಬದುಕು ಒಂದು ಜಟಕಾ ಬಂಡಿ ನಿಲ್ಲದಂತೆ ಸಾಗಿದೆ…ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ ಎಂಬ ಹಾಡಿದೆ. ಆದರೆ ಈ ವಿಧಿಯಾಟ ಕೆಲವೊಮ್ಮೆ

ಕ್ರೂರವಾಗಿದ್ದರೆ ಬದುಕು ಸಾಗಿಸುವುದೇ ಕಷ್ಟ ಎಂಬ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೊಂದು ಉದಾಹರಣೆ ನಗರದ ದೇರೆಬೈಲ್ ಕೊಂಚಾಡಿ ಸಮೀಪದ ಬೋರುಗುಡ್ಡೆ ನಿವಾಸಿಯಾದ ಸುಜಾತಾ ಅವರ ಕುಟುಂಬದಲ್ಲಿ ಇತ್ತೀಚೆಗೆ ಘಟಿಸಿದ ಆಕಸ್ಮಿಕ ಘಟನೆ.

ರಿಪೋರ್ಟರ್ ಕರ್ನಾಟಕ ಮೀಡಿಯಾ ನೆಟ್ ವರ್ಕ್(reporterkarnataka.com)ನ ಸಹ ಸಂಸ್ಥೆಯಾದ ಕಿನ್ನರಿ ಕಿಂಡರ್‌ಗಾರ್ಟನ್ ನಲ್ಲಿ ಶಿಕ್ಷಕಿಯ ಸಹಾಯಕಿಯಾಗಿ ದುಡಿಯುತ್ತಿದ್ದ ಸುಜಾತಾ ಅವರ ಪತಿ, 44ರ ಹರೆಯದ ತುಕರಾಮ ಅವರು ಅಧಿಕ ರಕ್ತದೊತ್ತಡದಿಂದ ಬ್ರೈನ್ ಎಮರೇಜ್ ಅಗಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ತುಕರಾಮ ಅವರಿಗೆ ಬಿಪಿ ಕಾಯಿಲೆ ಬಿಟ್ಟರೆ ಆರೋಗ್ಯವಾಗಿಯೇ ಇದ್ದರು. ಆಗಸ್ಟ್ 20ರಂದು ರಾತ್ರಿವರೆಗೂ ಆರೋಗ್ಯದಿಂದಲೇ ಇದ್ದ ಅವರು ಆಗಸ್ಟ್ 21ರಂದು ಬೆಳಗ್ಗೆ ಅಧಿಕ ರಕ್ತದೊತ್ತಡಕ್ಕೆ ಗುರಿಯಾದರು. ಇದರಿಂದ ಮೆದುಳಿನಲ್ಲಿ ಅಧಿಕ ಪ್ರಮಾಣದಲ್ಲಿ ರಕ್ತ ಸ್ರಾವ ಉಂಟಾಗಿತ್ತು. ತಕ್ಷಣ ಅವರನ್ನು ಸಮೀಪದ ಎ.ಜೆ. ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 21ರಂದು ಬೆಳಗ್ಗೆ ಕೊನೆಯುಸಿರೆಳೆದರು. 
ತುಕರಾಮ ಅವರ ಕುಟುಂಬ ಇಂದು ಅನಾಥವಾಗಿದೆ. ಪತ್ನಿ ಸುಜಾತಾ ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ವಯಸ್ಸಿನ ಪುತ್ರ ಇದ್ದಾನೆ. ಇರಲು ಸ್ವಂತ ಮನೆಯಿಲ್ಲ, ಸುಜಾತಾ ಅವರಿಗೆ ಅಣ್ಣ ತಮ್ಮಂದಿರಿಲ್ಲ. ಅನಾರೋಗ್ಯಪೀಡಿತ ತಾಯಿ ಇದ್ದಾರೆ. ಬಡ ಕುಟುಂಬದ ಇವರಿಗೆ ಜೀವನ ಸಾಗಿಸುವುದು, ಮಗನಿಗೆ ಶಿಕ್ಷಣ ಕೊಡುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಿಪೋರ್ಟರ್ ಕರ್ನಾಟಕ ಸಾರ್ವಜನಿಕರ ನೆರವು ಯಾಚಿಸುತ್ತಿದೆ. ಆ ಮೂಲಕ ಸುಜಾತಾ ಅವರ ಕುಟುಂಬಕ್ಕೆ ನೆರವು ನೀಡುವ ಗುರಿಯನ್ನು ಹೊಂದಿದೆ. ಹಾಗೆ ಈ ಬಡ ಕುಟುಂಬವು ಕೊಡುಗೈ ದಾನಿಗಳು ಹಾಗೂ ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿದೆ.
ನೆರವು ನೀಡುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಹಣ ಜಮಾಯಿಸಿ ನೊಂದ ಈ ಕುಟುಂಬದೊಂದಿಗೆ ಕೈಜೋಡಿಸುವ ಅಗತ್ಯವಿದೆ.

KARNATAKA BANK, A/C 5062000100037101,
Account type: Current account
IFSC : KARB0000506, BRANCH : KADRI, MANGALURU

ಇತ್ತೀಚಿನ ಸುದ್ದಿ

ಜಾಹೀರಾತು